ವಿಜಯ ಸಂಘರ್ಷ
ಚಂದ್ರಶೇಖರ್ ಎಸ್ .ಡಿ., ಆನಂದಪುರ
ಇಂದಿನ ದಿನಮಾನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಲೇ ಬರುತ್ತಿದೆ. ಇದಕ್ಕೆ ಒಂದೆಡೆ ಅತ್ಯಾಧುನಿಕ ಸೌಲಭ್ಯಗಳನ್ನು ತೋರ್ಪಡಿಸುತ್ತಿರುವ ಖಾಸಗಿ ಶಾಲೆಗಳ ಹಾವಳಿ ಮತ್ತೊಂದೆಡೆ ಸರ್ಕಾರದ ನಿರ್ಲಕ್ಷ÷್ಯ ಧೋರಣೆಗಳೂ ಕೂಡ ಹೌದು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಕೆಲವೆಡೆ ಅಗತ್ಯ ಸಂಖ್ಯೆಯ ಶಿಕ್ಷಕರಿದ್ದರೆ ಮೂಲಭೂತ ಸೌಲಭ್ಯಗಳಿರೊಲ್ಲ, ಸೌಲಭ್ಯವಿದ್ದಲ್ಲಿ ಶಿಕ್ಷಕ ರಿರುವುದಿಲ್ಲ ಅಥವಾ ಎರಡೂ ಇಲ್ಲದಿರುವ ಕಾರಣವೇ ಪೋಷಕರು ಸರ್ಕಾರಿ ಶಾಲೆಗಳ ಮೇಲೆ ಮೂಗು ಮುರಿಯುವಂತಾಗಿದೆ.
ಇದಕ್ಕೆ ಅಪವಾದವೆಂಬoತೆ ಶಿಕ್ಷಕರ ಕೊರತೆ ಇಲ್ಲದೇ ಗುಣಾತ್ಮಕ ಶಿಕ್ಷಣ ನೀಡುತ್ತಿರುವ ಆನಂದಪುರದ ಕೆಪಿಎಸ್ ನಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಾಗಬಾರದು ಎಂಬ ಉತ್ಕಟಾಕಾಂಕ್ಷೆಯಿoದ ಶಾಲೆಯ ಹಿರಿಯ ವಿದ್ಯಾರ್ಥಿ ಪ್ರಕಾಶ್ ರುಕ್ಮಯ್ಯರವರು ಏಕ ಕಾಲದಲ್ಲಿ ಎಲ್ಲಾ ಮಕ್ಕಳು ಒಂದೆಡೆ ಕುಳಿತು ಊಟಮಾಡಲು ಅನುಕೂಲವಾಗುವಂತಹ ಅತ್ಯುತ್ತಮ ಸೌಲಭ್ಯದ 1 ಕೋಟಿ ರು. ವೆಚ್ಛದ ಭೋಜನ ಶಾಲೆಯ ನಿರ್ಮಾಣಕ್ಕೆ ಕಾರಣೀಕರ್ತರಾಗಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳು ಸರ್ಕಾರಿ ಶಾಲೆಗಳು ವಿದ್ಯೆ ಮಾತ್ರ ನೀಡುವುದಿಲ್ಲ ಅದಕ್ಕಿಂತ ಮುಖ್ಯವಾಗಿ ಬದುಕಿನ ಕಲೆಯನ್ನು ಕಟ್ಟಿಕೊಡುತ್ತದೆ ಅಂಥ ಚೈತನ್ಯ ಇರುವುದು ಸರ್ಕಾರಿ ಶಾಲೆಗಳಲ್ಲಿ ಮಾತ್ರ ಎಂಬುದನ್ನು ಕಂಡುಕೊoಡಿರುವ ಪ್ರಕಾಶ್ ರವರು ಬೆಂಗಳೂರು ಮೂಲದ ರೆ.ಕ್ಯೂ ಕಂಪೆನಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ತಮ್ಮ ಸಂಸ್ಥೆಯ ವತಿಯಿಂದ ಈ ಕೊಡುಗೆಯನ್ನು ನೀಡಿದ್ದಾರೆ.
ಶುಕ್ರವಾರದಂದು ಭೋಜನ ಶಾಲೆಯ ಉದ್ಘಾಟನೆ ನಡೆಯಲಿದ್ದು ಶಾಲಾ ವಿದ್ಯಾರ್ಥಿಗಳು, ಶಿಕ್ಷಕ ವೃಂದ ಹಾಗೂ ಪೋಷಕರು ಸಂಭ್ರ‍್ರಮಿಸುತ್ತಿದ್ದಾರೆ. ಸಾರ್ವಜನಿಕರು ಹಳೆಯ ವಿದ್ಯಾರ್ಥಿಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ.
ಅವರು ಕಳೆದ 2 ವರ್ಷಗಳ ಹಿಂದೆ ರೆ.ಕ್ಯೂ. ಕಂಪೆನಿಯು ನೀಡಿದ ವಿಶೇಷ ಅನುದಾನದ ರೂಪದಲ್ಲಿ ಕೊಡಮಾಡಿದ 14 ಲಕ್ಷ ರೂಗಳಲ್ಲಿ ನೂತನ ಅಕ್ಷರ ದಾಸೋಹದ ಅಡುಗೆಕೋಣೆ ಉದ್ಘಾಟನೆ ಮಾಡಿ ಅಡುಗೆ ಸಿದ್ದಪಡಿಸಲು ೪ ಲಕ್ಷ ರೂ ಬಾಯ್ಲರ್ ಸಹಾಯ ಧನ ಕೊಡಿಸಿದ್ದರು. ಅಂದೇ ವ್ಯಯಕ್ತಿಕವಾಗಿ 1 ಲಕ್ಷ ರೂಗಳ ದೇಣಿಗೆಯನ್ನು ನೀಡಿ ಧ್ವಜ ಸ್ಥಂಭವನ್ನು ಸಹ ಉದ್ಘಾಟಿಸಿದ್ದರು.
ಆ ಸಂದರ್ಭದಲ್ಲಿ ತಮ್ಮ ಸಂಸ್ಥೆಯಿoದ ಭೋಜನ ಶಾಲೆಯನ್ನು ನಿರ್ಮಿಸಿಕೊಡುವು ದಾಗಿ ಮಾತು ನೀಡಿ ಇಂದು ಸಾಕಾರ ಗೊಳಿಸಿದ್ದಾರೆ.
ಹೇಳಿಕೆ:-
“ವಿದ್ಯಾಭ್ಯಾಸದ ಸಮಯದಲ್ಲಿ ಮನೆಯ ಆರ್ಥಿಕತೆ ಸರಿ ಇರಲಿಲ್ಲ ಆಗ ದೇವಸ್ಥಾನದಲ್ಲಿ ಊಟ ಮಾಡಿ, ವಿದ್ಯಾಭ್ಯಾಸ ಮಾಡಿಕೊಂಡು ಇಂದು ಉತ್ತಮ ಸ್ಥಾನದಲ್ಲಿದ್ದೇನೆ . ನಾನು ಈಗ ಈ ಹಂತದಲ್ಲಿರಲು ನನ್ನ ತಂದೆ-ತಾಯಿ, ಶಿಕ್ಷಕರ ಪರಿಶ್ರಮವಿದೆ. ನಾನು ಓದಿದ ಶಾಲೆ ಚೆನ್ನಾಗಿರಬೇಕು ನಾವು ಅನುಭವಿಸಿದ ಕೊರತೆ ಇಂದಿನ ಮಕ್ಕಳಿಗಾಗಬಾರದು ಎಂಬ ಕಳಕಳಿ ನನ್ನದಾಗಿದೆ. ನನ್ನ ಶಾಲೆಗೆ ನಮ್ಮ ಸಂಸ್ಥೆಯ ಕೊಡುಗೆ ಚಿರಸ್ಮರಣೀಯವಾದುದು”
-ಪ್ರಕಾಶ್‌ರುಕ್ಮಯ್ಯ, ಸಿ,ಇ,ಓ. ರೆ.ಕ್ಯೂ.ಕಂಪೆನಿ, ಬೆಂಗಳೂರು.
“ ಸ್ನೇಹಿತ ಪ್ರಕಾಶ್‌ರವರು ತಮ್ಮ ಸಂಸ್ಥೆಯ ವಿಶೇಷ ಅನುದಾನವನ್ನು ಇಲ್ಲಿಗೆ ತಂದದ್ದು ಖುಷಿ ತಂದಿದೆ. ತಾನು ಓದಿದ ಶಾಲೆ ಎಂಬ ಅಭಿಮಾನ ಎಂತಹ ಮಹಾನ್ ಕಾರ್ಯವನ್ನೂ ಸಹ ಮಾಡಿಸುತ್ತದೆ ಎಂಬುದಕ್ಕೆ ಈ ದೇಣಿಗೆ ಸಾಕ್ಷಿಯಾಗಿದೆ. ಪ್ರತಿ ಶಾಲೆಗೂ ಇಂತಹ ಒಬ್ಬೊಬ್ಬ ಹಿರಿಯ ವಿದ್ಯಾರ್ಥಿ ಇದ್ದರೆ ಮಕ್ಕಳ ಭವಿಷ್ಯ ಉಜ್ವಲವಾಗಲಿದೆ. ಇವರಿಗೆ ಶಾಲೆ ಹಾಗೂ ಸಾರ್ವಜನಿಕರ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ. ”
ಉಮೇಶ್ ಎನ್ ಸಿದ್ದೇಶ್ವರ ಕಾಲೋನಿ , ಸದಸ್ಯರು, ಎಸ್ ಡಿ ಎಂ ಸಿ.