ವಿಜಯ ಸಂಘರ್ಷ
ಭದ್ರಾವತಿ: ದ್ವಿಚಕ್ರ ವಾಹನಗಳಲ್ಲಿ 9 ತಿಂಗಳಿ ನಿಂದ ಮೇಲ್ಪಟ್ಟ ಮಕ್ಕಳನ್ನು ಕರೆದೊಯ್ಯ ವಾಗ ಮಕ್ಕಳಿಗೆ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ ಎಂದು ನ್ಯೂಟೌನ್ ಪಿಎಸ್ ಐ ಡಿ.ಸಿ.ಸ್ವಾತಿ ಹೇಳಿದರು.
ಆಟೋ ಚಾಲಕರ ಮತ್ತು ದ್ವಿಚಕ್ರ ವಾಹನ ಚಾಲಕರುಗಳಿಗಾಗಿ ಆಯೋಜಿಸಲಾದ "ರಸ್ತೆ ಸುರಕ್ಷತಾ ಜನ ಜಾಗೃತಿ ಜಾಥಾ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಮಾತನಾಡಿ, ಮಕ್ಕಳ ಜೀವ ಅಮೂಲ್ಯ ವಾದದ್ದು.ಮುಗ್ಧ ಮನಸುಗಳ ಕನಸು ಗಳನ್ನು ಬಾಲ್ಯದಲ್ಲಿಯೇ ಚಿವುಟದಿರಿ. ನಿಮ್ಮ ಮಕ್ಕಳ ಭವಿಷ್ಯ ಮತ್ತು ಸುರಕ್ಷತೆ ಗಾಗಿ ಕಡ್ಡಾಯವಾಗಿ ಹೆಲೈಟ್ ಹಾಗೂ ಸೇಷ್ಟಿ ಹಾರ್ನೆಸ್ ಬಳಸುವುದರ ಬಗ್ಗೆ ಕರ್ನಾಟಕ ಉಚ್ಚ ನ್ಯಾಯಾಲಯದ ಅದೇಶದಂತೆ ಚಾಲಕರು ಸುರಕ್ಷತಾ ಕ್ರಮ ಗಳನ್ನು ಕಡ್ಡಾಯವಾಗಿ ಬಳಕೆ ಮಾಡುವ ಕುರಿತು ಜಾಗೃತಿ ನಡೆಸಲಾಗುತ್ತಿದೆ ಎಂದರು.
ಅಲ್ಲದೆ ದ್ವಿ ಚಕ್ರ ವಾಹನ ಸವಾರರು ಹಿಂಬದಿ ಸವಾರರು ಹೆಲೈಟ್ ಧರಿಸುವುದು. ಕಡ್ಡಾಯವಾಗಿ ಚಾಲನ ಪರವಾನಿಗೆ ವಿಮೆ ಪತ್ರ, ಹೊಗೆ ತಪಾಸಣೆ ದಾಖಲಾತಿಗಳನ್ನು ಕಡ್ಡಾಯವಾಗಿ ವಾಹನದಲ್ಲಿಡುವುದು ಮತ್ತು ವಾಹನ ಚಲಾವಣೆಯ ಸಂದರ್ಭದಲ್ಲಿ ಮಧ್ಯ ಪಾನ ಮಾಡಿ ಚಲಾವಣೆ ಮಾಡಿದರೆ 10 ಸಾವಿರದಿಂದ 25 ಸಾವಿರದ ವರೆಗೆ ದಂಡ ಹಾಕುವುದರೊಂದಿಗೆ ಚಾಲನ ಪರವಾನಿಗೆ ಅಮಾನತು ಪಡಿಸಲಾಗುವುದು.ದ್ವಿಚಕ್ರ ವಾಹನದಲ್ಲಿ ತ್ರಿಬಲ್ ರೈಡಿಂಗ್ ನಿಷೇಧಿಸಿದೆ. ವಾಹನ ಚಾಲನ ವೇಳೆ ಮೊಬೈಲ್ ಬಳಕೆಯನ್ನು ಸಹ ನಿಷೇಧಿಸ ಲಾಗಿದ್ದು ಅಪ್ರಾಪ್ತರಿಗೆ ವಾಹನ ಚಲಾಯಿಸಲು ನೀಡುವ ಪೋಷಕರಿಗೆ ರೂ 25 ಸಾವಿರ ದಂಡ ಮತ್ತು ಕೇಸ್ ದಾಖಲಿಸಲಾಗುವುದೆಂದು ಹೇಳಿ ಈ ಎಲ್ಲಾ ಸಾರಿಗೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ವಾಹನ ಚಾಲಕರಿಗೆ ತಿಳುವಳಿಕೆ ನೀಡಿದರು.
ಹೆಡ್ ಕಾನ್ಸ್ಟೇಬಲ್ ಗುಳ್ಯಪ್ಪ, ಶ್ರೀಧರ್ ಸಿಬ್ಬಂದಿಗಳಾದ ಅಶ್ವಿನಿ, ಪ್ರವೀಣ್, ರಮೇಶ್ಇನ್ನಿತರರು ಹಾಜರಿದ್ದರು.