ವಿಜಯ ಸಂಘರ್ಷ
ಶಿವಮೊಗ್ಗ: ನೂರಾರು ಎಕರೆ ಅರಣ್ಯ ಕಂದಾಯ ಭೂಮಿಯನ್ನು
ಡಿ ನೋಟಿಫಿಕೇಷನ್ ಮಾಡಿಸಿಕೊಂಡ ಪುಣ್ಯಾತನಿಗೆ ಶರಾವತಿ ಸಂತ್ರಸ್ತರ ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿದೆ ಎಂದು ಯಾರ ಹೆಸರೂ ಹೇಳದೇ ಎಂಎಡಿಬಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಆರ್.ಎಂ. ಮಂಜುನಾಥಗೌಡ ಆಕ್ರೋಶ ವ್ಯಕ್ತಪಡಿಸಿದರು.
ಅವರು ಗುರುವಾರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿ, ಬಿಜೆಪಿಯವರು ಶರಾವತಿ ಸಂತ್ರಸ್ತರ ಬಗ್ಗೆ ಮಾತನಾಡುವುದನ್ನು ನೋಡಿದರೆ ನಗು ಬರುತ್ತದೆ. ಪಾದಯಾತ್ರೆ ಮಾಡಿರುವುದು ಎಂದು ಹೇಳುತ್ತಾರೆ. ಆದರೆ, ಸಂತ್ರಸ್ತರ ಪರವಾಗಿ ಯಾರು ಪಾದಯಾತ್ರೆ ಮಾಡಿದ್ದು ಎಂದು ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್ ಸರ್ಕಾರ ಸಂತ್ರಸ್ತರಿಗೆ ಏನು ಮಾಡಿತು ಎಂದು ಕೇಳುತ್ತಾರೆ. ಹೌದು ಕಾಂಗ್ರೆಸ್ ಸರಕಾರ ಮಾಡಿಲ್ಲ ಎಂದಿಟ್ಟು ಕೊಳ್ಳೋಣ. ಹತ್ತು ವರ್ಷ ಇವರಿದ್ದರೆಲ್ಲ ಕಡಿದು ಕಟ್ಟಿ ಹಾಕಿದ್ದು ಏನು? ಸಂಸದ ರಾಘವೇಂದ್ರ ಅವರು ಮೂರು ತಿಂಗಳಲ್ಲಿ ಸಂತ್ರಸ್ತರ ಸಮಸ್ಯೆ ಬಗೆಹರಿಸುವುದಾಗಿ ಮಾತು ಕೊಟ್ಟಿದ್ದರಲ್ಲ. 2019ರಲ್ಲಿಯೇ ಮಾಜಿ ಮುಖ್ಯಮಂತ್ರಿ ಯೊಬ್ಬರು ಗುರುತಿಸುವಿಕೆಯನ್ನು 75 ವರ್ಷಗಳಿಂದ 25 ವರ್ಷಕ್ಕೆ ಇಳಿಸುತ್ತೇವೆ ಎಂದಿದ್ದರಲ್ಲ ಏನಾಯಿತು ಎಂದು ಪ್ರಶ್ನೆ ಮಾಡಿದರು.
ಶಿವಮೊಗ್ಗ ಸುತ್ತಮುತ್ತ ನೂರಾರು ಎಕರೆ ಭೂಮಿಯನ್ನು ಡಿ ನೋಟಿಫಿಕೇಷನ್ ಮಾಡಿಸಿಕೊಳ್ಳಲು ಈ ಪುಣ್ಯಾತ್ಮರಿಗೆ ಬರುತ್ತೆ. ಶರಾವತಿ ಸಂತ್ರಸ್ತರ ಭೂಮಿ ಯನ್ನು ಡಿ ನೋಟಿಫಿಕೇಷನ್ ಮಾಡಿಸಲಿಲ್ಲ ಏಕೆ? ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಯಾಗಿದ್ದಾಗ 3 ತಿಂಗಳೊಳಗೆ
ಭೂಮಿ ಹಂಚಿಕೆ ಮಾಡಲಾಗುವುದು ಎಂದಿದ್ದರು. ಸರ್ಕಾರದ ಮಟ್ಟದಲ್ಲಿ ಏನಾದರೂ ತೀರ್ಮಾನ ಕೈಗೊಂಡರಾ? ಈ ಬಿಜೆಪಿ ನಾಯಕರಿಗೆ ಸಂತ್ರಸ್ತರ ಪರವಾಗಿ ಮಾತನಾಡುವ ಯಾವ ಹಕ್ಕೂ ಇಲ್ಲ ಎಂದರು.
ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ಅವರಂತಹವರನ್ನು ಈ ಬಿಜೆಪಿಯವರು ಟೀಕಿಸುವುದನ್ನು ನೋಡಿದರೆ ಅಸಹ್ಯ ವಾಗುತ್ತದೆ. ಅವರು ಭೂ ಸಾಗುವಳಿ ದಾರರ, ಸಂತ್ರಸ್ತರ ಪರವಾಗಿ 9200 ಎಕರೆ ಭೂಮಿ ಮಂಜೂರು ಮಾಡಿಸಿದ ದೊಡ್ಡ ನಾಯಕ, ಅಂತಹವರ ಬಗ್ಗೆ ಮಾತನಾಡುವ ಯೋಗ್ಯತೆ ಈ ಬಿಜೆಪಿ ಯವರಿಗೆ ಇಲ್ಲ ಎಂದರು.
ರಾಜ್ಯ ಸರಕಾರದ ಗ್ಯಾರಂಟಿಗಳು ಮನೆ ಮನೆಗೆ ತಲುಪುತ್ತಿವೆ. ಇದರ ಜೊತೆಗೆ ರಾಹುಲ್ ಗಾಂಧಿ ಅವರ 25 ಗ್ಯಾರಂಟಿ ಗಳು ಕಾಂಗ್ರೆಸ್ ಗೆಲುವಿಗೆ ಕಾರಣವಾಗು ತ್ತವೆ. ಈಗಾಗಲೇ ರಾಹುಲ್ ಗಾಂಧಿ ಅವರು ರೈತರಿಗೆ ಬಹುದೊಡ್ಡ ಕೊಡುಗೆ ನೀಡುವುದಾಗಿ ಹೇಳಿದ್ದಾರೆ.
ಬಿಜೆಪಿಯವರು ರೈತರ ಸಾಲಕ್ಕೂ ಜಿಎಸ್ ಟಿ ಹಾಕಿದ್ದಾರೆ. ರೈತರು ಸಾಲ ತೆಗೆದು ಕೊಂಡು ಉಪಕರಣ ಕೊಳ್ಳಬೇಕು ಎಂದರೆ ಶೇ.15ರಷ್ಟು ಜಿ.ಎಸ್.ಟಿ. ಕಟ್ಟಬೇಕು. ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ಜಿ.ಎಸ್.ಟಿ. ತೆಗೆದು ಹಾಕಲಾಗುವುದು. ಮಹಿಳೆಯರಿಗೆ ವರ್ಷಕ್ಕೆ ಒಂದು ಲಕ್ಷ ರೂ., ನಿರುದ್ಯೋಗಿ ಗಳಿಗೆ ಇಡುಗಂಟು ಸೇರಿದಂತೆ ಹಲವು ಗ್ಯಾರಂಟಿಗಳನ್ನು ಕಾಂಗ್ರೆಸ್ ಪ್ರಕಟಿಸಿದೆ. ಮೋದಿ ಗ್ಯಾರಂಟಿಗಳು ಈಗಾಗಲೇ ಸುಳ್ಳು ಎಂದು ಜನರಿಗೆ ಗೊತ್ತಾಗಿದೆ. ಅಕ್ಕಿ ಗ್ಯಾರಂಟಿಯೇ ಇದಕ್ಕೆ ಸಾಕ್ಷಿ ಎಂದು ಛೇಡಿಸಿದರು.
ಕಾಂಗ್ರೆಸ್ ಪಕ್ಷ ಗೀತಾ ಶಿವರಾಜ್ ಕುಮಾರ್ ಗೆಲುವಿಗಾಗಿ ಪ್ರಚಾರವನ್ನು ಮತ್ತಷ್ಟು ಹಿಗ್ಗಿಸಿದೆ. ಬೂತ್ ಮಟ್ಟ ದಿಂದಲೂ ಪ್ರಚಾರ ನಡೆಯುತ್ತಿದೆ. ಅಭ್ಯರ್ಥಿಯ ಜೊತೆಗೆ ನಾವೆಲ್ಲರೂ ಕೂಡ ಅಭ್ಯರ್ಥಿ ಎಂದೆಯೇ ಪ್ರಚಾರ ಮಾಡುತ್ತಿದ್ದೇವೆ. ನಾಮಪತ್ರ ಸಲ್ಲಿಸುವ ಸಂದರ್ಭಕ್ಕೆ ಡಿ.ಕೆ. ಶಿವಕುಮಾರ್ ಅವರು ಬಂದಿದ್ದು ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ತಂದಿದೆ, ಶಕ್ತಿ ಬಂದಿದೆ. ಗೀತಾ ಶಿವರಾಜ್ ಕುಮಾರ್ ಗೆದ್ದೇ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ವಕ್ತಾರ ಆಯನೂರು ಮಂಜುನಾಥ್, ಮುಖಂಡ ರಾದ ಎಸ್.ಕೆ.ಮರಿಯಪ್ಪ, ರಮೇಶ್ ಹೆಗ್ಡೆ, ರಮೇಶ್ ಶೆಟ್ಟಿ ಶಂಕರಘಟ್ಟ, ಜಿ.ಡಿ. ಮಂಜುನಾಥ್, ಮೋಹನ್, ರವಿಕುಮಾರ್, ಹೆಚ್.ಎಲ್. ಷಡಾಕ್ಷರಿ, ಜಿ.ಪದ್ಮನಾಭ್, ಶಿ.ಜು.ಪಾಷಾ ಮತ್ತಿತರರಿದ್ದರು.
ಶರಾವತಿ ಸಂತ್ರಸ್ತರಿಗೆ ಮತ್ತು ಅವರ ಕುಟುಂಬದವರಿಗೆ ಒಂದು ರೂಪಾಯಿ ಲಂಚ ಇಲ್ಲದೆ ಎಷ್ಟು ಜನರಿಗೆ ನಿಮ್ಮ DCC ಬ್ಯಾಂಕಿನಲ್ಲಿ ಕೆಲಸ ಕೋಟ್ಟಿದ್ದೀರಿ RM ಗೌಡ್ರೇ, ರಾಜಕೀಯ ಮಾಡೋಕೆ ನಿಮ್ಮ ಬೇಳೆ ಬೇಯಿಸಿಕೊಳ್ಳೋಕೆ ನೀವು ಬದುಕೋಕೆ ನಿಮಗೆ ಶರಾವತಿ ಸಂತ್ರಸ್ತರು ಬಡವರ ಕಷ್ಟ ಬಡವರ ಸಮಸ್ಯೆ ಗಳು ಬೇಕು, ಅದು ಚುನಾವಣೆಯಲ್ಲಿ ಮೈಕ್ ಹಿಡಿದು ನಿಂತಾಗ, ಥೂ ನಿಮ್ಮ ಜನ್ಮಕ್ಕೆ,,, ನೂರಾರು ಕೋಟಿ ಹಣವನ್ನು ಕೇವಲ DCC ಬ್ಯಾಂಕಿನ ಅಧ್ಯಕ್ಷ ಆಗಿ ಸಂಪಾದನೆ ಮಾಡಿರುವ ನೀವು ಇನ್ನೂ ಎಮ್ಮೆಲ್ಲೆ ಎಮ್ ಪಿ ಆದರೆ ಗತಿ ಏನು.
ಪ್ರತ್ಯುತ್ತರಅಳಿಸಿ