ಸಿದ್ದರಾಮನ ತತ್ವಾದರ್ಶನ ಅಳವಡಿಸಿ ಕೊಂಡಲ್ಲಿ ಮಾತ್ರ ಜಯಂತಿಗಳಿಗೆ ಅರ್ಥಪೂರ್ಣ

ವಿಜಯ ಸಂಘರ್ಷ
ಶಿಕಾರಿಪುರ:12ನೇ ಶತಮಾನದ ವಚನ ಚಳುವಳಿಯ ಕ್ರಿಯಾಶೀಲ ವ್ಯಕ್ತಿ. ಜಗತ್ತಿನ ಶ್ರೇಷ್ಠ ಸಮಾಜವಾದಿ ಚಿಂತಕ, ಸಾವಿರಾರು ಕಾರ್ಮಿಕರ ನಾಯಕ ಸಿದ್ದರಾಮ. ಕೆರೆ-ಕಟ್ಟೆ-ಬಾವಿಗಳು, ಉದ್ಯಾನವನಗಳು, ದೇವಾಲಯಗಳ ನಿರ್ಮಾಣ, ಸಾವಿರಾರು ಜನರಿಗೆ ದಾಸೋಹ ಹಾಗೂ ಶಿಕ್ಷಣ ನೀಡುವ ಮೂಲಕ ಜನಮುಖಿ- ಜೀವನ್ಮುಖಿ ಕೆಲಸಗಳಿಂದ ಜನಮಾನಸದಲ್ಲಿ ಇಂದಿಗೂ ಹಚ್ಚ ಹಸಿರಾಗಿರುವ ವ್ಯಕ್ತಿತ್ವ ಸಿದ್ದರಾಮನದು. ಎಂದು ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜ್ ಉಪನ್ಯಾಸಕ ಕೆ.ಹೆಚ್.ಪುಟ್ಟಪ್ಪ ತಿಳಿಸಿದರು.

ಪಟ್ಟಣದ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸಮಿತಿ , ತಾಲೂಕು ನೊಳಂಬ ವೀರಶೈವ ಲಿಂಗಾಯತ ಸಮಾಜ ಹಾಗೂ ಭೋವಿ ಸಮಾಜ ಶಿಕಾರಿಪುರ ಇವರುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಸಲಾಗಿದ್ದ ತಾಲೂಕು ಸಭಾಂಗಣದಲ್ಲಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯನ್ನು ಉದ್ದೇಶಿಸಿ ತಮ್ಮ ವಿಶೇಷ ಉಪನ್ಯಾಸ ನೀಡಿದರು.  

ಮನುಷ್ಯನಾಗಿ ಹುಟ್ಟಿದ ಮೇಲೆ ಕಾಲ ವ್ಯರ್ಥ ಮಾಡುವುದಕ್ಕಿಂತ ಏನಾದರೂ ಕೆಲಸ ಮಾಡುತ್ತಿರಬೇಕು ಎಂಬುದು ಅವನ ಸಿದ್ದಸೂತ್ರವಾಗಿತ್ತು. ಸಿದ್ದರಾಮನ ತತ್ವ ಮತ್ತು ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿ ಕೊಂಡರೆ ನಾವು ಆಚರಿಸುವ ಜಯಂತಿಗಳಿಗೆ ಅರ್ಥ ಬರುತ್ತದೆ ಎಂದು ತಿಳಿಸಿದರು.

ತಹಶೀಲ್ದಾರ ಮಲ್ಲೇಶ್ ಬೀರಪ್ಪ ಪೂಜಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 12ನೇ ಶತಮಾನದ ಶರಣರು ನಡೆಸಿದ ಕ್ರಾಂತಿ ಸಮಾಜದಲ್ಲಿ ಸಾಕಷ್ಟು ಬದಲಾವಣೆಯನ್ನು ತಂದಿದೆ ಬಸವಣ್ಣನವರ ಕಾಯಕ ತತ್ವವನ್ನು ನಿಜ ಅನುಷ್ಠಾನಗೊಳಿದವರು ಕಾಯಕ ಯೋಗಿ ಎಂದೇ ಪ್ರಸಿದ್ಧರಾದ ಸಿದ್ದರಾಮ ಎಂದರು.          

ಭೋವಿ ಸಮಾಜದ ತಾಲೂಕು ಅಧ್ಯಕ್ಷ ಈಶಪ್ಪ, ಸಿದ್ದರಾಮ ನಮ್ಮ ಸಮಾಜದ ಸಾಂಸ್ಕೃತಿಕ ನಾಯಕರಾಗಿದ್ದು, ಸಾಮಾನ್ಯ ಹಳ್ಳಿಯಾದ ಅಂದಿನ ಸೊನ್ನಲಿಗೆ ಇಂದಿನ ಸೊಲ್ಲಾಪುರವನ್ನು ಬಹುದೊಡ್ಡ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರವನ್ನಾಗಿ ಪ್ರಸಿದ್ಧಿಗೊಳಿಸಿರುವುದು ನಮ್ಮ ಸಮಾಜದ ಹೆಮ್ಮೆ ಎಂದರು.

ಕಾರ್ಯಕ್ರಮದಲ್ಲಿ ಭೋವಿ ಸಮಾಜದ ಮುಖಂಡರಾದ ಸಣ್ಣ ಹನುಮಂತಪ್ಪ ತೊಗರ್ಸಿ, ಶಾಂತೇಶಪ್ಪ ಪು ಪುನೇದಹಳ್ಳಿ, ಪಾಪಯ್ಯ, ಚಿನ್ನಪ್ಪ, ಹಾಲಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು