ಭದ್ರಾ ನದಿಯ ಕೆಸರಿನಲ್ಲಿ ಸಿಲುಕಿ ಕೊಂಡಿದ್ದ ಹಸುವಿನ‌ ರಕ್ಷಣೆ

ವಿಜಯ ಸಂಘರ್ಷ 
ಭದ್ರಾವತಿ: ಭದ್ರಾ ನದಿಯ ಕೆಸರಿನಲ್ಲಿ ಸಿಲುಕಿಕೊಂಡಿದ್ದ ಗೋವನ್ನ ಅಗ್ನಿ ಶಾಮಕ ದಳ‌ ರಕ್ಷಿಸಿದ ಘಟನೆ ಇಂದು ನಡೆದಿದೆ.

ನಗರದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಹಿಂಭಾಗದಲ್ಲಿ ಹಸು ಮೇಯಿಕೊಂಡು ಹೋಗಿ ಕೆಸರಿನಲ್ಲಿ ಸಿಲುಕಿ ಹೂತುಕೊಂಡಿದ್ದ ಹಸುವನ್ನು ಸಾರ್ವಜನಿಕರು ಕಂಡು ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದಾರೆ. ಸತತ ಒಂದು ಗಂಟೆಯ ಪ್ರಯತ್ನದ ನಂತರ ಹಸುವನ್ನ ಅಗ್ನಿಶಾಮಕ ದಳ ರಕ್ಷಿಸಿದೆ.

ಹಸುವಿನ ಮಾಲಿಕ ಹಳೇನಗರದ ಹಳದಮ್ಮ ಕೇರಿಯ ಗುರುರಾಜ್ ಇದೇ ವೇಳೆ ಹೊಳೆಯಲ್ಲಿ ಹಸುವೊಂದು ಬಿದ್ದಿರುವ ವಿಷಯ ತಿಳಿದು ಸ್ಥಳಕ್ಕೆ ಹುಡುಕಿಕೊಂಡು ಬಂದಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು