ವಿಜಯ ಸಂಘರ್ಷ
ಶಿಕಾರಿಪುರ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕೃಷಿಕರ,ಕಾರ್ಮಿಕರ, ಶೋಷಿತರ, ನೊಂದವರ ಮುಖವಾಣಿ ಯಾಗಿ ಸ್ಪರ್ಧಿಸಿದ್ದು, ತಮ್ಮ ಉಂಗುರದ ಗುರುತಿಗೆ ಮತ ನೀಡುವಂತೆ ಪಕ್ಷೇತರ ಅಭ್ಯರ್ಥಿ, ಕೃಷಿ ಭೂಮಿ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಡಿ.ಎಸ್ ಈಶ್ವರಪ್ಪ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.
ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಕಳೆದ 3 ದಶಕದಿಂದ ರೈತರು, ಕೃಷಿ ಕಾರ್ಮಿಕರ ವಿರುದ್ಧದ ಅನ್ಯಾಯ ದೌರ್ಜನ್ಯ ಹಲ್ಲೆ ಮತ್ತಿತರ ಸಂದರ್ಭ ದಲ್ಲಿ ನೊಂದವರ ಪರವಾಗಿ ಧ್ವನಿ ಎತ್ತಿ ನ್ಯಾಯ ದೊರಕಿಸಲು ಸಾಧ್ಯವಾದ ಎಲ್ಲ ರೀತಿಯಲ್ಲಿ ಹೋರಾಟ ಹಮ್ಮಿಕೊಂಡು ಗುರುತಿಸಿಕೊಂಡಿದ್ದಾಗಿ ತಿಳಿಸಿದ ಅವರು, ಜಿಲ್ಲೆಯಲ್ಲಿನ ರೈತರ ವಿರುದ್ಧದ ಅನ್ಯಾಯ ಪ್ರಶ್ನಿಸಲು ಲೋಕ ಸಭೆಗೆ ಸ್ಪರ್ಧಿಸಿದ್ದಾಗಿ ತಿಳಿಸಿದರು.
ರೈತರ ಆದಾಯ ದ್ವಿಗುಣಗೊಳಿಸುವ ಪ್ರಧಾನಿ ಮೋದಿರವರ ಘೋಷಣೆ 10 ವರ್ಷದಲ್ಲಿ ರೈತರ ಶೋಷಣೆಯಾಗಿದ್ದು ಬದುಕು ಮಾತ್ರ ಹಸನಾಗಲಿಲ್ಲ ಎಂದು ಟೀಕಿಸಿದ ಅವರು ರೈತರ ಸಾಲ ಮನ್ನಾ ಬದಲಿಗೆ ಜಪ್ತಿ ಕಾಯ್ದೆ ಜಾರಿಗೊಳಿಸಿ ವಿದ್ಯುತ್ ಖಾಸಗಿಕರಣ ಗೊಳಿಸಲಾಗಿದೆ ಎಂದರು.
ಜಿಲ್ಲೆಯ ಎಲ್ಲ ರಾಷ್ಟ್ರೀಯ ಹೆದ್ದಾರಿ ಗಳನ್ನು ಅಭಿವೃದ್ಧಿ ನೆಪದಲ್ಲಿ ಖಾಸಗಿಗೆ ವಹಿಸಿ ಕರ ವಸೂಲಿಗೆ ಟೋಲ್ ಗೇಟ್ ಆಳವಡಿಸಿ ಶೋಷಿಸಲಾಗುತ್ತಿದೆ. ಜಿಲ್ಲೆಯಲ್ಲಿ ವಿವಿಧ వివి ಅರಣ್ಯ ಭೂಮಿಯಲ್ಲಿ ಸ್ಥಾಪಿಸಿ ಅರಣ್ಯ ವಾಸಿಗಳನ್ನು ಸ್ಥಳಾಂತರಿಸಿ ವಸತಿ ಭೂ ರಹಿತರನ್ನಾಗಿಸಿ ಸಾಗುವಳಿ ಭೂಮಿ ಯನ್ನು ಇಂಡೀಕರಣಗೊಳಿಸಲಾಗಿದ್ದು, ರದ್ದುಪಡಿಸಿ ಮೂಲಸ್ಥಿತಿ ಸ್ಥಾಪಿಸಲು ಶಕ್ತಿಮೀರಿ ಶ್ರಮಿಸುವುದಾಗಿ ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ, ಬೈಪಾಸ್, ರೈಲ್ವೆ ಯೋಜನೆ, ಕೈಗಾರಿಕೆ, ಭೂ ಬ್ಯಾಂಕ್ ನೆಪದಲ್ಲಿ ಸಹಸ್ರಾರು ಎಕರೆ ಫಲವತ್ತಾದ ಹಾಗೂ ಅಭಿವೃದ್ಧಿ ಪಡಿಸಿದ ಭೂಮಿಯನ್ನು ಅವೈಜ್ಞಾನಿಕ ಭೂ ಸ್ವಾಧೀನದ ಮೂಲಕ ವಶಪಡಿಸಿ ಕೊಳ್ಳುತ್ತಿರುವುದು ದುರಂತ ಎಂದ ಅವರು, ಉದ್ಯೋಗಕ್ಕೆ ಹೆಚ್ಚಿನ
ಅವಕಾಶವಿರುವ ಭದ್ರಾವತಿಯ ವಿಐಎಸ್‌ಎಲ್, ಎಂಪಿಎಂ, ಮೈಸೂರು ಪೇಪರ್ ಮಿಲ್ ಪುನರ್ ನವೀಕರಣ ಮೂಲಕ ಆರಂಭಿಸಿ ಇತಿಹಾಸ ನಿರ್ಮಿಸುವ ಬದಲು ಖಾಸಗಿಯವರಿಗೆ ಮಾರಾಟ ಮಾಡಲು ಕಮೀಷನ್
ಏಜೆಂಟ್ ರೀತಿ ಜನಪ್ರತಿನಿಧಿಗಳು ವರ್ತಿ ಸುತ್ತಿರುವುದು ಅಸಹ್ಯಕರ ಎಂದ ಅವರು, ಬಗರ್ ಹುಕುಂ, ಅರಣ್ಯ ಹಕ್ಕು ಕಾಯ್ದೆ, ಮುಳುಗಡೆ ಸಂತ್ರಸ್ಥರ ಪುನರ್ ವಸತಿ, ಪೋಡಿ ಸಮಸ್ಯೆ, ಇ ಸ್ವತ್ತು ತಿದ್ದುಪಡಿ ಮತ್ತಿತರ ಎಲ್ಲ ಸಮಸ್ಯೆ ಪರಿಹರಿಸಿ ರೈತರು, ಕೃಷಿ ಕಾರ್ಮಿಕರಿಗೆ ನ್ಯಾಯ ದೊರಕಿಸಲು ಚುನಾವಣೆ ಯಲ್ಲಿ ಸ್ಪರ್ಧಿಸಿದ್ದು, ಉಂಗುರದ ಗುರುತಿಗೆ ಮತ ನೀಡಿ ಆಯ್ಕೆಗೊಳಿಸು ವಂತೆ ಅವರು ಮನವಿ ಮಾಡಿದರು.
ಪತ್ರಿಕಾ ಗೋಷ್ಠಿಯಲ್ಲಿ ರೈತ ಮುಖಂಡ ಬಸವರಾಜ್ ಪಾಟೀಲ್, ರೇವಣ ಸಿದ್ದಪ್ಪ, ಅಬ್ದುಲ್ ಮುನಾಫ್, ಮೋಹನ್ ರಾವ್, ಹುಸೇನ್ ಸಾಬ್ ಮತ್ತಿತರರು ಉಪಸ್ಥಿತರಿದ್ದರು.