ವಿಜಯ ಸಂಘರ್ಷ
ವಿಜಯಪುರ: ಘನ ಸರ್ಕಾರದ ಮುಖ್ಯಮಂತ್ರಿಗಳು, ಹಣಕಾಸು ಸಚಿವ ಸಿದ್ದರಾಮಯ್ಯನವರು ಮಂಡಿಸಿದ 2024-25 ನೇ ಸಾಲಿನ ಬಜೆಟ್ ಜನಪರ ಅಭಿವೃದ್ಧಿಪರ ಹಾಗೂ ಬಡ ಮಧ್ಯಮ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಪರ ಬಜೆಟ್ ಇದಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ, ಅಲ್ಪಸಂಖ್ಯಾತ ವಿಭಾಗದ, ಅಧ್ಯಕ್ಷ ಶಬ್ಬೀರ ಜಾಗೀರದಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದ ರೈತರಿಗೆ ಸಾಲ ವಿತರಣೆಗಾಗಿ 27 ಸಾವಿರ ಕೋಟಿ ರೂಪಾಯಿ,ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಸುಧಾರಣೆಗೆ ಹೆಚ್ಚು ಒತ್ತು,ನೀರಾವರಿ ಯೋಜನೆಗಳಿಗೆ ಅಸ್ತು, ಅಲ್ಪಸಂಖ್ಯಾತರಿಗೆ ಹಜ್ ಭವನ,ವಕ್ಫ್ ಆಸ್ತಿ ನಿರ್ವಹಣೆಗೆ ಹಣ ಹಾಗೂ ಅಲ್ಪಸಂಖ್ಯಾತ ಮಕ್ಕಳು ಶಿಕ್ಷಣವಂತ ರಾಗಲೂ ಮೌಲಾನಾ ಆಜಾದ್ ವಸತಿ ಶಾಲೆ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿ ದೃಷ್ಟಿಯಿಂದ ಬಂಪರ್ ಬಜೆಟ್ ನೀಡಿದ್ದು ನಿರೀಕ್ಷೆಗಿಂತಲೂ ಹೆಚ್ಚಿನ ಅನುದಾನ ಮೀಸಲಿಡಲಾಗಿದೆ.
ರಾಜ್ಯದ ಅಂಗನವಾಡಿ ಕಾರ್ಯಕರ್ತೆ ಯರಿಗೆ ಸೇವಾ ಭದ್ರತೆ, ಗ್ಯಾರಂಟಿ ಯೋಜನೆಗಳ ಸಂಪೂರ್ಣ ಅನುಷ್ಠಾನ ದೊಂದಿಗೆ ಕಲ್ಯಾಣ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ಕೊಡಲಾಗಿದೆ.
ವಿಜಯಪುರ ಜಿಲ್ಲೆಗೆ ತೋಟಗಾರಿಕೆ ವಿದ್ಯಾಲಯ,ಆಹಾರ ಪಾರ್ಕ್ ಮಂಜೂರು ಮಾಡಿರುವುದು ಹಾಗೂ ವಿಜಯಪುರ ವಿಮಾನ ನಿಲ್ದಾಣಕ್ಕೆ 94 ಕೋಟಿ ರೂ. ಹೆಚ್ಚುವರಿ ಹಣ ಮಂಜೂರು ಮಾಡಿದ್ದನ್ನು ಮತ್ತು ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ ಬಸವ ನಾಡಿಗೆ ನೀಡಿದ ಕೊಡುಗೆಯಾಗಿದ್ದು. ರಾಜ್ಯದ ಜನರ ಪರವಾಗಿ ಹಾಗೂ ವಿಜಯಪುರ ಜಿಲ್ಲೆಯ ಜನತೆಯ ಪರವಾಗಿ ಹಾರ್ದಿಕವಾಗಿ ಸ್ವಾಗತಿಸುತ್ತೇವೆ. ಒಟ್ಟಾರೆಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್, ರಾಜ್ಯದ ಮತ್ತು ಸರ್ವಜನರ ಅಭಿವೃದ್ಧಿ ದೃಷ್ಟಿಯಿಂದ ಒಳಗೊಂಡಿದೆ ಎಂದು ಹೇಳಿದ್ದಾರೆ.
(ವರದಿ ರಜಾಕ್ ಸಾಬ. ಹೊರಕೇರಿ
ವಿಜಯಪುರ)
Tags:
ವಿಜಯಪುರ ಜಿಲ್ಲಾ ವರದಿ