ಉಪ ಕಸುಬುಗಳ ಮೂಲಕ ರೈತರು ಆರ್ಥಿಕವಾಗಿ ಸಬಲರಾಗಿ: ಡಾಲು ರವಿ

ವಿಜಯ ಸಂಘರ್ಷ 
ಕೆ.ಆರ್.ಪೇಟೆ: ರೈತರು ಕೃಷಿ ಜತೆಗೆ ಹೈನುಗಾರಿಕೆ, ಕುರಿ-ಕೋಳಿ ಸಾಕಣಿಕೆ ಸೇರಿದಂತೆ ವಿವಿಧ ಉಪ ಕಸುಬು ಗಳನ್ನು ಮಾಡುವ ಮೂಲಕ ರೈತರು ಆರ್ಥಿಕವಾಗಿ ಸಬಲರಾಗಬೇಕು ಎಂದು ಮನ್ಮುಲ್ ನಿರ್ದೇಶಕ ಡಾಲು ರವಿ ಹೇಳಿದರು.

ತಾಲೂಕಿನ ಶೀಳನೆರೆ ಹೋಬಳಿಯ ಪಿ.ಬಿ ಮಂಚನಹಳ್ಳಿ, ಗುಡುಗನಹಳ್ಳಿ, ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಗಳ ಆವರಣದಲ್ಲಿ ನೆಡೆದ 2023-24 ನೇ ಸಾಲಿನ ಸರ್ವಸದಸ್ಯ ವಾರ್ಷಿಕ ಮಹಾಸಭೆಯ ಉದ್ಘಾಟಿಸಿ ಮಾತನಾಡಿದರು.

ವಿವಿಧ ಕಾರಣಗಳಿಂದಾಗಿ ಇಂದು ಕೃಷಿಕರು ಅನೇಕ ಸಮಸ್ಯೆಗಳನ್ನು ಎದುರಿಸುವಂತಾ ಗಿದೆ. ಬರಗಾಲ, ಬೆಳೆ ಹಾನಿ, ಅತಿವೃಷ್ಟಿ ಗಳಿಂದಾಗಿ ರೈತರು ಆದಾಯ ಲಭಿಸದೇ ಸಾಲಗಾರರಾಗು ವಂತಾಗುತ್ತದೆ. ಅಂಥ ಸಂದರ್ಭಗಳಲ್ಲಿ, ಹೈನುಗಾರಿಕೆ ಕೃಷಿಕರ ಕೈ ಹಿಡಿಯುತ್ತದೆ ಎಂದು ತಿಳಿಸಿದರು.ಹಿಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಜನರು ತಮ್ಮಲ್ಲಿ ಲಭಿಸುವ ಹಾಲು, ಮೊಸರು, ಮಜ್ಜಿಗೆ, ತುಪ್ಪ ಸೇರಿದಂತೆ ವಿವಿಧ ಹೈನು ಉತ್ಪನ್ನಗಳನ್ನು ಉಚಿತವಾಗಿ ವಿನಿಮಯ ಮಾಡಿಕೊಳ್ಳುತ್ತಿದ್ದರು. ಆದರೆ, ದಿನ ಕಳೆದಂತೆ ಹೈನುಗಾರಿಕೆ ಒಂದು ಉದ್ಯಮವಾಗಿ ಬೆಳೆದು ನಿಂತಿದೆ. ಹಾಲಿನಲ್ಲಿನ ಪೌಷ್ಟಿಕಾಂಶಗಳ ಕಾರಣದಿಂದಾಗಿ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಬಂಗಾರದ ಬೆಲೆ ಲಭಿಸಿದೆ. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಗಳಾಗಿದ್ದ ವೇಳೆ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ನೀಡುವ ಯೋಜನೆ ಯನ್ನು ಜಾರಿಗೆ ತಂದರು. ನಂತರದ ಸರಕಾರಗಳೂ ಸಹಾಯಧನದ ಪ್ರಮಾಣವನ್ನು ಹೆಚ್ಚಿಸುವ ಮೂಲಕ ರೈತರಿಗೆ ಅನುಕೂಲ ಮಾಡಿ ಕೊಡುತ್ತ ಬಂದಿವೆ. ಈ ಹಿನ್ನೆಲೆಯಲ್ಲಿ ಇದೀಗ, ಗ್ರಾಮೀಣ ಪ್ರದೇಶಗಳಲ್ಲಿನ ಜನತೆ ತಮ್ಮ ಮನೆಗೂ ಹಾಲನ್ನು ಇಟ್ಟು ಕೊಳ್ಳದೇ ಎಲ್ಲವನ್ನೂ ಮಾರಾಟ ಮಾಡಲು ಮುಂದಾಗುತ್ತಿದ್ದಾರೆ. ನಮ್ಮ ಸಮಾಜ ಎಷ್ಟು ಕಮರ್ಷಿಯಲ್ ಆಗಿದೆ ಎಂಬುದು ಇದರಿಂದ ತಿಳಿಯುತ್ತದೆ. ಏನೇ ಆಗಲಿ, ಒಟ್ಟಿನಲ್ಲಿ ನಾಡಿನ ರೈತರ ಬದುಕು ಹಸನಾಗಬೇಕು. ಅದಕ್ಕೆ ಹೈನುಗಾರಿಕೆ ತನ್ನದೇ ಆದ ಕಾಣಿಕೆ ನೀಡುತ್ತಿದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಮಾರ್ಗ ವಿಸ್ತರಣಾ ಧಿಕಾರಿ ನಾಗಪ್ಪ ಅಲ್ಲಿಬಾದಿ, ಸಂಘದ ಅಧ್ಯಕ್ಷೆ ಮೀನಾಕ್ಷಿ ರವಿ, ಉಪಾಧ್ಯಕ್ಷೆ ನಾಗಮ್ಮ, ನರಸಿಂಹಗೌಡ, ನಿರ್ದೇಶಕ ರಾದ ಜಯಮ್ಮ, ಸಣ್ಣತಾಯಮ್ಮ, ಜಯಮ್ಮ, ಚಂದ್ರಮ್ಮ, ರೇಣುಕಾ, ಪದ್ಮಮ್ಮ, ಎಂ.ಕೆ. ಕವಿತ, ಕರಿಯಮ್ಮ, ಸುಜಾತ, ಕಾರ್ಯದರ್ಶಿ ಮಮತ, ಹಾಲು ಪರೀಕ್ಷಕಿ ರತ್ನ, ಗ್ರಾ.ಪಂ ಸದಸ್ಯರಾದ ಮೋಹನ್,ಮಂಜುಳ ಮೋಹನ್,ಗುಡುಗನಹಳ್ಳಿ ಸಂಘದ ಅಧ್ಯಕ್ಷೆ ಸುಮಿತ್ರ ಶ್ರೀನಿವಾಸೇಗೌಡ, ಉಪಾಧ್ಯಕ್ಷೆ ಲಲಿತ ಪ್ರಕಾಶ್, ನಿರ್ದೇಶಕರಾದ ಮಂಜುಳ, ಪದ್ಮ, ಸಾವಿತ್ರಿ, ಪ್ರಭಾವತಿ, ಮಂಗಳ ಗೌರಮ್ಮ, ಲಕ್ಷ್ಮಮ್ಮ, ಶಕುಂತಳಮ್ಮ, ಪ್ರೇಮ, ಕಾರ್ಯದರ್ಶಿ ಲಲಿತ ಸೋಮೇಶ್, ಹಾಲು ಪರೀಕ್ಷಕಿ ನೇತ್ರಾವತಿ ಸೇರಿದಂತೆ ಮತ್ತಿತರರಿದ್ದರು.

(*✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ.ಆರ್.ಪೇಟೆ*)

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು