ಪತ್ರಕರ್ತ ದಿ.ಎನ್.ಗಣೇಶ್ ರಾವ್ ಅವರಿಗೆ ಹಿರಿಯ ನಾಗರಿಕರ ಬಳಗದಿಂದ ಶ್ರದ್ಧಾಂಜಲಿ ಸಭೆ

ವಿಜಯ ಸಂಘರ್ಷ
ಭದ್ರಾವತಿ: ನಗರದಲ್ಲಿ ಸ್ಥಳೀಯ ಪತ್ರಿಕೆ ಹುಟ್ಟುಹಾಕಿ 5 ದಶಕಗಳ ಕಾಲ ನಿಷ್ಟುರವಾಗಿ ಸುದ್ದಿಗಳನ್ನು ಪ್ರಚುರ ಪಡಿಸಿ ಈ ಸಮಾಜಕ್ಕೆ ಬೆಳಕು ಚೆಲ್ಲಿದ ಹಿರಿಯ ಪತ್ರಕರ್ತ ದಿ.ಎನ್. ಗಣೇಶ್‌ ರಾವ್ ಮಾದರಿಯಾದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ರಾಜ್ಯ ಉಪಾಧ್ಯಕ್ಷ ಹಾ.ರಾಮಪ್ಪ ಹೇಳಿದರು.

ಅವರು ಹಳೇನಗರದ ಪತ್ರಿಕಾ ಭವನದಲ್ಲಿ ಹಿರಿಯ ನಾಗರಿಕರ ಬಳಗವು ಹಿರಿಯ ಪತ್ರಕರ್ತ ಎನ್. ಗಣೇಶ್‌ ರಾವ್ ನಿಧನ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.

ಹಿರಿಯ ಪತ್ರಕರ್ತ ಎನ್.ಬಾಬು ಮಾತನಾಡಿ, ಪತ್ರಿಕೋದ್ಯಮದಲ್ಲಿ ಹೆಗ್ಗುರುತು ಮೂಡಿಸಿರುವ ಕೆಲವೇ ಕೆಲವು ಪತ್ರಕರ್ತರಲ್ಲಿ ದಿ. ಗಣೇಶ್ ರಾವ್ ಪ್ರಮುಖರು. ಬರವಣಿಗೆ ಮಾತ್ರವಲ್ಲದೆ ಹೋರಾಟಗಾರರನ್ನು ಹಾಗು ಜನಸಾಮಾನ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಿದ್ದಿತಿಡಿದ ಗಣೇಶರಾವ್. ಮಿತಭಾಷಿ ಯಾಗಿದ್ದರೂ ತೀಕ್ಷ್ಣಸ್ವಭಾವ ಮತ್ತು ತೀಕ್ಷ್ಣಬರವಣಿಗೆ ಮೂಲಕ ಜನಪರ ಕಾಳಜಿ ಹೊಂದಿದ್ದ ಗಣೇಶ್ ರಾವ್ ಸಮಾಜದ ಸಮಸ್ಯೆಗಳಿಗೆ ಸದಾ ಸ್ಪಂದಿಸುವ ವ್ಯಕ್ತಿ ಯಾಗಿದ್ದರು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ಕಣ್ಣಪ್ಪ, ಬಿಜೆಪಿ ಜಿಲ್ಲಾ ಮುಖಂಡ ಎನ್. ವಿಶ್ವನಾಥ ರಾವ್,ಜೆಡಿಎಸ್ ಮುಖಂಡ ರಾದ ಕಬಡ್ಡಿ ಕರಿಯಪ್ಪ, ಆ‌ರ್. ಕರುಣಾ ಮೂರ್ತಿ, ಕಾಂಗ್ರೆಸ್ ಮುಖಂಡರಾದ ಮಾಜಿ ಉಪಮೇಯರ್ ಮಹಮ್ಮದ್ ಸನಾವುಲ್ಲಾ ಬಿ.ಟಿ.ನಾಗರಾಜ್, ಡಿ.ನರಸಿಂಹಮೂರ್ತಿ, ವೀರಶೈವ ಸಮಾಜದ ಸಿದ್ದಲಿಂಗಯ್ಯ, ಹೋರಾಟಗಾರ ಬಿ.ಎನ್.ರಾಜು, ರಾಕೇಶ್, ಉದ್ಯಮಿ ಬಿ.ಕೆ.ಜಗನ್ನಾಥ್, ನಾಗರತ್ನಮ್ಮ ಕೃಷ್ಣಪ್ಪ, ನಗರಸಭೆ ಮಾಜಿ ಉಪಾಧ್ಯಕ್ಷ ಟಿ.ವೆಂಕಟೇಶ್ ಮಾತನಾಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು