2 ಲಕ್ಷ ಮತಗಳ ಅಂತರದಿoದ ಗೆಲುವು ನಿಶ್ಚಿತ : ಬಿ.ವೈ.ರಾಘವೇಂದ್ರ

ವಿಜಯ ಸಂಘರ್ಷ 
ಸಾಗರ (ಆನಂದಪುರ): ಸಕಲರ ಅಭಿವೃದ್ಧಿಗಾಗಿ, ದೇಶದ ಏಳಿಗೆಗಾಗಿ, ಶಿವಮೊಗ್ಗದಲ್ಲಿ ಕಾಣುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಗುರುತಿಸಿ ಭಾರತೀಯ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ 2 ಲಕ್ಷಕ್ಕೂ ಅಧಿಕ ಮತಗಳ ಅಂತರದಿoದ ಗೆಲುವು ನಮ್ಮದಾಗಲಿದೆ ಎಂದು ಬಿ.ಜೆ.ಪಿ. ಅಭ್ಯರ್ಥಿ ಬಿ.ವೈ.ರಾಘವೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ಅವರು ತಮ್ಮ ಸ್ವಕ್ಷೇತ್ರ ಶಿಕಾರಿಪುರದಲ್ಲಿ ಮತಚಲಾಯಿಸಿ ಶಿವಮೊಗ್ಗಕ್ಕೆ ತೆರಳುವ ಮಾರ್ಗ ಮಧ್ಯೆ ಆನಂದಪುರದಲ್ಲಿ ಕಾರ್ಯಕರ್ತರನ್ನು ಭೇಟಿಯಾಗಿ ಮಾತನಾಡುತ್ತಿದ್ದರು. ಪಕ್ಷದ ಎಲ್ಲಾ ಕಾರ್ಯಕರ್ತರ ಅವಿರತ ಪರಿಶ್ರಮದ ಫಲವಾಗಿ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಸಂತಸವನ್ನುoಟು ಮಾಡಿದೆ. ಅತ್ಯಾದಿಕ ಮತಗಳ ಅಂತರದಿoದ ಗೆಲ್ಲುತ್ತೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಚುನಾವಣೆಯಲ್ಲಿ ಉತ್ತಮ ರೀತಿಯಲ್ಲಿ ಮತದಾನವಾಗಿದ್ದು. ನಗರ ಹಾಗೂ ಗ್ರಾಮೀಣ ಭಾಗಗಳೆರಡರಲ್ಲೂ ಮತದಾರರು ಅತ್ಯಂತ ಸಂಭ್ರಮ ಉತ್ಸಾಹ ದಿಂದ ಮತದಾನದಲ್ಲಿ ಪಾಲ್ಗೊಂಡಿರುವುದು ಸಂತಸ ತಂದಿದೆ ಎಂದರು.

ಭಾರತ ದೇಶದ ಉನ್ನತಿಗಾಗಿ ಜನತೆ ಮೋದಿಜಿ ಯವರನ್ನು ಬೆಂಬಲಿಸುತ್ತಿದ್ದಾರೆ. ಶಿವಮೊಗ್ಗ ಕ್ಷೇತ್ರದಲ್ಲಿ ಆಗಿರುವ ಹಾಗೂ ಆಗುತ್ತಿರುವ ಸಮಗ್ರ ಅಭಿವೃದ್ಧಿಯನ್ನು ಕಂಡ ಮತದಾರರು ನನಗೆ ಹೆಚ್ಚಿನ ಲೀಡ್ ನೀಡಿ ಚುನಾಯಿಸುವ ವಿಶ್ವಾಸವಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು