ವಿಜಯ ಸಂಘರ್ಷ ನ್ಯೂಸ್
ಕೆ.ಆರ್.ಪೇಟೆ: ತಾಲ್ಲೂಕು ಗ್ರಾಮ ಆಡಳಿತ ಅಧಿಕಾರಿಗಳ ಸಂಘ ಆಡಳಿತ ಮಂಡಳಿಗೆ ಸಂಘದ ಸದಸ್ಯರುಗಳ ಸರ್ವಾನುಮತದಿಂದ ಪುನರ್‌ರಚನೆ ಮಾಡಲಾಯಿತು.
ಎಲ್ಲಾ ಸದಸ್ಯರ ಒಮ್ಮತದ ಮೇರೆಗೆ ಸಂಘದ ತಾಲ್ಲೂಕು ನೂತನ ಅಧ್ಯಕ್ಷರಾಗಿ ದಶರಥ ಪೂಜಾರಿ ಅವರನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಯಾದರು.
ಗೌರವಾಧ್ಯಕ್ಷ ಪ್ರಸನ್ನ,ಉಪಾಧ್ಯಕ್ಷ ರಾಘವೇಂದ್ರ, ಸಾವಿತ್ರಿ, ಕಾರ್ಯದರ್ಶಿ ಹೊನ್ನೇಶ್, ಖಜಾಂಜಿ ಕಾವ್ಯ ಗೌಡರ್ ಅವರನ್ನು ಆಯ್ಕೆ ಮಾಡಲಾಯಿತು.
ಪಟ್ಟಣದ ತಾಲ್ಲೂಕು ಮಿನಿ ವಿಧಾನ ಸೌಧದಲ್ಲಿ ಕಚೇರಿಯಲ್ಲಿ ಆಡಳಿತ ಮಂಡಳಿ ಸದಸ್ಯರನ್ನು ಅಭಿನಂದಿಸಿ ಮಾತನಾಡಿದ ತಾಲೂಕು ದಂಡಾಧಿ ಕಾರಿ ಎಂ.ಯು.ಡಾ: ಅಶೋಕ್ ಸರ್ಕಾರದ ಯೋಜನೆಗಳನ್ನು ಗ್ರಾಮೀಣ ಪ್ರದೇಶದ ಜನರಿಗೆ ತಲುಪಿಸಲು ಗ್ರಾಮ ಆಡಳಿತ ಅಧಿಕಾರಿಗಳ ಪಾತ್ರ ಮುಖ್ಯ ಹಾಗಾಗಿ ಸಂಘಟನೆಯ ಮೂಲಕ ಸಂಘಟಿತ ರಾಗಿ ಸರ್ಕಾರ ಮತ್ತು ಸಾರ್ವಜನಿಕ ರಿಗೆಅಭಿವೃದ್ಧಿಗೆ ಕೊಂಡಿಯಂತೆ ಕಾರ್ಯ ನಿರ್ವಹಿಸಬೇಕು ಎಂದು ನೂತನ ಆಡಳಿತ ಮಂಡಳಿಗೆ ಸಲಹೆ ನೀಡಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ದಶರಥ ಪೂಜಾರಿ ನನ್ನ ಆಡಳಿತ ಅವಧಿಯಲ್ಲಿ ಸರ್ವ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರಾಮಾಣಿಕವಾಗಿ ಗ್ರಾಮ ಆಡಳಿತ ಅಧಿಕಾರಿಗಳ ಸಮಸ್ಯೆಗೆ ಸ್ಪಂದಿಸಿ ಸಾರ್ವಜನಿಕರಿಗೂ ಅಭಿವೃದ್ಧಿಗೂ ಸಮವಹಿಸುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಹರೀಶ್,ವಿ.ಎ ಸುನಿಲ್ ಕುಮಾರ್ ಶಿರಸಂಗಿ, ಧರ್ಮಪ್ಪ ಆನಂದ್, ಲೋಹಿತ್ ವಾಲ್ಮೀಕಿ, ರಾಘವೇಂದ್ರ, ಸೇರಿದಂತೆ ಉಪಸ್ಥಿತರಿದ್ದರು.
(✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ)
Tags:
ಕೆ ಆರ್ ಪೇಟೆ ವರದಿ