ಕರವೇ ಸ್ವಾಭೀಮಾನಿ ಬಣ ನೂತನ ಪದಾಧಿಕಾರಿಗಳ ನೇಮಕ

ವಿಜಯ ಸಂಘರ್ಷ ನ್ಯೂಸ್ 
(✍️ಶಿವು ರಾಠೋಡ್ )

ಬಸವಕಲ್ಯಾಣ: ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು.

ಸ್ವಾಭಿಮಾನಿ ಬಣದ ರಾಜ್ಯಾಧ್ಯಕ್ಷ ಪಿ. ಕೃಷ್ಣೆಗೌಡರು ಪದಗ್ರಹಣ ಕಾರ್ಯಕ್ರಮ ಉದ್ಘಾಟನೆ ನೇರವೆರಿಸಿ ಮಾತನಾಡಿ, ಸಶಕ್ತ ಸಂಘಟನೆಯಿಂದ ಅನ್ಯಾಯದ ವಿರುದ್ಧ ಹೋರಾಟ ಮತ್ತು ನ್ಯಾಯದ ಪರ ಹೋರಾಡುವುದು,ಬಡವರ, ದಿನ ದಲಿತರ, ಶೋಷಿತರ, ರೈತರ ಪರ ನ್ಯಾಯಕ್ಕಾಗಿ ಸತತವಾಗಿ ಹೋರಾಡಿ ಅವರ ಹಕ್ಕು ಒದಗಿಸಿ ಕೊಡುವ ನೀಟ್ಟಿನಲ್ಲಿ ಹೋರಾಟ ಮಾಡಬೇಕು ಎಂದು ಕರೆ ನೀಡಿದರು. 

ತ್ರೀಪುರಾಂತ ಗವಿಮಠದ ಪೂಜ್ಯ ಶ್ರೀ ಷ.ಬ್ರ.ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ದಿವ್ಯ ಸಾನಿಧ್ಯ, ಬೇಲೂರಿನ ಉರಿಲಿಂಗ ಪೆದ್ದಿ ಮಠದ ಪೂಜ್ಯ ಶ್ರೀ ಪಂಚಾಕ್ಷರಿ ಸ್ವಾಮಿಗಳು ಸಾನಿಧ್ಯವಹಿಸಿ ಆಶಿರ್ವಚನ ನೀಡಿದರು. 

ಕರವೇ ನೂತನ ತಾಲ್ಲೂಕು ಅಧ್ಯಕ್ಷರಾಗಿ ಮಾಂತೇಷ ಎಸ್. ಗೌರಕರ ಸೇರಿದಂತೆ ಮತ್ತಿತರನ್ನು ಸನ್ಮಾನಿಸಿ ಅಭಿನಂದಿಸ ಲಾಯಿತು. 

ಬೀದರ ಜಿಲ್ಲಾ ಅಧ್ಯಕ್ಷ ಚರಣಜೀತ ಅಣದೂರೆ ಕಾರ್ಯಕ್ರಮ ಅಧ್ಯಕ್ಷತೆ 
ವಹಿಸಿದ್ದರು. ವಿಶೇಷ ಆಹ್ವಾನಿತರಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಭುಗೌಡ್ರು, ರಾಜ್ಯ ಉಸ್ತುವಾರಿ ಶಿವಗೌಡ್ರು, ಅತಿಥಿಗಳಾಗಿ ನಗರ ಸಿಪಿಐ ಅಲಿಸಾಬ ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಸಂಯೋಜಕರಾದ ಅಮರ ಮೇರ್ಲಿ, ನ್ಯಾಯವಾದಿ ರಾಜಕುಮಾರ ಮುಡಬಿಕರ, ಭಿಮಣ್ಣ ಮಂದಿರಕರ, ಸುಮಿತ ನಿಪ್ಪಣ್ಣೆ, ಸುಧಿರ ಕಾಂಬಳೆ, ಧಮ್ಮಾವೀರ ಗೋಡಬೊಲೆ, ಅಶ್ವಜೀತ ಶಿಂಧೆ, ಸಾಗರ ರಾಯಗೋಳೆ, ವಿನೋದ ರಾಯಗೊಳೆ, ಉಪಮೇಶ ಕಟ್ಟಿಮನಿ, ಅಮೀತ ನಿಪ್ಪಣ್ಣೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ನಗರದ ಬಸವೇಶ್ವರ ದೇವಸ್ಥಾನದಿಂದ ತ್ರಿಪುರಾಂತ ಬಿಕೆಡಿಬಿ ಯಾತ್ರಿ ನಿವಾಸದ ವರೆಗೆ ಬೃಹತ ಬೈಕ್ ರ‍್ಯಾಲಿ ನಡೆಸುವ ಮೂಲಕ ನಗರಾದ್ಯಂತ ಸಂಚಾರ ಮಾಡಲಾಯಿತು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು