ರೈಲ್ವೆ ಹಳಿ ಏರುಪೇರು, ಜನಶತಾಬ್ದಿ ಸೇರಿ 2 ರೈಲು ಎರಡು ಗಂಟೆ ವಿಳಂಬ: ಭರದಿಂದ ಸಾಗಿದ ದುರಸ್ಥಿ ಕಾರ್ಯ

ವಿಜಯ ಸಂಘರ್ಷ 
ಭದ್ರಾವತಿ: ರೈಲ್ವೇ ಅಂಡರ್ ಪಾಸ್‌ನಲ್ಲಿ ಲಾರಿ ಅಪಘಾತ ಸಂಭವಿಸಿ ಹಳಿಗಳು ಏರು ಪೇರಾಗಿ, ಎರಡು ರೈಲುಗಳು ಸುಮಾರು ಎರಡು ಗಂಟೆ ತಡವಾಗಿ ಸಂಚಾರ ಆರಂಭಸಿವೆ. 

ಭದ್ರಾವತಿ ರೈಲ್ವೆ ಅಂಡರ್‌ ಪಾಸ್‌ ಬಳಿ ದೊಡ್ಡ ವಾಹನವೊಂದು ಹೋಗುವಾಗ ರೈಲ್ವೆ ಹಳಿ ಸುರಕ್ಷತೆಗಾಗಿ ಹಾಕಿದ್ದ 4 ಮೀಟರ್‌ ಎತ್ತರದ ಬ್ಯಾರಿಕೇಡ್‌ ಹೊಡೆದ ಪರಿಣಾಮ ಬ್ಯಾರಿಕೇಡ್‌ ಮುರಿದು ರೈಲ್ವೆ ಹಳಿಗೆ ತಾಗಿತ್ತು. ಇದರಿಂದ ಹಳಿಗಳು ಏರುಪೇರಾಗಿ ತಾಂತ್ರಿಕ ದೋಷ ಉಂಟಾಗಿತ್ತು. ಕೂಡಲೆ ರೈಲ್ವೆ ಸಿಬ್ಬಂದಿ ಹಳಿ ರಿಪೇರಿ ಕಾಮಗಾರಿ ಆರಂಭಿಸಿದ್ದರು. ಬೆಳಗ್ಗೆ 4.45ಕ್ಕೆ ಶಿವಮೊಗ್ಗ ತಲುಪಬೇಕಿದ್ದ ಮೈಸೂರು -ತಾಳಗುಪ್ಪ ಎಕ್ಸ್‌ಪ್ರೆಸ್‌ ರೈಲು ಬೆಳಗ್ಗೆ 6.45ಕ್ಕೆ ತಲುಪಿದೆ. ಶಿವಮೊಗ್ಗದಿಂದ ಬೆಳಗ್ಗೆ 5.15ಕ್ಕೆ ಹೊರಡಬೇಕಿದ್ದ ಬೆಂಗಳೂರು ಜನಶತಾಬ್ದಿ ರೈಲು ಸುಮಾರು ಬೆಳಗ್ಗೆ 6.35ಕ್ಕೆ ಹೊರಟಿದೆ. ವಿಳಂಬಕ್ಕೆ ಕಾರಣ ಗೊತ್ತಾಗದೆ ಪ್ರಯಾಣಿಕರು ಗೊಂದಲಕ್ಕೀಡಾಗಿದ್ದರು. 

ಇನ್ನು ಭರದಿಂದ ದುರಸ್ತಿ ಕಾರ್ಯ ನಡೆಯುತ್ತಿದ್ದು, ಅಂಡರ್ ಬ್ರಿಡ್ಜ್ ಸಮೀಪದಲ್ಲಿ ಟ್ರಾಫಿಕ್ ಜಾಮ್ ಆಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು