ಅಮಾನತು ಆದೇಶವನ್ನು ಹಿಂಪಡೆಯುವಂತೆ ಆಗ್ರಹಿಸಿ ಕುವೆಂಪು ವಿವಿ ಮುಂಭಾಗ ದಸಂಸ ಪ್ರತಿಭಟನೆ

ವಿಜಯ ಸಂಘರ್ಷ
ಭದ್ರಾವತಿ: ಕುವೆಂಪು ವಿವಿಯಲ್ಲಿನ ಪ್ರೊ:ಸುರೇಶ್ ಎಂ. ಮತ್ತು ಶಾಖಾಧಿಕಾರಿ ಎಂ. ಕರಿಯಪ್ಪ ಅವರ ಅಮಾನತು ಆದೇಶವನ್ನು ಹಿಂಪಡೆಯುವಂತೆ ಆಗ್ರಹಿಸಿ ಶುಕ್ರವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಕುವೆಂಪು ವಿವಿ ಕುಲಪತಿಗಳಿಗೆ ಮನವಿ ಸಲ್ಲಿಸಿತು.

ಡಾ. ಸುರೇಶ್ ಹಾಗೂ ಕರಿಯಪ್ಪ ಅವರ ಮೇಲೆ ಯಾವಆರೋಪ ಗಳಿಲ್ಲದಿದ್ದರೂ ಮತ್ತು ಈಗಾಗಲೇ ಮುಗಿದು ಹೋಗಿರವ ಪ್ರಕರಣವನ್ನೇ ನೆಪ ಮಾಡಿಕೊಂಡು ಪರಿಶಿಷ್ಟ ಜಾತಿಯ ನೌಕರರಿಗೆ ತೊಂದರೆ ಕೊಡಬೇಕು ಎಂಬ ಉದ್ದೇಶದಿಂದ  ಅಮಾನತು ಮಾಡಲಾಗಿದೆ. ವಿವಿಯ ನಿಯಮಾನುಸಾರ ವಾಗಿ ಇವರು ಕೆಲಸ ಮಾಡಿದ್ದಾರೆ ಮತ್ತು ಇವರ ಮೇಲಿನ ಎಲ್ಲಾ ಆರೋಪಗಳು ಸಾಬೀತಾಗದೇ ಇತ್ಯರ್ಥಪಡಿಸಲಾಗಿದೆ. ಹೀಗಿದ್ದರೂ ಇವರನ್ನು ಅಮಾನತು ಮಾಡಿರುವುದು ಸರಿಯಲ್ಲ. ಆದ್ದರಿಂದ ಕೂಡಲೇ ಈ ಇಬ್ಬರ ಅಮಾನತು ಆದೇಶ ವಾಪಸ್ ಪಡೆಯಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಸಂಚಾಲಕ ಟಿ.ಹೆಚ್‌. ಹಾಲೇಶಪ್ಪ,, ತಾಲೂಕು ಪ್ರಧಾನ ಸಂಚಾಲಕ ಎಸ್ ಪುಟ್ಟರಾಜು, ಆರ್ ಹರೀಶ್, ಶಿವಕುಮಾರ ಅಸ್ತಿ, ಮಂಜುನಾಥ್ ಎಮ್, ಎಸ್ ಗೋವಿಂದರಾಜು, ಹನುಮಂತಪ್ಪ ಕಲ್ಲಿಹಾಳ್, ಪರಮೇಶ್ ಸೂಗೂರು, ಜಮೀರ್ ಅತ್ತಿಗುಂದ, ನರಸಿಂಹಮೂರ್ತಿ ಡಿ ಸೀಗೆಬಾಗಿ ಮತ್ತಿರರೇ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು