ಕಪ್ಪು ಚುಕ್ಕೆಯಿಲ್ಲದೆ ಮೋದಿ ಆಡಳಿತ: ಎಸ್.ದತ್ತಾತ್ರಿ

ವಿಜಯ ಸಂಘರ್ಷ 
ಭದ್ರಾವತಿ: ಮೋದಿಯವರ 10 ವರ್ಷಗಳ ಆಡಳಿತದಲ್ಲಿ ಒಂದು ಕಪ್ಪು ಚುಕ್ಕಿಯಿಲ್ಲದ ಭ್ರಷ್ಟಾಚಾರ ಮುಕ್ತ ಅಮೋಘ ಆಡಳಿತ ನಡೆಸಿದ್ದಾರೆಂದು ಬಿಜೆಪಿ ರಾಜ್ಯ ಪ್ರಕೋಷ್ಟ ಪ್ರಧಾನ ಕಾರ್ಯದರ್ಶಿ ಎಸ್.ದತ್ತಾತ್ರಿ ಹೇಳಿದರು.

ಅವರು ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿ, ಮೋದಿ ಯವರು 'ತಿನ್ನಲ್ಲ ತಿನ್ನಲು ಬಿಡಲ್ಲ' ಎಂದು ಹೇಳಿ ಆಡಳಿತದಲ್ಲಿ ಪಾರದರ್ಶಕತೆ ತೋರಿದ್ದಾರೆ. ಮತ್ತೆ ತಲೆ ಎತ್ತಿ ನಿಂತು ಮತ ಕೇಳುವಂತೆ ಮಾಡಿದ್ದಾರೆ.

ಧಾರ್ಮಿಕತೆ ಸೇರಿದಂತೆ ಪ್ರಣಾಳಿಕೆಯಲ್ಲಿ ಹೇಳಿದ್ದಂತೆ ಭರವಸೆಗಳನ್ನು ಈಡೇರಿಸಿದ್ದಾರೆ. ದೇಶದಲ್ಲಿ 5 ರಿಂದ 6.3 ರಷ್ಟು ಉದ್ಯೋಗ ಸೃಷ್ಟಿಸಿದ್ದಾರೆ. ಸಿದ್ದರಾಮಯ್ಯ ಸರಕಾರದಲ್ಲಿ ಒಂದು ಉದ್ಯೋಗವೂ ನೀಡಿಲ್ಲ. ಅರ್ಧ ಕಿಲೋ ಮೀಟರ್ ರಸ್ತೆಯನ್ನೂ ಮಾಡಿಲ್ಲ. ಲವ್ ಜಿಹಾದ್, ಅಲ್ಪಸಂಖ್ಯಾತರಿಗೆ ಮಣೆ ಹಾಕುವ ಕೆಲಸ ಮಾಡುತ್ತಿದ್ದಾರೆ.

 ಮುಸ್ಲಿಮರಿಗೆ ಒಬಿಸಿ ಮೀಸಲಾತಿ ನೀಡಲು ಹೊರಟಿರುವುದು ಖಂಡನೀಯ. ಹಿಂದೂ ವಿರೋಧಿ ಸರಕಾರವಾಗಿದೆ. ಆದ್ದರಿಂದ ಈ ಕೆಲಸಕ್ಕೆ ಕೈ ಹಾಕಲ್ಲವೆಂದು ಲಿಖಿತ ನೀಡಬೇಕೆಂದರು.

ಕಾಂಗ್ರೇಸ್‌ಗೆ ಮತ ನೀಡಿದರೆ ಜಿಹಾದ್‌ಗೆ ನೀಡಿದಂತಾಗುತ್ತದೆ. ರಾಹುಲ್ ಗಾಂಧಿ ಲೋಕ ಸಮರದಲ್ಲಿ ಐಕಾನಾಗಿ ಹೊರ ಹೊಮ್ಮಲು ವಿಪಲರಾಗಿದ್ದಾರೆ. ಮೋದಿ ಯವರ ಅವಹೇಳನಕಾರಿ ಕುರಿತು ಮಾತುಗಳನ್ನಾ ಡುವುದು ಸಲ್ಲದು. ಕಾಂಗ್ರೇಸ್ ನೈತಿಕತೆ ಯಿಲ್ಲದ ಶೇ 40 ಕಮೀಷನ್ ಸರಕಾರ ವಾಗಿದೆ. ಸಂಸದ ಬಿ.ವೈ.ರಾಘವೇಂದ್ರ ಮಾಡಿದ ಅಭಿವೃದ್ಧಿ ಕಾವ್ಯಗಳಿಂದ ಮತ ಕೇಳಲು ನೈತಿಕತೆ ತಂದು- ಕೊಟ್ಟಿದ್ದಾರೆ. 20 ಸಾವಿರ ಕೋಟಿ ರೂ ಅನುದಾನ ತಂದು ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿದೆ.
ಕೃಷಿ ಆಧಾರಿತ ಜಿಲ್ಲೆಯಾಗಿಸಲು 2 ಸಾವಿರ ಕೋಟಿ ತಂದು ಲೋಕಾರ್ಪಣೆ ಮಾಡಿದ್ದಾರೆ.

ಕೈಗಾರಿಕಾ ವಲಯವನ್ನಾಗಿಸಲು ಹೈವೇ ರಸ್ತೆ, ರೈಲ್ವೆ, ವಿಮಾನ ನಿಲ್ದಾಣ ಮಾಡಲಾಗಿ ಹೊಸ ಕೈಗಾರಿಕೆಗಳ ಆಗಮನವಾಗುತ್ತಲಿದೆ. ಇದರಿಂದ ವಿಐಎಎಲ್ ಪುಶ್ವೇತನ ಆಗುವ ಲಕ್ಷಣಗಳಿವೆ. ಟೂರಿಸಂ ಸೆಂಟರ್, ಶೈಕ್ಷಣಿಕ ವಲಯವಾಗಲು ಸಂಸದ ಬಿ.ವೈ. ರಾಘವೇಂದ್ರ ಕಾರಣರಾಗಿದ್ದಾರೆ. ಮತ್ತಷ್ಟು ಅಭಿವೃದ್ದಿ ಕಾರ್ಯಗಳಾದ ಒಂದೇ ಭಾರತ್ ರೈಲು, ನ್ಯಾಷನಲ್ ಹೆಲ್ತ್ ಇನ್ಸ್‌ಟಿಟ್ಯೂಟ್ ಬರಲಿದೆ. ಆದ್ದರಿಂದ ಲೋಕಸಭೆ ಚುನಾವಣೆ ಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರನ್ನು ಮತ್ತೊಮ್ಮೆ ಗೆಲ್ಲಿಸಿ ದೆಹಲಿಗೆ ಕಳಿಸೋಣ. ಎಲ್ಲರೂ ಅವರನ್ನು ಬೆಂಬಲಿಸಿ ಮತ ಹಾಕುವಂತೆ ಮನವಿ ಮಾಡಿದರು.

 ಪತ್ರಿಕಾ ಗೋಷ್ಟಿಯಲ್ಲಿ ಬಿಜೆಪಿ ಅಧ್ಯಕ್ಷ ಧರ್ಮಪ್ರಸಾದ್, ಮಾಧ್ಯಮ ಪ್ರಮುಖ್ ಕಾ.ರಾ.ನಾಗರಾಜ್ ಮುಂತಾದವರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು