ವಿಜಯ ಸಂಘರ್ಷ ನ್ಯೂಸ್
ಶಿವಮೊಗ್ಗ: ಕ್ರೀಡೆ ಎಂಬುದು ಸಂಘಟಿಕ ಸ್ಪರ್ಧಾತ್ಮಕ ಮತ್ತು ಕುಶಲತೆ ಯಿಂದ ಕೂಡಿದ ದೈಹಿಕ ಚಟುವಟಿಕೆ ಯಾಗಿದೆ ಜೀವನದ ಸವಾಲುಗಳನ್ನು ಅತ್ಯಂತ ಧನಾತ್ಮಕ ಮತ್ತು ಶಾಂತ ರೀತಿಯಿಂದ ಎದುರಿಸಲು ಕ್ರೀಡೆ ನಮ್ಮನ್ನು ಸಿದ್ಧಪಡಿಸುತ್ತದೆ ಹಾಗೂ ದೈಹಿಕ ಹಾಗೂ ಮಾನಸಿಕ ಸದೃಢತೆ ಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಕರ್ನಾಟಕ ರಾಜ್ಯ ಬೋವಿ ನಿಗಮದ ಅಧ್ಯಕ್ಷ ಎಸ್ ರವಿಕುಮಾರ್ ಅಭಿಮತ ವ್ಯಕ್ತಪಡಿಸಿದರು.
ಅವರು ಸೋಮವಾರ ಶಾಲಾ ಶಿಕ್ಷಣ ಇಲಾಖೆ( ಪದವಿಪೂರ್ವ) ಮತ್ತು ಮಹೇಶ್ ಪದವಿಪೂರ್ವ ಕಾಲೇಜ್ ಶಿವಮೊಗ್ಗ ಇವರ ಸಹಯೋಗದಲ್ಲಿ 19 ವರ್ಷ ವಯೋಮಿತಿ ಒಳಗಿನ ರಾಜ್ಯಮಟ್ಟದ ಪದವಿಪೂರ್ವ ಕಾಲೇಜುಗಳ 2 ದಿನದ ಬಾಕ್ಸಿಂಗ್ ಕ್ರೀಡಾಕೂಟ 2024 -25 ವನ್ನು ನೆಹರು ಒಳ ಕ್ರೀಡಾಂಗಣದಲ್ಲಿ ಆಯೋಜಿಸ ಲಾಗಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಯೂ ಮುಖ್ಯ. ಇದು ಪ್ರಥಮ ಬಾರಿಗೆ ಶಿವಮೊಗ್ಗದಲ್ಲಿ ಆಯೋಜನೆ ಗೊಂಡಿ ರುವ ಬಾಕ್ಸಿಂಗ್ ಕ್ರೀಡಾಕೂಟಕ್ಕೆ 17 ಜಿಲ್ಲೆಗಳಿಂದ ಸ್ಪರ್ಧೆಗಳು ಆಗಮಿಸಿದ್ದು ಸಂತಸ ತಂದಿದೆ ಎಂದು ಕ್ರೀಡಾಪಟು ಗಳಿಗೂ ಅಭಿನಂದಿಸಿದರು.
ಜಿಲ್ಲೆ ಸಾಂಸ್ಕೃತಿಕ ಹಾಗೂ ಕ್ರೀಡೆಗೆ ಹೆಸರು ವಾಸಿಯಾಗಿದೆ ಇಲ್ಲಿನ ಸಾಕಷ್ಟು ಕ್ರೀಡಾಪಟುಗಳು ರಾಜ್ಯ ರಾಷ್ಟ್ರಮಟ್ಟ ದಲ್ಲಿ ಹೆಸರುಗಳಿಸಿದ್ದಾರೆ. ಈ ನಿಟ್ಟಿನಲ್ಲಿ ಇಂದು ಈ ಕ್ರೀಡೆ ಯಶಸ್ವಿಯಾಗಲಿ ಎಂದು ಹಾರೈಸಿದರು.
ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾದ ರೇಖಾ ನಾಯಕ ಮಾತನಾಡುತ್ತಾ ಸುಮಾರು 15 ಲಕ್ಷ ವೆಚ್ಚದಲ್ಲಿ ಈ ಬಾಕ್ಸಿಂಗ್ ರೌಂಡ್ ಅನ್ನು ಆಯೋಜಿಸ ಲಾಗಿದ್ದು, ರಾಷ್ಟ್ರಮಟ್ಟದ ಕ್ರೀಡಾ ಕೂಟದ ತರಹ ವ್ಯವಸ್ಥೆ ಮಾಡಲಾಗಿದೆ ಈ ಕಾರ್ಯಕ್ರಮ ಜಿಲ್ಲೆಗೆ ಹೆಮ್ಮೆ ತಂದಿದೆ ಎಂದು ನುಡಿದರು.
ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚಂದ್ರಪ್ಪ ಎಸ್ ಗುಂಡಪಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ರೀಡೆಗಳು ನಮ್ಮಲ್ಲಿ ಖಿನ್ನತೆಯನ್ನು ಕಡಿಮೆ ಮಾಡುವುದರ ಜೊತೆಗೆ ನಾವು ಸದಾ ಸದೃಢರಾಗಿ ಧನಾತ್ಮಕ ಚಿಂತೆಯಿಂದ ಇರುತ್ತೇವೆ ಎಂದು ಈ ಕ್ರೀಡೆಯನ್ನು ಆಯೋಜಿಸಿದ ಮಹೇಶ್ ಪಿಯು ಕಾಲೇಜ್ ಅವರಿಗೆ ಧನ್ಯವಾದಗಳು ತಿಳಿಸಿದರು.
ರಾಜ್ಯ ಮಟ್ಟದ ಬಾಕ್ಸಿಂಗ್ ಕ್ರೀಡೆಯಲ್ಲಿ 160 ಜನ ಸ್ಪರ್ದಾಳುಗಳು ಭಾಗ ವಹಿಸಿದ್ದು ಅದರಲ್ಲಿ 120 ಯುವಕರು ಹಾಗೂ 40 ಜನ ಯುವತಿಯರು ಭಾಗವಹಿಸಿದ್ದಾರೆ.
ಡಿ ವಿ ಎಸ್ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕಾರ್ಯ ಕ್ರಮದ ಪ್ರಸ್ತಾವಿಕ ನುಡಿಗಳನ್ನಾಡಿದ ಎ.ಇ. ರಾಜಶೇಖರ್ ನಡೆಸಿಕೊಟ್ಟರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಬಾಕ್ಸಿಂಗ್ ಅಸೋಸಿಯೇಷನ್ ನ ಗೌರವಾಧ್ಯಕ್ಷ ದೇವರಾಜ್ ಮಂಡನೆ ಕೊಪ್ಪ. ಕರ್ನಾಟಕ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಸಾಯಿ ಸತೀಶ್. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ ವಿಜಯಕುಮಾರ್.. ಪಂಡ್ರಿನಾಥ್. ಪಳನಿ ವೇಲು ಶ್ರೀ ಹರಿ. ಶಶಿಕುಮಾರ್. ನಾಗೇಂದ್ರ ಪ್ರಸಾದ್. ಶ್ರೀ ಪ್ರಸನ್ನ ಕೆ. ಹೆಚ್ ವಿ ಶುಭಕರ. ಬೆಂಜಮಿನ್ ಫ್ರಾನ್ಸಿಸ್. ಜಿಎಫ್ ಕುಟ್ರಿ ಜಿಎಫ್ ಕುಟ್ರಿ. ಶಿವಮೊಗ್ಗ ವಿನೋದ್ ಉಪಸ್ಥಿತರಿದ್ದರು.
Tags:
ಶಿವಮೊಗ್ಗ ವರದಿ