ವಿಜಯ ಸಂಘರ್ಷ
ಕೆ.ಆರ್.ಪೇಟೆ: ದಕ್ಷಿಣ ಪದವೀಧರ ಶಿಕ್ಷಕರ ಸಂಘದ (ವಿಧಾನ ಪರಿಷತ್) ಚುನಾವಣೆ ಯಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿ ವಿವೇಕಾನಂದ ಅವರಿಗೆ ಮೊದಲ ಪ್ರಾಶಸ್ತ್ಯ ಮತಗಳನ್ನು ನೀಡುವುದರ ಮೂಲಕ ತಮ್ಮಗಳ ಸೇವೆಯನ್ನು ಮಾಡಲು ಬೆಂಬಲಿಸುವಂತೆ ತಾಲ್ಲೂಕಿನ ದಕ್ಷಿಣ ಪದವೀಧರ ಶಿಕ್ಷಕರಲ್ಲಿ ತಾಲ್ಲೂಕಿನ ಶಾಸಕರಾದ ಹೆಚ್ ಟಿ ಮಂಜು ಮನವಿ ಮಾಡಿದರು.
ನಾಳೆ ನಡೆಯಲಿರುವ ಚುನಾವಣೆ ಪ್ರಜ್ಞಾವಂತರ ಮೂಲಕ ಆಯ್ಕೆಯಾಗುವ ಚುನಾವಣೆ ಮತದಾರರು ನಮ್ಮ ಮೈತ್ರಿ ಅಭ್ಯರ್ಥಿಗೆ ಆಶೀರ್ವಾದ ಮಾಡಿ ಗೆಲ್ಲಿಸಿದರೆ. ನಾಲ್ಕು ಜಿಲ್ಲೆಗಳ ಶಿಕ್ಷಕರ ಸಂಘಟನೆಗಳ ಪದಾಧಿಕಾರಿಗಳನ್ನು ಭೇಟಿ ಮಾಡಿ ಅವರಿಂದ ಸಮಸ್ಯೆಗಳ ಪಟ್ಟಿ ಮಾಡಿ ಕಳೆದ 20 ವರ್ಷದಲ್ಲಿ ಬಗೆಹರಿಸದ ಸಮಸ್ಯೆಯನ್ನು ಪ್ರಾಮಾಣಿಕವಾಗಿ ಆರು ವರ್ಷದಲ್ಲಿ ಬಗೆಹರಿಸುವ ಪ್ರಯತ್ನವನ್ನು ಅವರ ಜೊತೆಗೂಡಿ ನಾನು ಮಾಡುತ್ತೇನೆ.ನಮ್ಮ ನಾಯಕರಾದ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು. ಎಚ್.ಡಿ ಕುಮಾರ ಸ್ವಾಮಿ ಅವರ ಮಾರ್ಗದರ್ಶನದಲ್ಲಿ ಶಿಕ್ಷಕರ ಕುಂದು ಕೊರತೆ ಕೇಳುವ ತಾಳ್ಮೆ ಇರುವ ನಮ್ಮ ಅಭ್ಯರ್ಥಿ ಕೆ.ವಿವೇಕಾನಂದ ಅವರಿಗೆ ಮೊದಲನೇ ಪ್ರಾಶಸ್ತ್ರ ಮತವನ್ನು ಎಲ್ಲಾ ಶಿಕ್ಷಕರು ನೀಡಬೇಕು ಇದುವರೆಗೆ ನಾಲ್ಕು ಬಾರಿ ಆಯ್ಕೆಯಾದವರು ಶಿಕ್ಷಣ ಕ್ಷೇತ್ರದಲ್ಲಿ ಅವರ ಸಾಧನೆ ಏನು ಎಂದು ನೀವೇ ಹರಿತುಕೊಳ್ಳಬೇಕು ಹಾಗಾಗಿ ಸಮಾಜ ಸೇವೆಯಲ್ಲಿ ಶಿಕ್ಷಕರ ಕಷ್ಟ ಸುಖವನ್ನು ಮೈಗೂಡಿಸಿಕೊಂಡು ಶಿಕ್ಷಕರಿಗೆ ಸ್ಪಂದಿಸುವ ನಮ್ಮ ಅಭ್ಯರ್ಥಿಗೆ ತಮ್ಮೆಲ್ಲರ ಅಮೂಲ್ಯವಾದ ಮೊದಲನೇ ಪ್ರಾಶಸ್ತ್ರ ಮತವನ್ನು ನೀಡುವುದರ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ನಮ್ಮ ಜೆಡಿಎಸ್ ಮತ್ತು ಬಿಜೆಪಿ ಅಭ್ಯರ್ಥಿ ಕೆ. ವಿವೇಕಾನಂದ ಅವರ ಗೆಲುವಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.
(✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ)