ಶ್ರೀ ಶ್ರೀನಿವಾಸ ದೇವಸ್ಥಾನ ದಲ್ಲಿ ಅ.12 ರಂದು ರಥೋತ್ಸವ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ನಗರದ ಬೈಪಾಸ್ ರಸ್ತೆ, ಮಿಲ್ಟಿ ಕ್ಯಾಂಪ್ ಶ್ರೀ ಶ್ರೀನಿವಾಸ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಶರನ್ನವರಾತ್ರಿ ಉತ್ಸವ ವಿಜೃಂಭಣೆಯಿಂದ ಜರುಗುತ್ತಿದ್ದು, ಅ.12 ರಂದು ಸ್ವಾಮಿಯ ರಥೋತ್ಸವ ನಡೆಯಲಿದೆ. 

ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವದ ಅಂಗವಾಗಿ ಶ್ರೀ ಮನ್ನಾ ರಾಯಣನ ದಶಾವತಾರ ಕಿರು ಪರಿಚಯ ಮಾಡುವ ನಿಟ್ಟಿನಲ್ಲಿ ಶ್ರೀನಿವಾಸ ಸ್ವಾಮಿಗೆ ಪ್ರತಿದಿನ ವಿಶೇಷ ಅಲಂಕಾರ ಕೈಗೊಳ್ಳುವ ಮೂಲಕ ಭಕ್ತರ ಗಮನ ಸೆಳೆಯಲಾಗುತ್ತಿದೆ.

ಗುರುವಾರ ನವರಾತ್ರಿ ಹಬ್ಬದ ಪ್ರಯುಕ್ತ ಸ್ವಾಮಿಗೆ ಮಾಡಿರುವ ವಿಶೇಷವಾದ ಶ್ರೀ ಕೃಷ್ಣಾವತಾರ ಭಕ್ತರ ಗಮನ ಸೆಳೆಯಿತು.
    
*ಕೃಷ್ಣಾವತಾರ*
ಪ್ರಳಯ ಕಾಲದಲ್ಲಿ ಆಲದೆಲೆಯ ಮೇಲೆ ಪವಡಿಸಿದ ಪರಮಾತ್ಮನಾದ ಶ್ರೀ ಕೃಷ್ಣ ಧರ್ಮ ಸಂಸ್ಥಾಪನಾರ್ಥರಾಗಿ ಈ ಧರೆಯಲ್ಲಿ ಅವತರಿಸಿದ ಶ್ರೀಮನ್ನಾರಾಯಣ. ಶಿಶುಪಾಲ ಮತ್ತು ದಂತವಕ್ತ್ರರ ಸಂಹಾರವೇ ಈ ಅವತಾರದ ಪ್ರಮುಖ ಕಾರಣ ವಾದರೂ ಕಂಸ, ಚಾಣೋರ ,ಪೂತನಿ,ಜರಾಸಂಧ ಕೌರವರು ಮೊದಲಾದ ಲೋಕ ಕಂಟಕರ ನಾಶಕ್ಕೂ ಶ್ರೀ ಕೃಷ್ಣ ಕಾರಣನಾದ. ಭಗವದ್ಗೀತೆಯೆಂಬ ಮಹಾನ್ ಕೊಡುಗೆಯನ್ನು ನೀಡಿದ ಅವತಾರ ಪುರುಷ ಶ್ರೀ ಕೃಷ್ಣ ಪರಮಾತ್ಮ.

ಅ.12ರಂದು ಸ್ವಾಮಿಯ ರಥೋತ್ಸವ :

ಶ್ರೀ ಶ್ರೀನಿವಾಸ ದೇವರ ರಥೋತ್ಸವ ಅ.12 ರ ಮಧ್ಯಾಹ್ನ 12 ಗಂಟೆಗೆ ನಡೆಯಲಿದ್ದು, ಇದಕ್ಕೂ ಮೊದಲು ಕಲಾಹೋಮ ಜರುಗಲಿದೆ. ರಥೋತ್ಸವದ ನಂತರ ಪ್ರಸಾದ ವಿನಿಯೋಗ ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸು ವಂತೆ ದೇವಸ್ಥಾನ ಆಡಳಿತ ಮಂಡಳಿ ಕೋರಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು