ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಸಿಂಗನಮನೆ ಗ್ರಾ ಪಂ ಅಧ್ಯಕ್ಷರು ಹಾಗೂ PDO, ಮತ್ತು ಡಾಟಾ ಎಂಟ್ರಿ ಆಪರೇಟರ್ ಅಕ್ರಮಗಳ ವಿರೋಧಿಸಿ ಕಳೆದ 5 ದಿನಗಳಿಂದ ಕರವೇ ಕಾರ್ಯಕರ್ತರ ಅನಿರ್ದಿಷ್ಟಾವಾದಿ ಉಪವಾಸ ಸತ್ಯಾಗ್ರಹ ಅಧಿಕಾರಿಗಳ ಭರವಸೆಯಿಂದ ಸುಖಾಂತ್ಯ ಗೊಂಡಿದೆ. ಪಂಚಾಯಿತಿ ಭ್ರಷ್ಟಾಚಾರದ ವಿರುದ್ಧ ಕರವೇ ಕಾರ್ಯಕರ್ತ ರಿಂದ ನ:5 ರಿಂದ ಅನಿರ್ದಿಷ್ಟವಾದಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ತಾಲ್ಲೂಕು ಪಂಚಾಯಿತಿ ಅಧಿಕಾರಿಗಳಿಂದ ಪ್ರತಿಭಟನಾಕಾರರಿಗೆ ಸರಿಯಾದ ಸ್ಪಂದನೆ ಸಿಗದ ಕಾರಣ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಉಪವಾಸ ಸತ್ಯಾಗ್ರಹ ನಡೆಸಲಾಯಿತು.
ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಬಂದು ಪ್ರತಿಭಟನಾಕಾರರನ್ನು ಮನವೊಲಿಸುವ ಕೆಲಸವನ್ನು ಯಶಸ್ವಿ ಮಾತುಕತೆ ನಡಿಸಿ ಹೋರಾಟಗಾರ ದೂರುಗಳನ್ನು ಆಲಿಸಿ ಮನವಿ ಸ್ವೀಕರಿಸಿ ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳವುದಾಗಿ ಭರವಸೆ ನೀಡಿದ್ದಾರೆ. ಐದನೆ ದಿನಕ್ಕೆ ಕಾಲಿಟ್ಟ ಹೋರಾಟ ಇಂದು ಬಂದ ಅಧಿಕಾರಿಗಳು ಉಪವಾಸ ಸತ್ಯಾಗ್ರಹ ನಿರತ ಹೋರಾಟ ಗಾರರಿಗೆ ಎಳನೀರು ಕುಡಿಸುವ ಮುಖಾಂತರ ಸತ್ಯಾಗ್ರಹ ಸುಕಾಂತ್ಯ ಕಂಡಿದೆ.
ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಹಾಗೂ ಭದ್ರಾವತಿ ತಾಲ್ಲೂಕು ನರೇಗಾ ಎ ಡಿ,ರವರು ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಹಾಗೂ ಅಧ್ಯಕ್ಷರು, ಸದಸ್ಯರು, ಗ್ರಾಮಸ್ಥರು ಹಾಗೂ ಪ್ರತಿಭಟನಾಕಾರರದ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ) ಬಣದ ಜಿಲ್ಲಾಧ್ಯಕ್ಷ ರಾಘವೇಂದ್ರ ಹೆಬ್ಬಾರ್, ಉಪಾಧ್ಯಕ್ಷ ಈಶ್ವರ್ ವೇದಿಕೆಯ ನರಸಿಂಹ ರಾಜು, ಎಸ್ ಆರ್ ರವಿಕುಮಾರ್, ಮೋಹನ್ ಕುಮಾರ್, ಆಟೋ ಆನಂದ್, ಯೋಗ ಮಾಸ್ಟರ್ ಗಣೇಶ್ ಭಾಗಿಯಾಗಿದ್ದರು.
Tags:
ಭದ್ರಾವತಿ ವರದಿ