ಉಕ್ಕಿನ ನಗರದ ಯುವಕನ ಕೈಚಳಕ: ಬೆಳ್ಳಿಯಲ್ಲಿ ಅರಳಿದ ಅಯೋಧ್ಯೆ ರಾಮಮಂದಿರ

ವಿಜಯ ಸಂಘರ್ಷ
ಆರ್.ವಿ.ಕೃಷ್ಣ ಭದ್ರಾವತಿ.
ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಉಕ್ಕಿನ ನಗರದ ಯುವಕನ ಕೈಯಲ್ಲಿ ಬೆಳ್ಳಿ ಮತ್ತು ಬಂಗಾರ ದಲ್ಲಿ ಅಯೋಧ್ಯೆಯ ರಾಮಮಂದಿರ ಅರಳಿದೆ. ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಕಲೆಯಲ್ಲಿ ತನ್ನ ಕೈಚಳಕ ತೋರಿದ್ದು. ಈ ನಡುವೆ ಯುವಕನ ಬೆಳ್ಳಿಯಲ್ಲಿ ರಾಮಮಂದಿರ ಅರಳಿದೆ.

ಅಯೋಧ್ಯೆಯಲ್ಲಿ ಜ.22 ರ ಸೋಮವಾರ ಪ್ರಭು ಶ್ರೀರಾಮ ಚಂದ್ರನ ಪ್ರಾಣ ಪ್ರತಿಷ್ಠಾಪನೆ ಆಗಲಿದೆ. ಈ ಅದ್ಬುತ ‌ಕ್ಷಣಕ್ಕಾಗಿ ದೇಶದ ಕಾತುರದಿಂದ ಕಾಯುತ್ತಿದ್ದಾರೆ. ಜೊತೆಗೆ ಒಬ್ಬೊಬ್ಬರು ತನ್ನದೇ ರೀತಿಯಲ್ಲಿ ಭಕ್ತಿ ಮೆರೆಯುತ್ತಿದ್ದಾರೆ.

ಭದ್ರಾವತಿಯ ಯುವಕ ಸಚಿನ್ ವರ್ಣೇಕರ್ ತಮ್ಮ ಕೈಚಳಕ ತೋರಿದ್ದಾರೆ. ಸುಮಾರು 140 ಗ್ರಾಂ ತೂಕದ ಬೆಳ್ಳಿಯಿಂದ ರಾಮ ಮಂದಿರ ನಿರ್ಮಿಸಿದ್ದಾರೆ. ಇದಕ್ಕಾಗಿ ಒಂದು ತಿಂಗಳ ಕಾಲ ಶ್ರಮ ಹಾಕಿದ್ದು, ಬೆಳ್ಳಿಯಲ್ಲಿ ರಾಮ ಮಂದಿರ ಅದ್ಬುತವಾಗಿ ಮೂಡಿ ಬಂದಿದೆ. ಐದೂವರೆ ಇಂಚು ಎತ್ತರ, ನಾಲ್ಕು ಇಂಚು ಅಗಲ, ಆರು ಇಂಚು ಉದ್ದದಲ್ಲಿ ರಾಮ ಮಂದಿರ ನಿರ್ಮಿಸಿದ್ದಾರೆ.

ರಾಮ ಮಂದಿರಕ್ಕೆ ಲೈಟಿಂಗ್ ವ್ಯವಸ್ಥೆ ಸಹ ಮಾಡಿದ್ದಾರೆ. ಇದೀಗ ನಿರ್ಮಿಸಿರುವ ರಾಮ ಮಂದಿರ ನೋಡುಗರ ಗಮನ ಸೆಳೆಯುತ್ತಿದೆ. ಗೋಪುರ ಮತ್ತು ಕೇಸರಿ ಧ್ವಜ ಪ್ರಮುಖ ಆಕರ್ಷಣೆಯಾಗಿದೆ. ಒಂದು ತಿಂಗಳ ಅವಧಿಯಲ್ಲಿ ಬೆಳ್ಳಿಯಲ್ಲಿ ಅಯೋಧ್ಯೆಯ ರಾಮಮಂದಿರ ಅರಳಿ ನಿಂತಿದೆ. ಸದ್ಯ ಈ ದೇಗುಲ ಎಲ್ಲರ ಗಮನ ಸೆಳೆಯುತ್ತಿದೆ.
ಸಚಿನ್ 18 ಗ್ರಾಂ ಚಿನ್ನದಲ್ಲಿ ಪುಟ್ಟ ರಾಮ ಮಂದಿರ ಸಿದ್ದಪಡಿಸಿದ್ದು ಸಾಧನೆಯಾಗಿತ್ತು. ಸಣ್ಣ ವಯಸ್ಸಿನಲ್ಲೆ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಕಲೆಯಲ್ಲಿ ಕರಗತವಾಗಿದ್ದಾನೆ. ಹಿಂದೆ 
18 ಗ್ರಾಂ ಚಿನ್ನದಲ್ಲಿ ರಾಮಮಂದಿರ ಕಲಾಕೃತಿಯು ಎಲ್ಲರ ಮೆಚ್ಚುಗೆ ಗಮನ ಸೆಳೆದಿತ್ತು. ಈ ಅಯೋಧ್ಯೆಯ ರಾಮಮಂದಿರವು ಎರಡೂವರೆ ಇಂಚು ಉದ್ದ, ಒಂದು ಮುಕ್ಕಾಲೂ ಇಂಚು ಎತ್ತರದಿಂದ ಕೂಡಿತ್ತು. 45 ದಿನಗಳಲ್ಲಿ ಚಿನ್ನದ ಮಂದಿರ ಸಿದ್ಧಪಡಿಸಲಾಗಿತ್ತು. ಚಿನ್ನದ ರಾಮಮಂದಿರಕ್ಕೆ ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ ಬಂದಿತ್ತು.

ಈ ಹಿಂದೆ ಅತೀ ಸೂಕ್ಷ್ಮ ಕಲೆಯಲ್ಲಿ ಶಿವಲಿಂಗ, ಅಯ್ಯಪ್ಪ ಸ್ವಾಮಿ, ಕೇದರಾನಾಥ್ ದೇವಸ್ಥಾನ ಹಾಗೂ ಅಮರ್ ಜವಾನ್ ಸ್ಮಾರಕ. ವಿಶ್ವಕಪ್ ಬೆಳ್ಳಿಯಲ್ಲಿ ಲಾಲಚೌಕ್ ಕಲಾಕೃತಿ ಮೂಡಿ ಬಂದಿದ್ದವು.

ಅಲ್ಲದೆ ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಸಮ್ಮುಖದಲ್ಲಿ ಶಿವಲಿಂಗ ಮೂರ್ತಿ ನೀಡಲಾಗಿದ್ದು, ಶ್ರೀಕ್ಷೇತ್ರದ ಮ್ಯೂಸಿಯಂ ನಲ್ಲಿಡಲಾಗಿದೆ. ಒಂದರ ಬಳಿಕ ಒಂದು ವಿಶೇಷ ಸಂದರ್ಭದಲ್ಲಿ ಸಚಿನ್ ಕೈಯಲ್ಲಿ ಹೊಸ ಹೊಸ ಕಲಾಕೃತಿಗಳು ಹೊರಹೊಮ್ಮುತ್ತಿರುವುದು ವಿಶೇಷವಾಗಿದೆ.

ಚಿನ್ನ ಮತ್ತು ಬೆಳ್ಳಿಯಲ್ಲಿ ರಾಮಮಂದಿರ ಕಲಾಕೃತಿಗಳು ಮಲೆನಾಡಿನ ಜನರ ಗಮನ ಸೆಳೆದಿವೆ. ರಾಮಮಂದಿರ ಉದ್ಘಾಟನೆ ಸಮಯದಲ್ಲಿ ಅದೇ ಮಾದರಿಯ ಬೆಳ್ಳಿಯಲ್ಲಿ ರಾಮಮಂದಿರವು ಅರಳಿರುವುದು ವಿಶೇಷವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು