ವಿಜಯ ಸಂಘರ್ಷ
ಭದ್ರಾವತಿ: ನಗರಸಭೆ ವಾರ್ಡ್ ನಂಬರ್ 26ರ ನ್ಯೂಟೌನ್ ವಿಐಎಸ್ ಎಸ್ ಜೆ ಸರ್ಕಾರಿ ಪಾಲಿಟೆಕ್ನಿಕ್ ಸಮೀಪದಲ್ಲಿ ಬಾಕ್ಸ್ ಡ್ರೈನೇಜ್ ಗೆಂದು ಗುಂಡಿತೆಗೆದು ಒಂದು ವಾರ ಕಳೆದರು ಇನ್ನೂ ಮುಚ್ಚದೆ ನಿರ್ಲಕ್ಷ ತೋರಿದ್ದಾರೆ.
ಗುಂಡಿಯಿಂದ ಹೊರಸೂಸುವ ನೀರಿನಿಂದ ದುರ್ನತಾ ಬೀರುತ್ತಿದ್ದು, ಕಾಲೇಜಿಗೆ ಓದಾಡುವ ವಿದ್ಯಾರ್ಥಿಗಳು, ಅಯ್ಯಪ್ಪ ದೇವಾಲಯಕ್ಕೆ ಆಗಮಿಸುವ ಭಕ್ತಾದಿಗಳು ಮೂಗು ಮುಚ್ಚಿಕೊಂಡು ಓದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಸಂಬಂಧಿತ ಇಲಾಖೆ ದುರಸ್ಥಿಗೆ ಮುಂದಾಗಲಿ ಎನ್ನುವುದು ವಿದ್ಯಾರ್ಥಿಗಳ ಹಾಗೂ ಅಯ್ಯಪ್ಪ ಸ್ವಾಮಿ ದೇವಾಲಯದ ಭಕ್ತರ ಅಳಲಾಗಿದೆ.