ದಿಲ್ಲಿ ಅನ್ನದಾತನ ದಾರಿಗೆ ಅಡ್ಡಿ: ಕೇಂದ್ರ ನಡೆ ಖಂಡನೀಯ-ಜಿಲ್ಲಾ ಕಾಂಗ್ರೆಸ್ ವಕ್ತಾರ ಎಂ.ರಮೇಶ್ ಶೆಟ್ಟಿ

ವಿಜಯ ಸಂಘರ್ಷ
ಭದ್ರಾವತಿ : ಕನಿಷ್ಠ ಬೆಂಬಲ ಬೆಲೆ ನಿಗದಿ ಪಡಿಸುವುದು ಸೇರಿದಂತೆ 12 ಬೇಡಿಕೆ ಗಳನ್ನು ಇಟ್ಟುಕೊಂಡು ರೈತ ಸಂಘಟನೆ ಗಳು ಹಮ್ಮಿಕೊಂಡಿರುವ 'ದಿಲ್ಲಿ ಚಲೋ' ಹೋರಾಟಕ್ಕೆ ಆಗಮಿಸುವ ಅನ್ನದಾತನ ಹಾದಿಗೆ ಮುಳ್ಳುತಂತಿ, ಮೊಳೆಗಳ ಪಟ್ಟಿ, ಸಿಮೆಂಟ್ ಇಟ್ಟಿಗೆ ಇರಿಸಿದ ಕೇಂದ್ರ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸುವುದಾಗಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಜಿಲ್ಲಾ ವಕ್ತಾರ ಎಂ.ರಮೇಶ್ ಶೆಟ್ಟಿಯವರು ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆಯಲ್ಲಿ ಖಂಡಿಸಿರುವ ಅವರು, ದೆಹಲಿಯ ಗಡಿಭಾಗಗಳಿಗೆ ಬೇಲಿ ಹಾಕಿ ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಕೇಂದ್ರ ಸರ್ಕಾರ ಬೇಡಿಕೆಗಳನ್ನು ಈಡೇರಿಸದೇ ಬಂಧಿಸಿ, ಬೆದರಿಸಿ ದೇಶದ ಬೆನ್ನುಲಬಾಗಿರುವ ರೈತರನ್ನು ಬಗ್ಗು ಬಡಿಯಬಹುದೆಂದು ತಿಳಿದಿದ್ದರೆ ಅದು ಅವರ ಭ್ರಮೆ. ನಾವು ಖರೀದಿಸುವ ಟಿವಿ, ಮೊಬೈಲ್, ವಾಷಿಂಗ್ ಮಿಷನ್, ಪೇಸ್ಟ್, ಕೂಲ್ ಡ್ರಿಂಕ್ಸ್ ಗಳಿಗೆ ಇಂತಿಷ್ಷೇ ಎಂದು ಬೆಲೆ ಎಂದು ನಿಗದಿ ಮಾಡಲಾಗುತ್ತದೆ.

ಪ್ರತಿಯೊಬ್ಬ ವ್ಯಕ್ತಿ ಜೀವಿಸಲು ಬೇಕಾಗಿರುವ ಅನ್ನ ನೀಡುವ ರೈತರ ಬೆಳೆಗಳಿಗೆ ಕನಿಷ್ಠ ಬೆಲೆ ನಿಗದಿ ಪಡಿಸಿ ಎಂದು ಕೇಳುವ ಹಕ್ಕು ನಮ್ಮ ದೇಶದ ರೈತರಿಗಿದೆ ಎಂದರು.

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ರಾಹುಲ್ ಗಾಂಧಿಯವರು ರೈತರ ಬಹುದಿನಗಳ ಬೇಡಿಕೆಯಾದ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತ್ರಿ ನೀಡುವುದಾಗಿ ಘೋಷಣೆ ಮಾಡಿದ್ದಾರಲ್ಲದೇ, ಸ್ವಾಮೀನಾಥನ್ ವರದಿಯನ್ನು ಜಾರಿಗೆ ತರುವ ಕಿಸಾನ್ ಗ್ಯಾರಂಟಿ ಘೋಷಿಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಕೇಂದ್ರದಲ್ಲಿ ಐಎನ್ ಡಿಐಎ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ, ಮೊದಲ ದಿನವೇ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ನೀಡಲಾಗುವು ದೆಂದು ತಿಳಿಸಿದ್ದಾರೆ ಎಂದ ರಮೇಶ್, ರೈತರ ಹೋರಾಟಕ್ಕೆ ಈಗಾಗಲೇ ನಮ್ಮ ಪಕ್ಷ ಹಾಗೂ ನಾಯಕರುಗಳು ಸಂಪೂರ್ಣ ಬೆಂಬಲ ಘೋಷಣೆ ಮಾಡಿದ್ದಾರೆಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು