ವಿಜಯ ಸಂಘರ್ಷ
ಶಿವಮೊಗ್ಗ: ಭಾರತದ ಬಹುದೊಡ್ಡ ಲೋಕಸಭಾ ಚುನಾವಣೆಯಾಗಿದ್ದು ಜನವಾಸಿಗಳಿಗೆ ಮತದಾನದ ಹಕ್ಕನ್ನು ತಿಳಿಸುವ ದೃಷ್ಟಿಯಿಂದ ಪತ್ರಕರ್ತ ಹಾಗೂ ಲೇಖಕರಾದ ಗಾ.ರಾ. ಶ್ರೀನಿವಾಸ್ ವಿರಚಿತ "ಬನ್ನಿ ಮತಗಟ್ಟಗೆ" ಎನ್ನುವ ಕೃತಿಯನ್ನು ವಿವಿಧ ಸಂಘಟನೆಯ ಪ್ರಮುಖರು ಬಿಡುಗಡೆಗೊಳಿಸಿದರು.
ಮತದಾನ ಎಂಬುದು ಬದುಕಿನ ಹಕ್ಕು, ಅದು ಉತ್ತಮ ಜನಪ್ರತಿನಿಧಿ ಆಯ್ಕೆಗೆ, ಸದೃಡ ಸಮಾಜ ನಿರ್ಮಾಣಕ್ಕೆ ಪ್ರತಿಪಾದಿಸುತ್ತದೆ, ಪ್ರಜಾಪ್ರಭುತ್ವದ ವಿಶೇಷವಾದ ಹಕ್ಕಿನ ಸ್ವಾತಂತ್ರತೆಯನ್ನು ಜನತೆ ಕಳೆದುಕೊಳ್ಳ ಬಾರದು ಎಂದು ತಿಳಿಸಿದರು.
ಈ ಕೃತಿ ಯಲ್ಲಿರುವ ಪದ್ಯಗಳು ಜಾಗೃತ ಮೂಡಿಸುವಂತಹ ನಿಟ್ಟಿನಲ್ಲಿ ಓದುಗರರಿಗೆ ಸಾರ್ವಜನಿಕರಿಗೆ ಸಂದೇಶವನ್ನು ಕಟ್ಟಿಕೊಡುತ್ತದೆ ಎಂದು ಲೇಖಕ ಗಾ.ರಾ.ಶ್ರೀನಿವಾಸ್ ಹೇಳಿದರು.
ಈ ಸಂದರ್ಭದಲ್ಲಿ ಕೆ.ಎಸ್ ವಾಲಿಬಾಲ್ ಶಶಿ, ಶ್ರೀನಾಥ್, ಕಿರಣ್, ಪತ್ರಕರ್ತರಾದ ಭರತೇಶ್ ಆದೀಶೇಷ್, ಕರವೇ ಯುವಸೇನೆಯ ಜಿಲ್ಲಾಧ್ಯಕ್ಷ ಕಿರಣ್ ಕರವೇ, ರಂಗಕರ್ಮಿ ಶಿವಕುಮಾರಯ್ಯ ಮಾರವಳ್ಳಿ ಮತ್ತಿತರಿದ್ದರು.