ವಿಜಯ ಸಂಘರ್ಷ
ಶಿವಮೊಗ್ಗ: ಹೋಟೆಲ್ ಉದ್ಯಮ ಒಂದು ಪ್ರಯಾಸಕರ ವ್ಯವಹಾರ. ದೇಶದಲ್ಲಿ ಅತಿ ಹೆಚ್ಚು ಉದ್ಯೋಗ ಅವಕಾಶ ಸೃಷ್ಟಿಸುವ ಉದ್ಯಮ ಹೋಟೆಲ್ ಕ್ಷೇತ್ರ ಎಂದು ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಹೇಳಿದರು.
ನಗರದ ಮಥುರಾ ಪಾರಾಡೈಸ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಮಥುರಾ ಪಾರಡೈಸ್ ರಜತೋತ್ಸವ ಸಮಿತಿಯ ವತಿಯಿಂದ ರಜತೋತ್ಸವ ಸಂಭ್ರಮಾಚರಣೆಯ ಉದ್ಘಾಟಿಸಿ ಮಾತನಾಡಿ,ಶಿಕ್ಷಣ ಪಡೆದವರು, ಪಡೆಯದೇ ಇರುವವರು ಸೇರಿದಂತೆ ಎಲ್ಲ ವರ್ಗದವರಿಗೂ ವಸತಿ, ಊಟದ ಜತೆಗೆ ಸಂಬಳ ನೀಡುವ ಉದ್ಯಮ ಹೋಟೆಲ್ ಆಗಿದೆ ಎಂದು ಹೇಳಿದರು.
ನಗರದಲ್ಲಿ ಗೋಪಿನಾಥ್ ಉಧ್ಯಮದ ಜೊತೆ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದು ಇತರೆ ಉದ್ಯಮಿದಾರರಿಗೆ ಮಾರ್ಗ ದರ್ಶಕರಾಗಿದ್ದರೆ ಎಂದು ಪ್ರಶಂಸಿಸಿದರು.
ನ್ಯಾಯವಾದಿ ಕೆ.ಪಿ.ಶ್ರೀಪಾಲ್ ಮಾತನಾಡಿ, ಮಥುರಾ ಹೋಟೆಲ್ ವ್ಯಾಪಾರ ವಹಿವಾಟಿನ ಜತೆಯಲ್ಲಿ ಸಮಾಜಮುಖಿ ವೇದಿಕೆಗಳಿಗೆ ಹೆಚ್ಚಿನ ಅವಕಾಶ ನೀಡುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ರುದ್ರೇಗೌಡ, ಮಾಜಿ ಸದಸ್ಯ ಆರ್.ಪ್ರಸನ್ನಕುಮಾರ್, ರಜತೋತ್ಸವ ಸಮಿತಿ ಅಧ್ಯಕ್ಷ ವಸಂತ ಹೋಬಳಿದಾರ್ ರವರು ಹೋಟೆಲ್ ಉದ್ಯಮಿ ಗೋಪಿನಾಥ್ ರವರ ಕಾರ್ಯ ವೈಖರಿ ಪ್ರಶಂಶಿಸಿದರು.
ಮಾಲೀಕ ಎನ್.ಗೋಪಿನಾಥ್ ಹಾಗೂ ಡಾ.ಲಕ್ಷ್ಮೀದೇವಿ ಗೋಪಿನಾಥ್ ಅವರಿಗೆ ರಜತೋತ್ಸವ ಸಮಿತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸಮಾರಂಭದಲ್ಲಿ ಬೃಹತ್ ಬೆಂಗಳೂರು ಹೋಟೆಲ್ಸ್ ಅಸೋಸಿಯೇಷನ್ ಕಾರ್ಯದರ್ಶಿ ವಿರೇಂದ್ರ ಕಾಮತ್, ಶಿವಮೊಗ್ಗ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಶಂಕರನಾರಾಯಣ ಹೊಳ್ಳ ಉಪಸ್ಥಿತರಿದ್ದರು.
ಅ.ನಾ.ವಿಜಯೇಂದ್ರ ರಾವ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜಿ.ವಿಜಯಕುಮಾರ್ ಸ್ವಾಗತಿಸಿ, ಕೃಷ್ಣಾನಂದ ಕೆ.ಜಿ. ಕಾರ್ಯಕ್ರಮ ನಿರೂಪಿಸಿದರೆ,ನಾಗಭೂಷಣ್ ವಂದಿಸಿದರು.
ಈ ಸಂದರ್ಭದಲ್ಲಿ ಶಿವಮೊಗ್ಗ ನಗರಕ್ಕೆ ಆಗಮಿಸಿದ ದಾವಣಗೆರೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದವರಿಗೆ ಗೌರವಿಸಿ ಸಭೆಗೆ ಅವರ ಕಾರ್ಯವೈಖರಿ ಪರಿಚಯಿಸಲಾಯಿತು.
Tags:
ಶಿವಮೊಗ್ಗ ಸುದ್ದಿ