ಸಂಜೆ ತಂಪಿನಲ್ಲಿ ಶಿವಮೊಗ್ಗದ ನಡುರಸ್ತೆಯಲ್ಲಿ ಹರಿದ ಬಿಸಿ ನೆತ್ತರು...?

ವಿಜಯ ಸಂಘರ್ಷ 
ಶಿವಮೊಗ್ಗ: ನಗರದ ಲಷ್ಕರ್ ಮೊಹಲ್ಲಾದ ನಡು ರಸ್ತೆಯಲ್ಲಿಯೇ ಇಬ್ಬರು ಯುವಕರ ಮೇಲೆ ಕಲ್ಲು ಚಪ್ಪಡಿ ಗಳನ್ನು ಎತ್ತಿಹಾಕಿ ಬರ್ಬರ ವಾಗಿ ಕೊಲೆ ಮಾಡಲಾಗಿದೆ. 

ಈ ಕೊಲೆ ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಲಷ್ಕರ್ ಮೊಹಲ್ಲಾದ ಜನತಾ ಮಟನ್ ಸ್ಟಾಲ್ ಎದರು ಘಟನೆ ನಡೆದಿದ್ದು, 

ಕೊಲೆಯಾದ ಯುವಕರನ್ನು ಜೆಪಿ ನಗರದ ಶೋಹೆಬ್ ಮತ್ತು ಗೌಸ್ ಕೊಲೆಯಾದ ವ್ಯಕ್ತಿಗಳು ಎಂದು ತಿಳಿದು ಬಂದಿದೆ. ಇನ್ನು ಕೊಲೆಯಾದ ಇಬ್ಬರೂ ಯುವಕರನ್ನು ರೌಡಿಶೀಟರ್ ಯಾಸಿನ್ ಕಡೆಯವರು ಎಂದು ಹೇಳಲಾಗುತ್ತಿದೆ. ರೌಡಿಗಳ ನಡುವೆ ನಡೆದ ಗಲಾಟೆ ಯಿಂದಾಗ ಮರ್ಡರ್ ಆಗಿರಬಹುದು ಎಂದು ಅಂದಾಜಿಸಲಾಗಿದೆ. ಇದೇ ವೇಳೆ ರೌಡಿ ಶೀಟರ್ ಯಾಸೀನ್ ಮೇಲೆಯೂ ಮಾರಣಾಂತಿಕ ದಾಳಿ ಮಾಡಲಾಗಿದೆ. 

ಈ ವೇಳೆ ದುಷ್ಕರ್ಮಿಗಳ ತಂಡದಿಂದ ತಪ್ಪಿಸಿಕೊಂಡ ಯಾಸೀನ್ ಸ್ಥಳೀಯರ ನೆರವಿನಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು