ವಿಜಯ ಸಂಘರ್ಷ
ಸಾಗರ (ಆನಂದಪುರ) ಹಿರಿಯ ಮುತ್ಸದ್ದಿ ಕಾಗೋಡು ತಿಮ್ಮಪ್ಪ ನವರು ಹಾಲಿ ಶಾಸಕರ ತಪ್ಪು ನಡೆಯನ್ನು ಖಂಡಿಸಿ ಬುದ್ಧಿವಾದ ಹೇಳಬೇಕಿದೆ. ಕ್ಷೇತ್ರದ ಅನೇಕರು ಕಾಗೋಡು ರವರ ಮೇಲಿನ ಅಭಿಮಾನದಿಂದಲೂ ಗೋಪಾಲ ಕೃಷ್ಣರವರ ಗೆಲುವಿಗೆ ಕಾರಣ ರಾಗಿದ್ದಾರೆ. ಶಾಸಕರ ದಬ್ಬಾಳಿಕೆಯ ವರ್ತನೆಯನ್ನು ಹಿರಿಯರು ಸರಿಪಡಿಸುವ ಕೆಲಸ ಮಾಡಬೇಕಿದೆ. ಧೀಮಂತ ನಾಯಕರ ವ್ಯಕ್ತಿತ್ವಕ್ಕೆ ಚ್ಯುತಿ ಬಾರದಂತೆ ಶಾಸಕರು ಕರ್ತವ್ಯ ನಿರ್ವಹಿಸಬೇಕಿದೆ ಎಂದು ಜಿ ಪಂ ಮಾಜಿ ಸದಸ್ಯ ಹೊನಗೋಡು ರತ್ನಾಕರ ಅಭಿಪ್ರಾಯ ಪಟ್ಟರು.
ಅವರು ಮಂಗಳವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಅಧಿಕಾರವು ಸಾರ್ವಜನಿಕರ ಸೇವೆ ಮಾಡಲು ದೊರೆತಿರುತ್ತದೆ. ಅಧಿಕಾರದ ಮದದಿಂದ ಸಾಗರ ಕ್ಷೇತ್ರದ ಶಾಸಕರ ಅನುಯಾಯಿಗಳು ಸಾರ್ವಜನಿಕರ ಹಾಗೂ ಬಿಜೆಪಿ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಮಾಡುತ್ತಿರುವುದನ್ನು ನಿಲ್ಲಿಸಬೇಕು. ಶಾಸಕರು ಎಲ್ಲೆಲ್ಲಿ ವಸೂಲಾತಿಗಾಗಿ ಹುಂಡಿಗಳನ್ನು ಮಾಡಿದ್ದೀರಿ ಎಂದು ಪ್ರಶ್ನಿಸಿಸಿದರು.
ಕ್ಷೇತ್ರದ ಜನತೆ ಪಾಳೇಗಾರಿಕೆ ಮಾಡಲು ನಿಮ್ಮನ್ನು ಆಯ್ಕೆ ಮಾಡಿಲ್ಲ ತಾಲ್ಲೂಕಿನ ಸಮಗ್ರ ಅಭಿವೃದ್ಧಿ ಮಾಡಲು ಕಳುಹಿಸಿದ್ದಾರೆ ಎಂಬುದನ್ನು ಮರೆಯಬೇಡಿ. ಅಧಿಕಾರ ಇದ್ದಾಗ ಸಮಾಜ ಸೇವೆ ಮಾಡಬೇಕೇ ಹೊರತು ದಬ್ಬಾಳಿಕೆಯನ್ನಲ್ಲ ಎಂದು ಎಚ್ಚರಿಸಿ, ಇವರುಗಳು ಹೀಗೆಯೇ ದಬ್ಬಾಳಿಕೆ, ಧಮ್ಕಿ ಹಾಕುವುದನ್ನು ಮುಂದುವರೆಸಿದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಾರ್ವಜನಿಕರಿಗೆ ಅಧಿಕಾರಿಗಳು ಸರಿಯಾಗಿ ಮಾಹಿತಿ ತಿಳಿಸಿ, ಕಾನೂನು ಪ್ರಕಾರ ಕೆಲಸಮಾಡಿ, ಅನಗತ್ಯವಾಗಿ ಎಲ್ಲದಕ್ಕೂ ಶಾಸಕರ ಹಾಗೂ ಬೆಂಬಲಿಗರ ಮಾತನ್ನು ಕೇಳಿ ಅಮಾಯಕ ಜನರನ್ನು ಅಲೆಸಬೇಡಿ ಎಂದು ಅಧಿಕಾರಿಗಳಲ್ಲಿ ತಾಕೀತು ಮಾಡಿದರು.
ಸುದ್ಧಿಗೋಷ್ಠಿಯಲ್ಲಿ ಶಿವಪ್ಪ, ನಟರಾಜ್, ರೇವಪ್ಪ ಹೊಸಕೊಪ್ಪ ಇದ್ದರು.
(ವರದಿ ಎಸ್ ಡಿ ಚಂದ್ರಶೇಖರ್ ಆನಂದಪುರ)
Tags
ಆನಂದಪುರ ವರದಿ