ವಿಜಯ ಸಂಘರ್ಷ
ಭದ್ರಾವತಿ: ಕಳಪೆ ಕಾಮಗಾರಿಗೆ ಸಾಕ್ಷಿಯಾದ ರಸ್ತೆ ಗುಂಡಿಗಳು ಎಂಬ ಶೀರ್ಷಿಕೆಯಡಿ ನಿನ್ನೆ ವಿಜಯ ಸಂಘರ್ಷದಲ್ಲಿ ಪ್ರಕಟಿಸಿದ ಸುದ್ದಿಗೆ ಮೋಕ್ಷ ದೊರೆತಿದೆ.
ಒಂದು ವರ್ಷದ ಹಿಂದೆ ಮಾಡಿ ಮುಗಿಸಿದ ರಸ್ತೆ ಡಾಂಬರೀಕರಣದ ಮಳೆಗೆ ಅಸಲೀ ಮತ್ತು ತೆರೆದುಕೊಂಡು ಎಲ್ಲೆಂದರಲ್ಲಿ ಗುಂಡಿಗಳು ಬಿದ್ದು ಕಳಪೆ ಕಾಮಗಾರಿಗೆ ಸಾಕ್ಷಿಯಾಗಿತ್ತು. ಸಂಬಂಧಿತ ಇಲಾಖೆಯ ಗುಂಡಿ ಮುಚ್ಚಲು ಮುಂದಾಗಿವೆ.
ಕಳೆದ ವರ್ಷ ಡಾಂಬರೀಕರಣ ಮಾಡಿ ಅಭಿವೃದ್ಧಿ ಪಡಿಸಲಾಗಿದ್ದ ನಗರದ ಅಂಡರ್ ಬ್ರಿಡ್ಜ್ ರೈಲ್ವೇ ಮೇಲ್ಸುತುವೆ ಕೆಳಭಾಗದ ತಿರುವಿನಲ್ಲಿ ದೊಡ್ಡ ಗುಂಡಿ ಬಿದ್ದಿದ್ದರೆ, ಅದರ ಪಕ್ಕದಲ್ಲೇ ಉಂಬೈಬೈಲು ರಸ್ತೆಗೆ ಹಾದು ಹೋಗುವ ರಸ್ತೆಯಲ್ಲಿ ಮತ್ತೊಂದು ದೊಡ್ಡ ಗಾತ್ರದ ಗುಂಡಿ ಬಿದ್ದು ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತಿತ್ತು.
ಈ ಹಿನ್ನಲೆಯಲ್ಲಿ ಸುದ್ದಿ ಪ್ರಕಟಿಸಿದ ಒಂದೇ ದಿನದಲ್ಲಿ ಗುಂಡಿಗಳನ್ನು ಕಲ್ಲುಗಳಿಂದ ಮುಚ್ಚಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ.
Tags:
ಭದ್ರಾವತಿ ಇಂಫ್ಯಾಕ್ಟ್ ವರದಿ