ನಗರದ ವಿವಿದೆಡೆ ಸಂಭ್ರಮದ ರಾಮನಾಮ ಜಪಯಾತ್ರೆ ಮುಗಿಲು ಮುಟ್ಟಿದ ಜೈಶ್ರೀರಾಮ್ ಘೋಷಣೆ

ವಿಜಯ ಸಂಘರ್ಷ
ಭದ್ರಾವತಿ: ಅಯೋಧ್ಯೆಯ ಶ್ರೀರಾಮ ಮಂದಿರ ಲೋಕಾರ್ಪಣೆ,ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವ ಹಿನ್ನೆಲೆಯಲ್ಲಿ ನಗರದ ಜನ್ನಾಪುರ ಕಮಷಿಯಲ್ ಸ್ಟ್ರೀಟ್ ನಲ್ಲಿ ಕೇಸರಿ ಧ್ವಜಗಳ ಬಂಟಿoಗ್ಸ್, ಲೈಟಿಂಗ್ಸ್ ರಸ್ತೆಯ ಎರಡೂ ಬದಿಗಳನ್ನು ಸಿಂಗರಿಸಲಾಗಿತ್ತು.

ನಗರದ ತರೀಕೆರೆ ರಸ್ತೆಯ ಗಾಂಧಿ ವೃತ್ತದಲ್ಲಿ ಶಾಸಕ ಬಿ.ಕೆ.ಸಂಗಮೇಶ್ವರ್ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ಜರುಗಿದವು.

ಪ್ರತಿ ಮನೆ ಮನೆಗಳ ಮೇಲೆ ಶ್ರೀರಾಮ್ ಧ್ವಜ ರಾರಾಜಿಸುತ್ತಿತ್ತು.ನಗರದ ವಿವಿಧ ದೇವಾಲಯದ ಆವರಣಗಳಲ್ಲಿ ಅಳವಡಿಸ ಲಾಗಿದ್ದ ಬೃಹತ್ ಎಲ್ ಇ ಡಿ ಪರದೆಯ ಮೂಲಕ ಶ್ರೀರಾಮ ಮಂದಿರದ ನೇರ ಪ್ರಸಾರವನ್ನು ಎಲ್ಲರೂ ಒಂದೆಡೆ ಕುಳಿತು ನೋಡಿ ಧನ್ಯತಾ ಭಾವ ಮೆರೆದರು.

ನಂತರ ದೇವಾಲಯದಲ್ಲಿ ಮಹಾ ಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನಡೆಸಲಾಯಿತು.

ಆಗಮಿಸಿದ್ದ ಭಕ್ತರಿಗೆ ಪಾನಕ, ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಎಲ್ಲಾ ದೇವಾಲಯಗಳ ಸಮಿತಿ, ಸದ್ಭಕ್ತರು, ಸಾರ್ವಜನಿಕರು, ಧರ್ಮರಕ್ಷಾ ಸಮಿತಿ ಕಾರ್ಯಕರ್ತರು, ಹಿಂದೂ ಸಮಾಜದ ಕಾರ್ಯಕರ್ತರು ಸೇರಿ ಕಾರ್ಯಕ್ರಮ ಯಶಸ್ವಿಯಾಯಿತು.

ಮುಖ್ಯ ರಸ್ತೆಗಳಲ್ಲಿ ಕೇಸರಿ ಶಾಲು ಧರಿಸಿದ ಯುವಕರು ಬೈಕ್ ಗಳಲ್ಲಿ ಶ್ರೀರಾಮ್ ಘೋಷಣೆ ಕೂಗುತ್ತ ಭಕ್ತಿ ಭಾವ ಮೆರೆದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು