ಅವೈಜ್ಞಾನಿಕ ಮಸೂದೆ ವಾಪಸ್ ಪಡೆಯುವಂತೆ ಆಗ್ರಹಿಸಿ ಲಾರಿ ಮಾಲೀಕರ ಸಂಘದಿಂದ ಪ್ರತಿಭಟನೆ

ವಿಜಯ ಸಂಘರ್ಷ

ಶಿಕಾರಿಪುರ: ಹಿಟ್ ಅಂಡ್ ರನ್ ಪ್ರಕರಣದಲ್ಲಿ ಚಾಲಕರಿಗೆ 10 ವರ್ಷ ಜೈಲು ಮತ್ತು 7 ಲಕ್ಷ ದಂಡ ವಿಧಿಸಿರುವ ಮಸೂದೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಬಾರದೆಂದು ಆಗ್ರಹಿಸಿ ಶಿಕಾರಿಪುರ ಜೈ ಕರ್ನಾಟಕ  ಲಾರಿ ಮಾಲೀಕರ ಸಂಘದ ವತಿಯಿಂದ ತಾಲೂಕು ಕಚೇರಿಯ ಮುಂಬಾಗ ಬೃಹತ್ ಪ್ರತಿಭಟನೆ ನಡೆಸಿ ತಹಶೀಲ್ದಾರರ ಮುಖೇನ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.


   ಪ್ರತಿಭಟನೆಯಲ್ಲಿ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಎಸ್ಎನ್ ಬಾಬು ರವರು ಮಾತನಾಡಿ ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ಹಿಟ್ ಅಂಡ್ ರನ್ ಪ್ರಕರಣದ ಚಾಲಕರಿಗೆ ಹತ್ತು ವರ್ಷ ಜೈಲು ಮತ್ತು 7 ಲಕ್ಷ ದಂಡ ವಿಧಿಸಿರುವ ಮಸೂದೆ ವಾಹನ ಚಾಲಕರಿಗೆ ಮತ್ತು ಮಾಲೀಕರಿಗೆ ಮಾರಕವಾಗಿದ್ದು ಈ ಕಾನೂನು ಮಸೂದೆ ಕೇಂದ್ರ ಸರ್ಕಾರ ಕೂಡಲೇ ವಾಪಸ್ಸು ಪಡೆಯದಿದ್ದರೆ ಉಗ್ರ ಹೋರಾಟ ಮಾಡಲು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.


   ಯಾವುದೇ ವಾಹನ ಮಾಲೀಕರಾಗಲಿ ಚಾಲಕರಾಗಲಿ ಉದ್ದೇಶಪೂರ್ವಕವಾಗಿ ಯಾವುದೇ ಅಪಘಾತಗಳನ್ನು ಮಾಡುವುದಿಲ್ಲ. ಅನಿರೀಕ್ಷಿತವಾಗಿ ಇಂತಹ ಪ್ರಕರಣಗಳು ಆದಾಗ ಲಾರಿ ಚಾಲಕನನ್ನು ಬಂಧಿಸಿ ಹತ್ತು ವರ್ಷ ಜೈಲು 7 ಲಕ್ಷ ದಂಡ ಕಟ್ಟುವಂತೆ ನಿರೂಪಿಸಿರುವ ಈ ಮಸೂದೆ ಹಾಸ್ಯಭರಿತ ವಾಗಿದೆ. ಕೇವಲ 500 ರೂ ಗಳಿಗೆ ಚಾಲಕನಾಗಿ ಬರುವ ಚಾಲಕರು ತಮ್ಮ ಒಪ್ಪತ್ತಿನ ಊಟಕ್ಕೆ ದುಡಿಯುವುದೇ ಕಷ್ಟ ಇರುವಾಗ ಇನ್ನು 7 ಲಕ್ಷ ರೂಗಳ ದಂಡ ಎಲ್ಲಿಂದ ಕಟ್ಟುತ್ತಾರೆ ಎಂದು ಪ್ರಶ್ನಿಸಿದರು. ಹತ್ತು ವರ್ಷ ಜೈಲುವಾಸವಾದರೆ ಆತನ ಕುಟುಂಬ ನಡೆಸುವವರು ಯಾರು ಕೇಂದ್ರ ಸರ್ಕಾರ ಎಲ್ಲಿಯೋ ಕೂತು ವಾಹನ ಚಾಲಕರ ಸಮಸ್ಯೆ ಬಡತನ ವಾಸ್ತು ಸ್ಥಿತಿ ಅರಿಯದೆ ಮನ ಬಂದಂತೆ ಕಾನೂನು ರೂಪಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.


   ಉಪಾಧ್ಯಕ್ಷ ಸಂತೋಷ್ ಮಾತನಾಡಿ ಈ ಅವೈಜ್ಞಾನಿಕ ಮಸೂದೆ ಹಾಗೂ ಕಾನೂನು ವಾಪಸ್ ಪಡೆಯುವಂತೆ ಒತ್ತಾಯಿಸಿ ಈಗಾಗಲೇ ದೇಶಾದ್ಯಂತ ವಾಹನ ಮಾಲೀಕರು ಹಾಗೂ ಚಾಲಕರು ಆಕ್ರೋಶ ವ್ಯಕ್ತಪಡಿಸಿ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು