ಕಳೆದ ಹತ್ತು ವರ್ಷಗಳಲ್ಲಿ ದೇಶದ ರೈತರ ಆದಾಯ ಬದಲು ಸಾಲ ದುಪ್ಪಟ್ಟಾಗಿದೆ: ಎಂ.ರಮೇಶ್ ಶೆಟ್ಟಿ

ವಿಜಯ ಸಂಘರ್ಷ 
ಭದ್ರಾವತಿ: ಕಳೆದ 10 ವರ್ಷಗಳಲ್ಲಿ ಈ ದೇಶದ ರೈತರ ಆದಾಯ ದುಪ್ಪಟ್ಟು ಗೊಳಿಸುತ್ತೇವೆ ಎಂಬ ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿಯ ರೈತ ವಿರೋಧಿ ನೀತಿಯಿಂದಾಗಿ ಇಂದು ರೈತರ ಸಾಲ ದುಪ್ಪಟ್ಟಾಗಿದೆ ಎಂದು ಭದ್ರಾವತಿ ವಿಧಾನಸಭಾ ಕ್ಷೇತ್ರದ ಲೋಕಸಭಾ ಚುನಾವಣಾ ಉಸ್ತುವಾರಿ ಎಂ.ರಮೇಶ್ ಶೆಟ್ಟಿ ಇವರು ಅಭಿಪ್ರಾಯಪಟ್ಟಿದ್ದಾರೆ. 

ಪಕ್ಷದ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಪರ ಭದ್ರಾವತಿ ತಾಲ್ಲೂಕು ಕೂಡ್ಲಿಗೆರೆ, ಅರಳೀಹಳ್ಳಿ, ವೀರಾಪುರ ಗ್ರಾಮಗಳಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. 

2022ಕ್ಕೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಲಿದೆ. ದೇಶ ಸುವರ್ಣ ಮಹೋತ್ಸವ ಆಚರಿಸುವ ಸಂದರ್ಭದಲ್ಲಿ ದೇಶದ ರೈತರ ಆದಾಯ ದುಪ್ಪಟ್ಟು ಗೊಳಿಸಲಾಗುವುದು ಎಂಬ ಪ್ರಧಾನಿ ಮೋದಿ ಭರವಸೆ ನೀಡಿ 2019ರಲ್ಲಿ ಅಧಿಕಾರಕ್ಕೆ ಬಂದರು. ಆದರೆ ರೈತರಿಗೆ ಒಂದು ಕಡೆ ನೀಡಬೇಕಾದ ಸಬ್ಸಿಡಿ ಯನ್ನು ಕಡಿಮೆ ಮಾಡಿದರು. ಇನ್ನೊಂದೆಡೆ 150 ರೂಪಾಯಿ ಇದ್ದ ಡಿಎಪಿ ಬೆಲೆ 300 ಕ್ಕೆ ಏರಿಸಿದರು. ಬಿಜೆಪಿ ಸರ್ಕಾರದ ಇಂತಹ ದ್ವಂಧ್ವ ನೀತಿಯಿಂದಾಗಿ ರೈತರ ಆದಾಯ ದುಪ್ಟಟ್ಟಾಗುವ ಬದಲು ಸಾಲ ದುಪ್ಪಟಾಗಿದೆ ಎಂದರು. 

ಇಂದು ರಾಜ್ಯ ಸರ್ಕಾರ ನುಡಿದಂತೆ ನಡೆದಿದೆ. ಸರ್ಕಾರದ ಗ್ಯಾರಂಟಿಗಳು ಸುಮಾರು ನಾಲ್ಕೂವರೆ ಕೋಟಿ ಜನರ ಮನೆಗಳನ್ನು ತಲುಪಿದೆ. ಬಡವರು, ರೈತರು, ಕೂಲಿ ಕಾರ್ಮಿಕರು, ಯುವಕರು, ಮಹಿಳೆಯರು ರಾಜ್ಯದ ಗ್ಯಾರಂಟಿಯಿಂದಾಗಿ ನೆಮ್ಮದಿಯ ಬದುಕನ್ನು ಕಂಡುಕೊಂಡಿದ್ದಾರೆ.
ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರಕ್ಕೆ ಬಂದರೆ ಇನ್ನಷ್ಟು ಗ್ಯಾರಂಟಿಗಳ ಭರವಸೆ ನೀಡಿದೆ. ಇವುಗಳು ಹಾಗೂ ಬಂಗಾರಪ್ಪಜೀ ಯವರು ಮಾಡಿರುವ ಜನಹಿತ ಕಾರ್ಯಗಳಿಂದಾಗಿ ನಮ್ಮ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಗೆಲುವು ಶತಸಿದ್ಧವೆಂದು ಭರವಸೆ ವ್ಯಕ್ತಪಡಿಸಿದರು. 

ಸಭೆಯಲ್ಲಿ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಡಾಕ್ಷರಿ, ನಗರಾಧ್ಯಕ್ಷ ಎಸ್.ಕುಮಾರ್, ಗ್ಯಾರಂಟಿ ಅನುಷ್ಠಾನ ಯೋಜನಾ ಸಮಿತಿ ಅಧ್ಯಕ್ಷ ಮಣಿಶೇಖರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬಲ್ಕೀಶ್ ಬಾನು, ಮುಖಂಡರಾದ ತಳ್ಳಿಕಟ್ಟಿ ಲೋಕೇಶ್, ಹಾಲೇಶ್ ನಾಯಕ, ಜುಂಜಾನಾಯಕ್, ಮುರುಗೇಶ್ ಮತ್ತಿತರರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು