ಕುರಿಗಳ ಕಳುವು ಸಿಸಿಟಿವಿಯಲ್ಲಿ ಸೆರೆಯಾಗಿತ್ತು ಅಸಲಿಯತ್

ವಿಜಯ ಸಂಘರ್ಷ 
ಭದ್ರಾವತಿ: ಕುರಿ ಶೆಡ್‌ನ ಬೀಗ ಮುರಿದು ನಾಲ್ಕು ಕುರಿಗಳನ್ನು ಕಳವು ಮಾಡಲಾಗಿದೆ. ಬೆಳ್ಳಿಗೆರೆ ಗ್ರಾಮದ ಅಡಿಕೆ ತೋಟದಲ್ಲಿದ್ದ ಕುರಿ ಶೆಡ್‌ನಲ್ಲಿ ಕೃತ್ಯ ನಡೆದಿದೆ. 

ಮೇ: 25 ರಂದು ಬೆಳಗ್ಗೆ ಮಾಲೀಕ ರಾಮಚಂದ್ರ ಕುರಿಗಳಿಗೆ ಮೇವು ಹಾಕಲು ಬಂದಾಗ ನಾಲ್ಕು ಕುರಿಗಳು ಕಳುವಾಗಿರು ವುದು ಗೊತ್ತಾಗಿದೆ. 

ಶೆಡ್‌ನಲ್ಲಿ ಒಟ್ಟು 7 ಕುರಿಗಳನ್ನು ಸಾಕಿದ್ದರು. ಮೇ 24ರ ರಾತ್ರಿ ನಾಲ್ಕು ಕುರಿಗಳು ಕಳುವಾಗಿದ್ದವು. ಸಿಸಿಟಿವಿ ಪರಿಶೀಲಿಸಿದಾಗ ಮೂವರು ಕಳ್ಳರು ತೋಟಕ್ಕೆ ನುಗ್ಗಿ, ಕುರಿ ಶೆಡ್‌ನ ಬೀಗ ಮುರಿದು ಕಳ್ಳತನ ಮಾಡಿರುವುದು ಸೆರೆಯಾಗಿತ್ತು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು