ವಿಜಯ ಸಂಘರ್ಷ
ಭದ್ರಾವತಿ: ಮೈತ್ರಿ ಅಭ್ಯರ್ಥಿ ಡಾ.ಸರ್ಜಿ ಯವರು ವೈದ್ಯಕೀಯ ಲೋಕದಲ್ಲಿ ದೊಡ್ಡ ಹೆಸರಿದೆ. ಈ ಚುನಾವಣೆಯಲ್ಲಿ ಚುನಾಯಿತರಾದರೆ ಜಿಲ್ಲೆಯಲ್ಲಿ ಅವರನ್ನು ನಂಬಿರುವ ಸಾವಿರಾರು ರೋಗಿಗಳಿಗೆ ಅನಾನುಕೂಲ ವಾಗಲಿದೆ. ಅವರ ಸೇವೆ ವೈದ್ಯಕೀಯ ಕ್ಷೇತ್ರಕ್ಕೆ ತುಂಬಾ ಅಗತ್ಯವಿದೆ. ಹಾಗಾಗಿ ನಾಲ್ಕು ಸದನಗಳನ್ನು ಪ್ರತಿನಿಧಿಸಿರುವ ಅನುಭವ ರಾಜಕಾರಣಿ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಗೆಲ್ಲಿಸಿದರೆ ಪದವೀಧರರ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಸಹಕಾರಿಯಾಗಲಿದೆ ಎಂದು ಕೆಪಿಸಿಸಿ ವಕ್ತಾರ ಎಂ.ರಮೇಶ್ ಶೆಟ್ಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹಾಲಿ ಪರಿಷತ್ ಸದಸ್ಯ ಎಸ್.ಎಲ್. ಬೋಜೇಗೌಡರು ಕಳೆದ ಬಾರಿಯ ಚುನಾವಣೆಯಲ್ಲಿ ನಡೆಸಿದ ಯಾವ ತಂತ್ರಗಾರಿಕೆಯೂ ಈ ಬಾರಿ ವರ್ಕೌಟ್ ಆಗುವುದಿಲ್ಲ.
ಸ್ವತ: ಶಿಕ್ಷಕರಾಗಿರುವ, ಶಿಕ್ಷಕರ ಬಗ್ಗೆ ಅತೀವ ಕಾಳಜಿ ಹೊಂದಿರುವ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಡಾ.ಕೆ.ಕೆ.ಮಂಜುನಾಥ ಕುಮಾರ್ ಸುಲಭವಾಗಿ ಗೆಲುವು ಸಾಧಿಸಲ್ಲಿದ್ದಾರೆಂದು ರಮೇಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.