ಮೆಸ್ಕಾಂ ಪ್ರಧಾನ ಕಚೇರಿ ಸಮೀಪ ಮೋದಿ ಭಾವಚಿತ್ರ: ನೀತಿ ಸಂಹಿತೆ ಇಲ್ಲವೇ...?

ವಿಜಯ ಸಂಘರ್ಷ 
ಭದ್ರಾವತಿ: ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿದ್ದರೂ ಸಹ ಮೆಸ್ಕಾಂ ಇಲಾಖೆ ನಿರ್ಲಕ್ಷದಿಂದಲೇ ನೀತಿ ಸಂಹಿತೆ ಉಲ್ಲಂಘನೆ ಯಾಗಿರುವುದು, ಸಾರ್ವಜನಿಕರಲ್ಲಿ ಗೊಂದಲಕ್ಕೆ ಕಾರಣವಾಗಿದೆ. 

ನಗರದ ಜೆಪಿಎಸ್ ಕಾಲೋನಿಯ ಮೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ ಕಚೇರಿ ಸಮೀಪ ಕೆಪಿಟಿಸಿಎಲ್ ನ ವಿದ್ಯುತ್ ವಿತರಣಾ ಕೇಂದ್ರದ ಮುಂಭಾಗ ಬಳಿ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರ ವಿರುವ ಪೋಸ್ಟರ್ ಹಾಕಲಾಗಿದೆ. 

ನೀತಿ ಸಂಹಿತೆ ಜಾರಿಯಲ್ಲಿರುವುದ ರಿಂದ ಸಂಬಂಧಿತ ಚುನಾವಣಾ ಅಧಿಕಾರಿಗಳು ಮೋದಿಯವರ ಭಾವಚಿತ್ರಕ್ಕೆ ಕಾಗದ ಅಂಟಿಸುವ ಯತ್ನ ಮಾಡದೆ ನಿರ್ಲಕ್ಷ ವಹಿಸಿದ್ದಾರೆ. ಕೂಡಲೇ ಸಂಬಂಧಿತ ಇಲಾಖೆ ಯವರು ಇತ್ತ ಗಮನಹರಿಸುವರೇ...?

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು