ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಅರಣ್ಯ ಇಲಾಖೆ ನಡೆಸುತ್ತಿ ರುವ ಅಕ್ರಮ ಮತ್ತು ಭ್ರಷ್ಟಾಚಾರ ಗಳನ್ನು ಬಯಲಿಗೆಳೆದು ಸರಕಾರಕ್ಕೆ ಮತ್ತು ಅರಣ್ಯ ಸಚಿವರಿಗೆ ಹಾಗೂ ಇಲಾಖೆಯ ಬೆಂಗಳೂರಿನ ಉನ್ನತ ಅಧಿಕಾರಿಗಳಿಗೆ ಕಾಲಕಾಲಕ್ಕೆ ತಲುಪಿಸುತ್ತಿರುವುದರಿಂದ ಚಿತ್ರಪ್ಪ ಯರಬಾಳ ಅವರ ಮೇಲೆ ಸುಳ್ಳು ಕೇಸು ದಾಖಲಿಸಿದ್ದಾರೆಂದು ನ್ಯಾಯವಾದಿ ಜಿ.ಆರ್.ಷಡಾಕ್ಷರಪ್ಪ ಆರೋಪಿಸಿದರು.
ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಡಿಎಫ್‌ಒ ಆಶಿಶ್‌ರೆಡ್ಡಿ, ಎಸಿಎಫ್ ರತ್ನಪ್ರಭ ಹಾಗೂ ಆರ್‌ಎಫ್‌ಒ ಜಗದೀಶ್ ಈ ಮೂವರು ಅರಣ್ಯ ಇಲಾಖೆಯನ್ನು ಸರ್ವನಾಶ ಮಾಡುತ್ತಿದ್ದಾರೆ. ಕೈಬೆಚ್ಚಗೆ ಮಾಡಿ ಕೊಂಡು ತಮಗೆ ಬೇಕಾದವರಿಗೆ ಅರಣ್ಯ ಒತ್ತುವರಿ ಮಾಡಲು ಮತ್ತು ಅಕ್ರಮ ಚಟುವಟಿಕೆಗಳಿಗೆ ಹಾಗೂ ಇಟ್ಟಿಗೆ ಗೂಡುಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಪ್ಲಾಂಟೇಷನ್ ಮಾಡಲು ಬಿಡುಗಡೆಯಾಗುವ ಲಕ್ಷಾಂತರ ಹಣವನ್ನು ಲೂಟಿ ಹೊಡೆಯುತ್ತಿದ್ದಾರೆಂದು ಚಿತ್ರಪ್ಪ ಉನ್ನತ ಮಟ್ಟದಲ್ಲಿ ದೂರು ನೀಡಿದ್ದ ರಿಂದ ಸೇಡಿನ ಕಿಡಿ ಕಾರುತ್ತಿದ್ದಾರೆ. ಆದ್ದರಿಂದ ಈ ಮೂವರನ್ನು ಸರಕಾರ ಕೂಡಲೆ ಅಮಾನತ್ತಿನಲ್ಲಿಟ್ಟು ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ತಾಲೂಕಿನ ಆಲ್ದಾರ ಗ್ರಾಮದ ಸರ್ವೇ ನಂ 44 ರಲ್ಲಿ ಪರಿಶಿಷ್ಟ ಜಾತಿ ಭೋವಿ ಜನಾಂಗದ 30 ಕುಟುಂಬಗಳು ಸುಮಾರು 50 ವರ್ಷಗಳಿಂದ ಕೃಷಿ ಮಾಡಿಕೊಂಡು ಕಾಲಕಾಲಕ್ಕೆ ಜಮೀನು ಮಂಜೂರಾತಿಗೆ ಅರ್ಜಿ ಸಲ್ಲಿಸಿತ್ತಾ ಬಂದಿದ್ದಾರೆ. 2017 ರಲ್ಲಿ ಎಲ್ಲಾ 30 ಕುಟುಂಬ ಗಳಿಗೂ ತಲಾ 2-3 ಎಕರೆ ಭೂಮಿ ಮಂಜೂರಾತಿಯಾಗಿದೆ. ಅದರಲ್ಲಿ ಚಿತ್ರಪ್ಪ ಯರಬಾಳ ಅವರ ತಂದೆ ಕೊಲ್ಲಪ್ಪ ಬಿನ್ ಮುಕುಂದಪ್ಪ ಹೆಸರಿಗೆ 2.25 ಎಕರೆ ಮಂಜೂರಾಗಿದೆ. ಈ ಭೂಮಿಯು ಬಫರ್ ಜೋನ್ ಜಮೀನಿನಲ್ಲಿದೆ. ಮಾವಿನಕಟ್ಟೆ ವಲಯದಲ್ಲಿ ಲಕ್ಷಾಂತರ ರೂ ಹಣ ಪಡೆದು ಅಕ್ರಮವಾಗಿ ಅರಣ್ಯ ಭೂಮಿ ಒತ್ತುವರಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕಾಡು ನಾಶ ಮಾಡಲಾಗುತ್ತಿದೆ ಕ್ರಮಕೈಗೊಳ್ಳಿ ಎಂದು ವಿಜಿಲೆನ್ಸ್‌ಗೆ ದೂರಿದ ಆರ್‌ಎಫ್‌ಓ 15 ಎಕರೆ ಒತ್ತುವರಿ ಯಾಗಿದೆ ಎಂದು ತಿಳಿಸಿದ್ದಾರೆ. ಸತ್ಯ ಹೊರ ತರಲು ಅರಣ್ಯ ಸಚಿವರಿಗೆ ಉನ್ನತ ಅಧಿಕಾರಿಗಳಿಗೆ ತಿಳಿಸಿದ್ದರಿಂದ ಆರ್‌ಎಫ್‌ಓ ಜಗದೀಶ್ ಅವರನ್ನು ಕಡ್ಡಾಯ ರಜೆಯ ಮೇಲೆ ಕಳಿಸಿ ಭದ್ರಾವತಿಗೆ ಹೊಸದಾಗಿ ಬಂದ ದುಗ್ಗಪ್ಪ ಅವರನ್ನು ಒತ್ತುವರಿ ತೆರವು ಮಾಡಲು ನಿಯೋಜಿಸಲಾಗಿ ಎರಡೇ ತಿಂಗಳಲ್ಲಿ 230 ಎಕರೆ ಭೂಮಿ ಒತ್ತುವರಿ ತೆರವು ಮಾಡಿಸಿದ್ದರಿಂದ ಈ ಅಕ್ರಮ ಬಯಲಾಗಿದೆ. ಕೇವಲ 15 ಎಕರೆ ಒತ್ತುವರಿ ಎಂದಿದ್ದ ಡಿಎಫ್ ಓ ಮತ್ತು ಎಸಿಎಫ್ ಹಾಗೂ ಆರ್‌ಎಎಫ್ ಬಂಡವಾಳ ಬಯಲಾಯಿತ್ತಲ್ಲ
ಎಂದು ಕುಪಿತರಾಗಿದ್ದಾರೆ. ಚಿತ್ರಪ್ಪ ಯರಬಾಳ ಅರಣ್ಯ ಭೂಮಿ ಒತ್ತುವರಿ ಮಾಡಿ ಅಕ್ರಮವಾಗಿ ಇಟ್ಟಿಗೆ ಸುಡುತ್ತಿದ್ದಾರೆಂದು ಸುಳ್ಳುಕೇಸು ದಾಖಲು ಮಾಡಿರುವುದು ಸತ್ಯಕ್ಕೆ ದೂರವಾಗಿದೆ. ಡಿಎಫ್‌ಓ ಹೇಳಿರು ವಂತೆ ಎನ್.ಆರ್.ಪುರದ ಭೈರಾಪುರದ ಕಿರು ಅರಣ್ಯ ಪ್ರದೇಶಕ್ಕೆ ಸೇರಿದ್ದಲ್ಲ. ಬದಲಾಗಿ ಭದ್ರಾ ಹುಲಿ ಸಂರಕ್ಷಣಾ ಪ್ರದೇಶ ವ್ಯಾಪ್ತಿಯ ಬಫರ್ ಜೋನ್ ನಲ್ಲಿ 2.25 ಎಕರೆಭೂಮಿಯೇ ಹೊರತು 3.07 ಎಕರೆ ಅಲ್ಲವೆಂದರು. ಅರಣ್ಯ ಪ್ರದೇಶದಲ್ಲಿ 3 ಎಕರೆ ಭೂಮಿಗಿಂತ ಕಡಿಮೆ ಇರುವ ಅರಣ್ಯ ಒತ್ತುವರಿಯನ್ನು ತೆರವುಗೊಳಿಸಬಾರ ದೆಂದು ಆದೇಶ ಇರುವುದರಿಂದ 3.07 ಎಕರೆ ಎಂದು ಸುಳ್ಳುಕೇಸು ದಾಖಲಿಸಿದ್ದಾರೆ. ಅಲ್ಲದೆ ಮನೆ ಕಟ್ಟಲು ಇಟ್ಟಿಗೆ ತಯಾರಿ ಮಾಡಿದ್ದನ್ನು ರಾತ್ರೋರಾತ್ರಿ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.
ಲಕ್ಕಿನಕೊಪ್ಪ, ಉಂಬ್ಲೆಬೈಲು, ಹೆಚ್.ಕೆ. ಜಂಕ್ಷನ್, ದೊಡ್ಡಬೀಳು, ಕಾಚಿನಕಟ್ಟೆ, ಕಣಗಲಸರ, ಹುಣಸೇಕಟ್ಟೆ, ರಾಮನಕೊಪ್ಪ, ಮತ್ತೂರು, ಸಿದ್ದರಹಳ್ಳಿ ಮುಂತಾದ ಪ್ರದೇಶದಲ್ಲಿ ಅರಣ್ಯ ನಾಶ ಮಾಡುತ್ತಾ ಅಕ್ರಮವಾಗಿ ಇಟ್ಟಿಗೆ ಸುಡುತ್ತಿದ್ದರೂ. ಆಲ್ದಾರ ಸರ್ವೇ ನಂಬರ್ 44 ರಲ್ಲಿ ರಾಜಕಾರಣಿ ಓರ್ವರು 7 ಏಕರೆ ಒತ್ತುವರಿ ಮಾಡುತ್ತಿದ್ದರೂ ಅವರಿಂದ ಕೈಬೆಚ್ಚಗೆ ಮಾಡಿಕೊಂಡು ಕ್ರಮ ಕೈಗೊಂಡಿಲ್ಲ ವೆಂದು ದೂರಿದರು.
ಪತ್ರಿಕಾ ಗೋಷ್ಟಿಯಲ್ಲಿ ಚಿತ್ರಪ್ಪ ಯರಬಾಳ ವೃತ್ತಾಂತವನ್ನು ವಿವರಿಸಿದರು. ದಲಿತ ಸಂಘರ್ಷ ಸಮಿತಿಯ ಹೆಚ್.ಎಂ.ಶಿವಣ್ಣ, ಶೆಟ್ಟಿಕೊಪ್ಪದ ಮಹೇಶ್, ನಾಗರಾಜ್ ಅಣ್ಣಪ್ಪ ಮತ್ತಿತರರಿದ್ದರು.