ವಿಜಯ ಸಂಘರ್ಷ
ಭದ್ರಾವತಿ: ಮಕ್ಕಳು ದೇವರ ಸಮಾನ. *ದೇವರ ತುಂಟಾಟ* ಸಮಂಜಸವಾದ ಶೀರ್ಷಿಕೆ ಪುಸ್ತಕ ಅದ್ಬುತವಾಗಿ ಮೂಡಿ ಬಂದಿದೆ. ಶಿಕ್ಷಕರು ಕವಿಗಳಾಗಿ ಶಾಲೆಯಲ್ಲಿ ರುವುದು ಒಂದು ವರದಾನ. ಅವರು ಮಕ್ಕಳಲ್ಲೂ ಸಾಹಿತ್ಯಾಭಿರುಚಿ ಬೆಳೆಸುತ್ತಿ ರುವುದು ಶ್ಲಾಘನೀಯ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲ್ಲೂಕಿನ ವಿಶ್ವನಗರ ಅರಬಿಳಚಿ ಕ್ಯಾಂಪ್ ನಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಕವಿ ರಂಗನಾಥ ಕ.ನಾ ದೇವರಹಳ್ಳಿ ರವರ ನಾಲ್ಕನೇ ಪುಸ್ತಕ *ದೇವರ ತುಂಟಾಟ* ಮಕ್ಕಳ ಕವಿತೆಗಳ ಪುಸ್ತಕವನ್ನು ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾ ನಾಯ್ಕ್, ಜಿ ಪಂ ಮಾಜಿ ಸದಸ್ಯ ಎಚ್.ಎಲ್.ಷಡಾಕ್ಷರಿ, ಡಿಡಿಪಿಐ
ಸಿ.ಆರ್.ಪರಮೇಶ್ವರಪ್ಪ, ಬಿಇಓ
ಎ.ಕೆ.ನಾಗೇಂದ್ರಪ್ಪ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ವಿ.ಹೆಚ್.ಪಂಚಾಕ್ಷರಿ ಕಾರ್ಯನಿರ್ವಾಹಣಾಧಿಕಾರಿ ಗಂಗಣ್ಣ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿದ್ಧಬಸಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪೃಥ್ವಿರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಧರ ಗೌಡ, ಜಿಲ್ಲಾ ಉಪಾಧ್ಯಕ್ಷೆ ಚಿತ್ರಾ, ಮತ್ತು ಅನೇಕ ಗಣ್ಯರು ಹಾಜರಿದ್ದರು.
ಶಾಲೆಯ ಮುಖ್ಯ ಶಿಕ್ಷಕರಾದ ಪೆರಿಯಾ ಸ್ವಾಮಿ ಬಡ್ತಿ ಮುಖ್ಯ ಶಿಕ್ಷಕಿ ಎಸ್.ಸಾವಿತ್ರಮ್ಮ, ಇಲಾಖೆಯ ಎಲ್ಲಾ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ,ಗ್ರಾಮದ ಮುಖಂಡರು, ಮಕ್ಕಳು, ಪೋಷಕರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
Tags:
ಅರಬಿಳಿಚಿ ಶಾಲಾ ವರದಿ