ಪ್ರಜಾಪ್ರಭುತ್ವ ವಿರೋಧಿ ಕೇಂದ್ರ ಸರಕಾರ ಸೋಲಿಸಿ: ಮಯೂರ್ ಜೈಕುಮಾ‌ರ್

ವಿಜಯ ಸಂಘರ್ಷ 
ಶಿಕಾರಿಪುರ: ಕೇಂದ್ರದ ಬಿಜೆಪಿ ಸರಕಾರದ ಅನ್ಯಾಯವನ್ನು ಪ್ರಶ್ನಿಸುವವರನ್ನು ಐಟಿ.ಇಡಿ. ಸಿಬಿಐ ನಿಂದ ಹತ್ತಿಕ್ಕುವ ಮೂಲಕ ಪ್ರಜಾ ಪ್ರಭುತ್ವ ವಿರೋಧಿ ನೀತಿ ಅನುಸರಿಸು ತ್ತಿರುವ ಸರಕಾರವನ್ನು ಈ ಬಾರಿಯ ಚುನಾವಣೆಯಲ್ಲಿ ಸೋಲಿಸದಿದ್ದಲ್ಲಿ ಪ್ರಶ್ನಿಸುವ ಅರ್ಹತೆಯನ್ನು ಕಳೆದು ಕೊಳ್ಳಬೇಕಾಗುತ್ತದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಯೂರ್ ಜೈಕುಮಾರ್ ಹೇಳಿದರು. 

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರು, ಮುಖಂಡರ ಸಭೆ ಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರಕಾರ ಚುನಾವಣಾ ಪೂರ್ವದಲ್ಲಿ ನೀಡಿದ ಎಲ್ಲ ಗ್ಯಾರಂಟಿಗಳನ್ನು ಯಥಾವತ್ತಾಗಿ ಜಾರಿ ಗೊಳಿಸಿದ್ದು, ಯೋಜನೆಯನ್ನು ಜಾರಿ ಗೊಳಿಸುವಲ್ಲಿ ಕೇಂದ್ರ ಸರಕಾರ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂಬುದನ್ನು ಮತದಾರರಿಗೆ ಮನವರಿಕೆ ಮಾಡಿ ಕೊಡುವಂತೆ ತಿಳಿಸಿದ ಅವರು, ಕೇಂದ್ರ ಹಾಗೂ ರಾಜ್ಯದಲ್ಲಿ ಮಾತ್ರ ಕಾಂಗ್ರೆಸ್ ಸರಕಾರದಿಂದ ಗ್ಯಾರಂಟಿ ಸತತ 5 ವರ್ಷ ನೀಡಲು ಸಾಧ್ಯ ಎಂಬುದನ್ನು ಜನತೆಗೆ ತಿಳಿಸಬೇಕಾಗಿದೆ ಎಂದರು.

ಸುಳ್ಳು ಭರವಸೆ ಮೂಲಕ ಅಧಿಕಾರ ಗಳಿಸಿದ ಬಿಜೆಪಿ ಸರಕಾರಕ್ಕೆ ರಾಹುಲ್ ಗಾಂಧಿ ಖಾಲಿ ಬೊಂಬು ಸರಕಾರ ಎಂದು ಟೀಕಿಸಿದ್ದು, ಬಿಜೆಪಿ ಸರಕಾರ ಜನತೆಗೆ ದ್ರೋಹ, ಮೋಸ ಮಾಡಿದೆ ಎಂದು ಆರೋಪಿಸಿದರು. 

ಕಳೆದ ಚುನಾವಣಾ ಪ್ರಣಾಳಿಕೆಯಲ್ಲಿ ವಿದೇಶದಲ್ಲಿನ ಕಪ್ಪು ಹಣ ವಾಪಾಸ್ ತಂದು ಪ್ರತಿಯೊಬ್ಬರ ಖಾತೆಗೆ ರೂ.15 ಲಕ್ಷ ಜಮಾಗೊಳಿಸುವುದಾಗಿ,ವರ್ಷಕ್ಕೆ 20 ಲಕ್ಷ ಉದ್ಯೋಗ ಸೃಷ್ಟಿಸುವುದಾಗಿ ತಿಳಿಸಿ ಉದ್ಯೋಗವನ್ನು ಕಡಿತ ಗೊಳಿಸಿದೆ. ಈ ಬಗ್ಗೆ ಪ್ರಶ್ನಿಸಿದಲ್ಲಿ ಅಮಿತ್ ಶಾ ಪಕೋಡಾ ಮಾರಿ ಉದ್ಯೋಗಗಳಿಸಿ ಎಂಬ ಉಚಿತ ಸಲಹೆ ನೀಡುತ್ತಾರೆ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ 40% ಸರಕಾರವನ್ನು ಜನತೆ ಕಿತ್ತೊಗೆದು ಸೂಕ್ತ ಪಾಠ ಕಲಿಸಿದ್ದಾರೆ. ಸಂವಿಧಾನಿಕ ದೇಶದಲ್ಲಿ ಇಡಿ. ಸಿಬಿಐ ದುರ್ಬಳಕೆ ಮಾಡಿಕೊಂಡು ಸರಕಾರದ ಅನ್ಯಾಯ. ದ್ರೋಹ, ಜನವಿರೋಧಿ ನೀತಿ ಯನ್ನು ಪ್ರಶ್ನಿಸುವವರನ್ನು ಹತ್ತಿಕ್ಕುವ ಮೂಲಕ ಅಧಿಕಾರದ ದುರ್ಬಳಕೆ ವಿಪರೀತ ವಾಗಿದೆ. ಇಂತಹ ಜನವಿರೋಧಿ ಸರಕಾರವನ್ನು ಕಿತ್ತೊಗೆಯದಿದ್ದಲ್ಲಿ ಪ್ರಶ್ನಿಸುವ ಅರ್ಹತೆಯನ್ನು ಕಳೆದು ಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.

ರಾಜ್ಯ, ದೇಶಕ್ಕಾಗಿ ಲೋಕಸಭೆಯಲ್ಲಿ ಪ್ರಶ್ನಿಸುತ್ತಿದ್ದ ರಾಹುಲ್ ಗಾಂಧಿಯನ್ನು ಅನರ್ಹಗೊಳಿಸಿದ್ದು 5 ತಲೆಮಾರು ದೇಶಕ್ಕಾಗಿ ತ್ಯಾಗ ಬಲಿದಾನ ಕುಟುಂಬದ ರಾಹುಲ್ ಗಾಂಧಿ ಸರ್ವೋಚ್ಚ ನ್ಯಾಯಾಲಯದ ಮೂಲಕ ಸದಸ್ಯತ್ವ ವಾಪಾಸ್ ಪಡೆಯಲಾಗಿದೆ. ಎಲ್ಲರೂ ಒಗ್ಗಟ್ಟಾಗಿ ಶೇ.40 ಕಮೀಷನ್ ಸರಕಾರ ಕಿತ್ತೊಗೆದ ರೀತಿ ಖಾಲಿ ಚೊಂಬು ಸರಕಾರವನ್ನು ಕಿತ್ತೊಗೆಯುವ ದೃಢ ಸಂಕಲ್ಪ ಮಾಡುವಂತೆ ಕರೆ ನೀಡಿ, ಪಕ್ಷದ ಅಭ್ಯರ್ಥಿ ಗೀತಾರನ್ನು ಅತ್ಯಾಧಿಕ ಮತಗಳ ಅಂತರದಿಂದ ಜಯಗಳಿಸು ವಂತೆ ಪ್ರಯತ್ನಿಸಬೇಕು ಎಂದರು.

ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಯೂರ್ ಜೈಕುಮಾರ್ ಅವರನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವರಾಂ ಪಾರಿವಾಳದ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಗೋಣಿ ಮಾಲತೇಶ್, ಮುಖಂಡ ಉಳ್ಳ ದರ್ಶನ್, ರವೀಂದ್ರ (ರಾಘು), ಶ್ರೀಧರ ಕರ್ಕಿ, ವೀರೇಶ್, ಶಿವ್ಯಾನಾಯ್ಕ ಸಾಲೂರು ಪ್ರಕಾಶ್, ಮಂಜುನಾಥ್ ಎಸ್.ಎನ್. ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು