ವಿಜಯ ಸಂಘರ್ಷ
ಭದ್ರಾವತಿ: ಮರಾಠ ಸಮಾಜಕ್ಕೆ ತನ್ನದೇ ಆದ ಇತಿಹಾಸವಿದೆ. ಸಮಾಜದ ಏಳಿಗೆಗಾಗಿ ಮತ್ತು ಒಡೆದೆ ಕುಳಿತು ಸಂಘಟನಾತ್ಮಕ ಚಟುವಟಿಕೆಗಳಿಗೆ ಸಹಕಾರಿಯಾಗಲು ಆದಷ್ಟು ಬೇಗನೆ ನಿವೇಶನ ಖರೀದಿಸಿ ಚೆಕ್ ಸಮುದಾಯ ಭವನ ನಿರ್ಮಿಸಲು ಮುಂದಾಗಿ ಎಂದು ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ರಾಜ್ಯಾಧ್ಯಕ್ಷ ಸುರೇಶ್‌ರಾವ್ ಸಾಠ ಹೇಳಿದರು.
ಅವರು ಕೆಕೆಎಂಪಿ ಶಾಖೆಯ ವಿದ್ಯಾರ್ಥಿ ನಿಲಯ ಭೂಮಿ ಪೂಜೆ ನೆರವೇರಿಸಿ ನಂತರ ತಾಲೂಕು ಅಧ್ಯಕ್ಷ ಶಿವಾಜಿರಾವ್ ಗಾಯಕ್ವಾಡ್ ರವರಿಗೆ 5 ಲಕ್ಷ ರೂ ವಿತರಿಸಿ ಮಾತನಾಡಿ ರಾಜ್ಯದ ಎಲ್ಲಾ ತಾಲೂಕು ಗಳಲ್ಲಿ ಸಮುದಾಯ ಭವನಗಳನ್ನು ನಿರ್ಮಿಸಿ ಸಮಾಜದವರ ಅಭಿವೃದ್ದಿ ಕಾಣಬೇಕಾಗಿದೆ. ಅದರಂತೆ ಆದಷ್ಟು ಬೇಗ ನಿವೇಶನ ಖರೀದಿಸಿ ಭವನ ನಿರ್ಮಾಣಕ್ಕೆ ಮುಂದಾಗಿ ಎಂದು ಕಿವಿ ಮಾತು ಹೇಳಿದರು.
ಚೆಕ್ ಸ್ವೀಕರಿಸಿ ಮಾತನಾಡಿದ ಶಿವಾಜಿ ರಾವ್ ಗಾಯಕ್ವಾಡ್ ಮಾತನಾಡಿ, ತಾಲೂಕು ಮರಾಠ ಪರಿಷತ್ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಸಮಾಜ ಬಾಂಧ ವರಿಗೆ ಸಂಘಟನೆಗೆ ಬೇಕಾದ ಮಾಹಿತಿ ನೀಡಲಾಗುತ್ತಿದೆ. ಆದಷ್ಟು ಬೇಗನೇ ತಾಲೂಕಿನ ಭದ್ರಾ ಕಾಲೋನಿಯ ಕಣಕಟ್ಟೆಯಲ್ಲಿ ಗುರುತಿಸಲಾದ ನಿವೇಶನದಲ್ಲಿ ಸುಂದರ ಸಮುದಾಯ ಭವನ ನಿರ್ಮಿಸಲು ರಾಜ್ಯ ಸಮಿತಿಯು ಈಗ ನೀಡಿರುವ 5 ಲಕ್ಷ ರೂ ಸೇರಿ ಒಟ್ಟು 37 ಲಕ್ಷ ರೂ ನೀಡಿದೆ ಎಂದು ತಿಳಿಸಿ ರಾಜ್ಯ ಸಮಿತಿಗೆ ಅಭಿನಂದಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಪದಾಧಿಕಾರಿ ಗಳಾದ ಸುನಿಲ್ ಚವ್ಹಾಣ್, ವೆಂಕಟರಾವ್ ಚವ್ಹಾಣ್, ಶ್ರೀನಿವಾಸರಾವ್, ಶಿವಮೊಗ್ಗ ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿ ಗಳಿದ್ದರು.