ದ್ವಿಚಕ್ರ ವಾಹನ ಚಾಲಕರು- ಹಿಂಬದಿ ಸವಾರರು ಹೆಲ್ಮೆಟ್ ಧರಿಸಿ:ಡಾ.ಸಿ.ಆರ್. ಗುರುರಾಜ್

ವಿಜಯ ಸಂಘರ್ಷ
ಭದ್ರಾವತಿ: ದ್ವಿಚಕ್ರ ವಾಹನ ಚಾಲಕರು ಮತ್ತು ಹಿಂಬದಿ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುವುದರಿಂದ ಅಪಘಾತಗಳಿಂದ ಪಾರಾಗಲು ಸಾಧ್ಯ ಎಂದು ಶರಾವತಿ ದಂತ ವಿದ್ಯಾಲಯದ ಬಾಯಿ ಮತ್ತು ಮುಖ ಶಸ್ತ್ರ ಚಿಕಿತ್ಸ ತಜ್ಞ ಡಾ.ಸಿ. ಆರ್. ಗುರುರಾಜ್ ಹೇಳಿದರು.

ಅವರು ಮಂಗಳವಾರ ಸೆಂಟ್ ಚಾಲ್ಸ್ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಶರಾವತಿ ದಂತ ವಿದ್ಯಾಲಯ, ಸೆಂಟ್ ಚಾಲ್ಸ್ ಪದವಿ ಪೂರ್ವ ಕಾಲೇಜು ಹಾಗೂ ಸಂಚಾರಿ ಪೊಲೀಸ್ ಠಾಣೆ ಆಶ್ರಯದಲ್ಲಿ ನಡೆದ ರಸ್ತೆ ಸುರಕ್ಷಿತ ನಿಯಮಗಳ ಜಾಗೃತಿ ಕಾರ್ಯಕ್ರಮ ದಲ್ಲಿ ಮಾತನಾಡಿದರು.

ಯಾವುದೇ ವಾಹನ ಚಾಲಕರು ವಾಹನ ಚಲಾಯಿಸುವ ಸಂದರ್ಭದಲ್ಲಿ ಸುರಕ್ಷತೆ ಕಾಪಾಡಿಕೊಳ್ಳಬೇಕೆಂದರು.

ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಶಾಂತಲಾ ಮಾತನಾಡಿ, ಪ್ರತಿ ವಾಹನ ಚಾಲಕರು ಸಂಚಾರಿ ನಿಯಮ ಪಾಲಿಸುವ ಮೂಲಕ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾoಶುಪಾಲ ಡಾ.ಜಿ.ಎಸ್. ಗಿರೀಶ್,ಡಾ.ಫಿಲೋಮೀನ, ಎಐಸಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಅಂಥೋಣಿ ವಿಲ್ಸನ್ ಇದ್ದರು. ಜ್ಯೋತಿ ಸ್ವಾಗತಿಸಿದರೆ, ಕಾವ್ಯ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು