ಗೀತಾ ಶಿವರಾಜ್‌ ಕುಮಾರ್‌ಗೆ ಬೆಂಬಲ : ಸಿಪಿಐ(ಎಂ) ಬಾಲಕೃಷ್ಣ ಶೆಟ್ಟಿ

ವಿಜಯ ಸಂಘರ್ಷ 
ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್ ಅವರನ್ನು ಬೆಂಬಲಿಸಲಾಗು ವುದು ಎಂದು ಸಿಪಿಐ (ಎಂ) ರಾಜ್ಯ ಸಮಿತಿ ಸದಸ್ಯ ಬಾಲಕೃಷ್ಣ ಶೆಟ್ಟಿ ಹೇಳಿದರು.

ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ ವಾದ) ವು ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳನ್ನು ಸೋಲಿಸ ಬೇಕು ಹಾಗೂ ಲೋಸಭೆಯಲ್ಲಿ ಎಡಪಕ್ಷಗಳ ಬಲವನ್ನು ಹೆಚ್ಚಿಸಬೇಕು. ಕೇಂದ್ರದಲ್ಲಿ ಪರ್ಯಾಯ ಜಾತ್ಯಾತೀತ ಸರ್ಕಾರದ ರಚನೆಯಾಗಬೇಕು ಎಂಬ ಉದ್ದೇಶ ವನ್ನು ಇಟ್ಟುಕೊಂಡಿದೆ. ಈ ಹಿನ್ನಲೆಯಲ್ಲಿ ಈ ಬಾರಿ ಸಿಪಿಐ ಗೀತಾ ಶಿವರಾಜ್‌ ಕುಮಾ‌ರ್ ಅವರನ್ನು ಬೆಂಬಲಿಸುತ್ತದೆ ಎಂದರು.

ಬಿಜೆಪಿ ಪ್ರಜಾಪ್ರಭುತ್ವ ಸಂಸ್ಥೆಗಳನ್ನೇ ನಾಶ ಮಾಡುತ್ತಿದೆ. ಸಂಸತ್‌ ನಲ್ಲಿ 146ವಿರೋಧ ಪಕ್ಷದ ಸಂಸದರನ್ನು ಅಮಾನತ್ತು ಮಾಡಿ 2 ದಿನದಲ್ಲಿ 19 ಜನವಿರೋಧಿ ಕಾಯ್ದೆಗಳನ್ನು ಜಾರಿಮಾಡಿ ಸರ್ವಾಧಿಕಾರತವನ್ನು 
ಮೆರೆದಿದೆ. ಉದ್ಯೋಗವನ್ನು ಸೃಷ್ಟಿಸಿಲ್ಲ. ರೈತರ ಮೇಲೆ ದಬ್ಬಾಳಿಕೆ ನಡೆದಿದೆ. ಮತ್ತು ಚುನಾವಣಾ ಬಾಂಡ್ ಮೂಲಕ ಕೋಟ್ಯಾಂತರ ರೂ. ಹಣವನ್ನು ಪಕ್ಷಕ್ಕೆ ಜಮಾಮಾಡಿಕೊಂಡಿದೆ. ಜನ ಸಾಮಾನ್ಯರ ವಿರೋಧಿಯಾಗಿದೆ ಎಂದರು.

ಶಿವಮೊಗ್ಗದಲ್ಲಿಯೂ ಕೂಡ ಸಂಸದ ರಾಘವೇಂದ, ಅವರು ಅಭಿವೃದಿಯ ಕಡೆ ಗಮನಹರಿಸಲಿಲ್ಲ. ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ ಮುಚ್ಚಿ ಹೋಗುವ ಆತಂಕದಲ್ಲಿದೆ.

ಸಾರ್ವಜನಿಕ ಉದ್ಯಮಿಗಳನ್ನು ಖಾಸಗಿ ಯವರಿಗೆ ವರ್ಗಾಯಿಸುವ ಹುನ್ನಾರ ನಡೆದಿದೆ. ಈ ಎಲ್ಲಾ ಹಿನ್ನಲೆಯಲ್ಲಿ ನಾವು ಗೀತಾ ಶಿವರಾಜ್ ಕುಮಾ‌ರ್ ಅವರನ್ನು ಬೆಂಬಲಿಸುತ್ತೇವೆ. ಅಷ್ಟೇ ಅಲ್ಲ ನಮ್ಮ ಪಕ್ಷ ಸ್ವತಂತ್ರವಾಗಿ ಮನೆ ಮನೆಗೆ ಹೋಗಿ ಪ್ರಚಾರ ಮಾಡುವುದರ ಮೂಲಕ ಗೀತಾ ಶಿವರಾಜ್ ಕುಮಾ‌ರ್ ಅವರನ್ನು ಗೆಲ್ಲಿಸುತ್ತೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಿಪಿಎಂನ ಜಿಲ್ಲಾ ಸಂಘಟನಾ ಕಾರ್ಯದರ್ಶಿ 
ಎಂ.ನಾರಾಯಣ್, ಪ್ರಭಾಕರನ್, ತುಳಸಿ ಪ್ರಭಾ, ಮಂಜಪ್ಪ ಇದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು