ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ : ಕ್ಷೇತ್ರದ ಶಾಸಕರು ಹಾಗೂ
ಕೆ ಆರ್ ಡಿ ಐ ಎಲ್ ನ ಅಧ್ಯಕ್ಷರಾದ ಬಿ.ಕೆ. ಸಂಗಮೇಶ್ವರ ಅವರ 62ನೇ ಹುಟ್ಟುಹಬ್ಬದ ಪ್ರಯುಕ್ತ ಎನ್ ಎಸ್ ಯುಐ ಸಂಘಟನೆ ವತಿಯಿಂದ ನಗರದ ಉಜ್ಜನಿಪುರದ ಪ್ರಾಥಮಿಕ ಸರ್ಕಾರಿ ಶಾಲೆಗೆ ಉಚಿತ ಕಂಪ್ಯೂಟರ್ ವಿತರಣೆಮಾಡಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್. ಎಲ್.ಷಡಾಕ್ಷರಿ, ನಗರಸಭಾ ಸದಸ್ಯ ಬಸವರಾಜ್ ಬಿ ಆನೆಕೊಪ್ಪ, ಕುವೆಂಪು ಸಿಂಡಿಕೇಟ್ ಸದಸ್ಯರು ಹಾಗೂ ಎನ್ ಎಸ್ ಯುಐ ಅಧ್ಯಕ್ಷ ಮುಸವಿರ್ ಬಾಷಾ, ಉಪಾಧ್ಯಕ್ಷ ಗಂಗಾಧರ್,
ಎಸ್ ಡಿ ಎಮ್ ಸಿ ಅಧ್ಯಕ್ಷ ವೆಂಕಟೇಶ್, ಬಗರ್ ಹುಕ್ಕುಂ ಸದಸ್ಯ ಬಿಆರ್ ಪಿ ಮುರುಗೇಶ್, ಬಂಜಾರ್ ಸಮಾಜದ ಮುಖಂಡ ರಮೇಶ್ ನಾಯ್ಕ, ಶಾಲೆಯ ಮುಖ್ಯೋಪಾಧ್ಯಾರು, ಯುವ ಮುಖಂಡ ರಾದ ಸಾಲಾರ್, ಮಹಬೂಬ್ ಇಮ್ರಾನ್, ಇಮ್ರಾನ್, ಚೇತನ್, ಶ್ಯಾಮ್, ಮೊಹಮ್ಮದ್ ಸನಾನ್ , ರಂಜಿತ್ ಮತ್ತಿತರರು ಭಾಗವಹಿಸಿದ್ದರು.