ಪದವಿ ಫಲಿತಾಂಶದಲ್ಲಿ ದೋಷ: ಸರ್ ಎಂವಿ ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ

ವಿಜಯ ಸಂಘರ್ಷ

ನ್ಯೂಟೌನ್ ಸರಕಾರಿ ಸರ್‌ಎಂವಿ ಕಲಾ ಮತ್ತು ವಾಣಿಜ್ಯ ಕಾಲೇಜು ಆಡಳಿತದ ನಿರ್ಲಕ್ಷ್ಯತನ ದಿಂದಾಗಿ ಪ್ರಕಟಿತ ಫಲಿತಾಂಶ ದಲ್ಲಿ ದೋಷ ಕಂಡುಬಂದಿದು,ವಿದ್ಯಾರ್ಥಿಗಳು ಕುವೆಂಪು ವಿವಿ ಅಲೆದಾಡಿದರೂ ಸಮಸ್ಯೆ ಬಗೆಹರಿಯದ ಕಾರಣ ಕಾಲೇಜು ಆಡಳಿತ ಮತ್ತು ಕುವೆಂಪು ವಿವಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.

2021ರಿಂದ ಜಾರಿಗೆ ಬಂದ ಕೇಂದ್ರ ಸರಕಾರದ ರಾಷ್ಟ್ರೀಯ ಶಿಕ್ಷಣ ನೀತಿಯ ಯುಯುಸಿ ಎಂಎಸ್ ಅಡಿಯ ಫಲಿತಾಂಶದಲ್ಲಿ ಗೊಂದಲ ಉಂಟಾಗಿದೆ ಎಂದು ಆರೋಪಿಸಿ ಇಂದು ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿ ಮುಂಭಾಗದಲ್ಲಿ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಒಂದೆರಡು ವರ್ಷದ ಹಿಂದೆ ಪ್ರಥಮ, ದ್ವಿತೀಯ ವರ್ಷದ ಫಲಿತಾಂಶ ಪಾಸ್ ಎಂದು ಪ್ರಕಟಗೊಂಡಿತ್ತು. ಆದರೀಗ ಅಂತಿಮ ವರ್ಷದ ಪರೀಕ್ಷೆ ಉತ್ತೀರ್ಣವಾದಾಗ ಪ್ರಥಮ, ದ್ವಿತೀಯ ವರ್ಷದ ಫಲಿತಾಂಶ ಅನುತೀರ್ಣವೆಂದು ಫಲಿತಾಂಶ ಬಂದಿದೆ.
ಈಗ ಕಾಲೇಜು ಆಡಳಿತ ನಪಾಸಾದ ವಿದ್ಯಾರ್ಥಿಗಳಿಗೆ ಕಳೆದೆರಡು ವರ್ಷಗಳ ಪರೀಕ್ಷೆ ಬರೆಯಿರಿ ಎಂದರೆ ಹೇಗೆ ತಾನೇ ಬರೆಯಲು ಸಾಧ್ಯ ಎಂದು ವಿದ್ಯಾರ್ಥಿಗಳು ಕಿಡಿಕಾರಿದರು.

ಕುವೆಂಪು ವಿವಿ ಅಧಿಕಾರಿಗಳು ಮತ್ತು ನಮಗೂ ಸಂಬಂಧವಿಲ್ಲ ಬೆಂಗಳೂರಿನ ಗುಮಾಸ್ತರು ಅಲೆದಾಡಿಸಿ ಸುಸ್ತು ಮಾಡಿ ಇದು ಎನ್‌ಇಪಿ ಉನ್ನತ ಶಿಕ್ಷಣ ಇಲಾಖೆ ಸೇರಿದ್ದೆಂದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಕತ್ತರಿ ಹಾಕಿದ್ದಾರೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು