ವಿಜಯ ಸಂಘರ್ಷ
ಶಿವಮೊಗ್ಗ: ಮನುಕುಲದ ಸೇವೆ ಮಾಡುತ್ತಿರುವ ಗುಡ್ ಲಕ್ ಆರೈಕೆ ಕೇಂದ್ರಕ್ಕೆ. ನಗರದ ಲಕ್ಷ್ಮಿ ಫೈನಾನ್ಸ್ ನ ದಿವಂಗತ ಟಿ.ಪಿ. ಸತ್ಯನಾರಾಯಣ ಅವರ ಸ್ಮರಣಾರ್ಥ ಗಜಾನನ ಬಡಾವಣೆಯಲ್ಲಿ ನಿರ್ಮಾಣ ವಾಗುತ್ತಿರುವ ಗುಡ್ ಲಕ್ ಆರೈಕೆ ಕೇಂದ್ರದ ಕಟ್ಟಡಕ್ಕೆ ಅವರ ಪತ್ನಿ ಲಕ್ಷ್ಮಿ ಸತ್ಯನಾರಾಯಣ, ಟಿ ಎಸ್ ಬದರೀನಾಥ್. ಸೊಸೆ ಸ್ವಪ್ನ ಬದ್ರಿನಾಥ್ ಅವರು ರೂ.1 ಲಕ್ಷ ದೇಣಿಗೆಯನ್ನು ಕೇಂದ್ರದ ಅಧ್ಯಕ್ಷ
ಯು. ರವೀಂದ್ರನಾಥ್ ಐತಾಳ್ ಅವರಿಗೆ ಹಸ್ತಾಂತರಿಸಿದರು.
ಬದರಿನಾಥ್ ಅವರು ಮಾತನಾಡಿ. ನಾವು ಮಾಡುವ ಸೇವೆ ಸಾರ್ಥಕ ಗೊಳ್ಳಬೇಕಾದರೆ. ಮನುಕುಲದಲ್ಲಿ ನಿಜವಾದ ಸೇವೆ ಮಾಡುತ್ತಿರುವ ಸಂಘ ಸಂಸ್ಥೆಗಳನ್ನು ಗುರುತಿಸಿ ಅವರ ಅವಶ್ಯಕತೆಗೆ ಸ್ಪಂದಿಸಿದರೆ ಅರ್ಥಪೂರ್ಣ. ನಮ್ಮ ತಂದೆ ಟಿ.ಪಿ. ಸತ್ಯನಾರಾಯಣ ಅವರು ಸಹ ಫ್ರೆಂಡ್ಸ್ ಸೆಂಟರ್ ರೋಟರಿ ಹಾಗೂ ಹಲವಾರು ಸಮಾಜಮುಖಿ ಸೇವಾ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರ ಆಶಯದಂತೆ ಪ್ರತಿ ವರ್ಷ ಇಂತಹ ಮನುಕುಲದ ಸೇವೆ ಸಲ್ಲಿಸುತ್ತಿರುವ ಸಂಸ್ಥೆಗಳನ್ನು ಗುರುತಿಸಿ ನಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದೇವೆ ನಾವು ನೀಡಿದ ದೇಣಿಗೆ ಸದ್ಬಳಕೆಯಾಗಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಯು. ರವೀಂದ್ರನಾಥ ಮಾತನಾಡಿ ಆಶ್ರಮ ವಾಸಿಗಳಿಗಾಗಿ ನಿರ್ಮಾಣಗೊಳ್ಳುತ್ತಿರುವ ಗುಡ್ ಲಕ್ ಅರೈಕೆ ಕೇಂದ್ರದ ಕಟ್ಟಡಕ್ಕೆ ಹಣದ ಅವಶ್ಯಕತೆ ತುಂಬಾ ಇದ್ದು ಇಂತಹ ದಾನಿಗಳಿಂದ ಅದು ನಿರ್ಮಾಣ ವಾಗುತ್ತಿದೆ. ಸೇವೆ ಮಾಡಿದ ಕೈಗಳು ಎಂದೂ ಸೋಲುವುದಿಲ್ಲ ಬರುವ ದಿನಗಳಲ್ಲಿ ಇನ್ನೂ ಹೆಚ್ಚು ಸೇವೆ ಮಾಡುವ ಶಕ್ತಿ ದೇವರು ಬರಿಸಲಿ ಎಂದು ನುಡಿದರು.
ನಿರ್ದೇಶಕ ಜಿ ವಿಜಯಕುಮಾರ್ ಮಾತನಾಡಿ ನಮ್ಮ ಆರೈಕೆ ಕೇಂದ್ರದಲ್ಲಿ ಹುಟ್ಟುಹಬ್ಬ ವಿವಾಹ ವಾರ್ಷಿಕೋತ್ಸವ ಹಾಗೂ ವಿಶೇಷ ಸಂದರ್ಭಗಳಲ್ಲಿ ನಮ್ಮ ಆರೈಕೆ ಕೇಂದ್ರಗಳಲ್ಲಿ ಆಚರಣೆ ಮಾಡುವುದರ ಮುಖಾಂತರ ಸೇವೆ ಸಲ್ಲಿಸಬಹುದಾಗಿದೆ.ನಿತ್ಯ ಅನ್ನಪೂರ್ಣ ಪ್ರಸಾದ ಯೋಜನೆಯು ಜಾರಿಯಲ್ಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮೊಮ್ಮಕ್ಕಳಾದ ಶ್ರೇಯಾ. ದಿಯಾ. ಹಾಗೂ ಗುಡ್ ಲಕ್ ಅರೈಕೆ ಕೇಂದ್ರದ ಉಪಾಧ್ಯಕ್ಷ ಶಿವಪ್ಪ ಗೌಡ. ನಿರ್ದೇಶಕ ಶ್ರೀನಿವಾಸ, ಕಾರ್ಯದರ್ಶಿ ಪಂಚಾಕ್ಷರಿ ಹಿರೇಮಠ ಉಪಸ್ಥಿತರಿದ್ದರು.
Tags:
ಶಿವಮೊಗ್ಗ ಸುದ್ದಿ