ವಿಜಯ ಸಂಘರ್ಷ
ವಿಜಯಪುರ: ನಗರದ ಜುಮ್ನಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರಕಾರಿ ಕನ್ನಡ ಶಾಲೆಯಲ್ಲಿ ಸೋಮವಾರ 1989 ಸಾಲಿನ 7 ನೇ ತರಗತಿಯ ವಿದ್ಯಾರ್ಥಿಗಳಿಂದ ಗುರು ನಮನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸುಮಾರು 40 ವರ್ಷಗಳ ಕಾಲ ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶಿಕ್ಷಕರಾದ ಎಸ್ ಬಿ ಚಲವಾದಿ. ಎ.ಬಿ. ಕುಲಕರ್ಣಿ, ಎಸ್.ವಿ. ಕ್ಷೀರ ಸಾಗರ ಹಾಗೂ ಲೋಹಾರ್ ಇವರುಗಳನ್ನು ಸನ್ಮಾನಿಸ ಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮದ ಗುರು ಹಿರಿಯರು, ಶಾಲಾ ಶಿಕ್ಷಕ ಸಿಬ್ಬಂದಿ, ಗ್ರಾಮಸ್ತರು ಹಾಜರಿದ್ದರು.
"ಸ್ವೀಕರಿಸುವ ಮನಸಿದ್ದರೆ ಸದ್ಗುಣಗಳನ್ನು ಸ್ವೀಕರಿಸು, ಈಜುವ ಮನಸಿದ್ದರೆ ಜ್ಞಾನ ಸಾಗರದಲ್ಲಿ ಈಜು,ನಡೆಯುವ ಮನಸ್ಸಿ ದ್ದರೆ ಸನ್ಮಾರ್ಗದಲ್ಲಿ ನಡೆ,ಮಾತನಾಡುವ ಮನಸಿದ್ದರೆ ಸತ್ಯವನ್ನೇ ಮಾತನಾಡು, ಕೇಳುವ ಮನಸಿದ್ದರೆ ಸದುದ್ದೇಶವನ್ನೇ ಕೇಳು, ದೊರಕಿಸುವ ಮನಸ್ಸಿದ್ದರೆ ಜಯವನ್ನೇ ದೊರಕಿಸು" ಎಂಬ ನಾಣ್ಣುಡಿಯಂತೆ ಜರುಗಿದ ಕಾರ್ಯಕ್ರಮ ಮಾದರಿಯಾಗಿತ್ತು.