ಸರ್ವತೋಮುಖ ಬೆಳವಣಿಗೆ ಗೆ ಪೂರಕ: ಡಾ.ನಾಸಿರ್ ಖಾನ್

ವಿಜಯ ಸಂಘರ್ಷ
ಭದ್ರಾವತಿ: ಸಾಮಾಜಿಕ ಮೌಲ್ಯ ಉತ್ಪನ್ನದ ಬಂಡವಾಳವನ್ನು ಬಿಂಬಿಸುವ ಶಿಕ್ಷಣ, ಆಹಾರ, ಆರೋಗ್ಯ, ಉದ್ಯೋಗ ಮತ್ತು ವಸತಿ ವಲಯಗಳಿಗೆ ಅತಿ ಹೆಚ್ಚು ಪ್ರಾಮುಖ್ಯತೆಯನ್ನು ನೀಡುವ ಮೂಲಕ ಮುಖ್ಯಮಂತ್ರಿಗಳು ಈ ಬಾರಿಯ ಮುಂಗಡ ಪತ್ರವನ್ನು ಮಂಡಿಸಿದ್ದಾರೆ ಎಂದು ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ.ಬಿ.ಎಂ.ನಾಸಿರ್ ಖಾನ್ ತಿಳಿಸಿದ್ದಾರೆ.

ತಮ್ಮ ಗ್ಯಾರೆಂಟಿ ಯೋಜನೆಗಳನ್ನು ಮುಂದುವರಿಸುತ್ತಾ, ಕೃಷಿಗೆ ನೂತನ ಯೋಜನೆಗಳನ್ನು ಘೋಷಿಸಿರುವುದು ಸ್ವಾಗತದ ಸಂಗತಿ. ರೈತರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಸುಸ್ತಿ ಬಡ್ಡಿ ಮನ್ನಾ ಹಾಗೂ ರೈತರಿಗೆ ಅನುಕೂಲವಾಗುವ ಅನೇಕ ಯೋಜನೆಗಳು ಬರಗಾಲದ ಈ ಸಮಯದಲ್ಲಿ ಸ್ವಲ್ಪ ಸಹಾಯ ಹಸ್ತ ನೀಡಬಹುದು. ಪ್ರಾಥಮಿಕ ಶಿಕ್ಷಣದಲ್ಲಿ ಗುಣಮಟ್ಟವನ್ನು ಹೆಚ್ಚಿಸಲು ಗಣಿತವನ್ನು ಕಲಿಸುವ ನೂತನ ಯೋಜನೆಯ ಅತ್ಯುತ್ತಮವಾದುದ್ದು. ಆರ್ಥಿಕ ವ್ಯವಸ್ಥೆಯ ಬೆಳವಣಿಗೆಯು ಶೇ: 6.6 ತಒಳ್ಳೆಯ ವಿಚಾರ.ಈ ಬಾರಿ ಅಂಗನವಾಡಿ ಕಾರ್ಯಕರ್ತರಿಗೆ ಅನುಕೂಲಗಳನ್ನು ಒದಗಿಸಲಾಗಿದೆ.

ಈಗಾಗಲೇ ಘೋಷಣೆ ಯಾಗಿರುವ ಭಾಗ್ಯಗಳ ಜೊತೆಯಲ್ಲಿ ಈ ಘೋಷಣೆ ಗಳು ಮಹಿಳಾ ಸಬಲೀಕರಣಕ್ಕ ಪೂರಕ ಆಗಬಹುದು. ಒಟ್ಟಾರೆಯಾಗಿ ಈ ಬಾರಿಯ ಮುಂಗಡ ಪತ್ರ ಸರ್ವೋತ್ತಮುಖ ಅಭಿವೃದ್ಧಿಯನ್ನು ಸಾರುವ ಬಜೆಟ್ ಆಗಿದೆ ಎಂದಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು