ಮದ್ಯ ವ್ಯಸನೀಯರನ್ನ ಸರಿದಾರಿಗೆ ತರುವುದು ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘ ದಿಂದ ಮಾತ್ರ ಸಾಧ್ಯ: ಕೆ.ಸಿ.ನಾರಾಯಣಗೌಡ

ವಿಜಯ ಸಂಘರ್ಷ ನ್ಯೂಸ್ 
ಕೆ.ಆರ್.ಪೇಟೆ: ಹೆತ್ತವರನ್ನು ರಕ್ಷಣೆ ಮಾಡುವುದು ಮಕ್ಕಳ ಧರ್ಮ, ಪ್ರಜೆಗಳ ರಕ್ಷಣೆ ಮಾಡುವುದು ರಾಜನ ಧರ್ಮ, ಭಕ್ತರ ರಕ್ಷಣೆ ಮಾಡುವುದು ಗುರುಗಳ ಧರ್ಮ, ಆದರೆ ಬಡವರ, ದೀನ ದಲಿತರ ಹಾಗೂ ಇಂತಹ ಮದ್ಯ ವ್ಯಸನೀಯರನ್ನ ಸರಿದಾರಿಗೆ ತರುವ ಕೆಲಸ ಮಾಡುವು ದಿದ್ದರೆ ಅದು ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘದಿಂದ ಮಾತ್ರ ಸಾಧ್ಯ ಎಂದು ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.

ತಾಲ್ಲೂಕಿನ ಬೂಕನಕೆರೆ ಗ್ರಾಮದ ಪಂಚಾಯತಿ ಸಮುದಾಯ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕೆ.ಆರ್.ಪೇಟೆ ಹಾಗೂ ಬೂಕನಕೆರೆ ವಲಯ ದಿಂದ ಆಯೋಜಿಸಿದ್ದ 1887ನೇ ಮದ್ಯ ವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ಸಮಾರೋಪ ಸಮಾರಂಭ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದರು.

 ಅಂಧಕಾರದಲ್ಲಿದ್ದ ಬಾಳಿಗೆ ಹೊಸ ಬೆಳಕು ನೀಡಿ ಇಡೀ ಕುಟುಂಬವನ್ನು ಬೆಳಗಿಸಿದ ಈ ಮದ್ಯವರ್ಜನ ಶಿಬಿರವು ಸಮಾಜಕ್ಕೆ ಮಾದರಿ ಮತ್ತು ಆದರ್ಶಪ್ರಾಯವಾಗಿದೆ.ಕುಡಿತದಿಂದ ನಿಮ್ಮ ಜೀವನವನ್ನು ಹಾಳು ಮಾಡಿಕೊಳ್ಳ ಬೇಡಿ. ಇದರಿಂದ ನಿಮ್ಮ ಆರೋಗ್ಯ, ದುಡ್ಡು, ಸಮಾಜ ಹಾಗೂ ನಿಮ್ಮ ಕುಟುಂಬವೇ ಹಾಳಾಗಿ ನೀವು ಬೀದಿಗೆ ಬರುತ್ತೀರಿ. ಈ ಕುಡಿತದಿಂದ ಮುಕ್ತರಾಗಿ ಸುಖ ಜೀವನ ನಡೆಸಿ, ಸಮಾಜದಲ್ಲಿರುವ ಪ್ರತಿಯೊಬ್ಬನಿಗೂ ಸಂಸ್ಕಾರ ಕೊಡುವ ಕಾರ್ಯ ನಡೆಯಬೇಕು. ಒಬ್ಬ ವ್ಯಕ್ತಿಯನ್ನು ಪರಿವರ್ತನೆ ಮಾಡಿ ಸಂಸ್ಕಾರ ಕೊಡುವ ಕಾರ್ಯಶ್ರೇಷ್ಠ ಹಾಗೂ ಪುಣ್ಯದ ಕಾರ್ಯ. ಇಂತಹ ಶಿಬಿರಗಳು ಸಮಾಜಕ್ಕೆ ಮಾದರಿ ಎಂದು ಹೇಳಿದರು.

ಜಿಲ್ಲಾ ಜನಜಾಗೃತಿ ಉಪಾಧ್ಯಕ್ಷ ಹಾಗೂ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಮಾತನಾಡಿ ಶ್ರೀ ಧರ್ಮಸ್ಥಳ ಸಂಘ ಅನೇಕ ಸಮಾಜಮುಖಿ ಕೆಲಸ ಕಾರ್ಯಗಳಂತೆ ಮಾರ್ಗದರ್ಶನದ ಮದ್ಯವರ್ಜನ ಶಿಬಿರವು ಅನೇಕ ಜನರ ಜೀವನವನ್ನು ಉತ್ತಮ ಕೌಶಲ್ಯಯುತ ಜೀವನವನ್ನಾಗಿ ರೂಪಿಸಿದೆ. ಅವರ ಉತ್ತಮ ಕಾರ್ಯಗಳಿಂದ ಜನಜೀವನ ಸ್ವರ್ಗಸದೃಶವಾಗಿದೆ. ಮದ್ಯ ಮುಕ್ತರಿಗೆ ಸಮಾಜದಲ್ಲಿ ಒಂದು ಗೌರವವಿದೆ. ದುಶ್ಚಟಗಳಿಂದ ದೂರವಾದಾಗ ಮಾತ್ರ ಕುಟುಂಬ, ಸಮಾಜದಲ್ಲಿ ನೆಮ್ಮದಿ ಇರಲು ಸಾಧ್ಯ ಎಂದು ಹೇಳಿದರು.

ಬಳಿಕ ಮಾತನಾಡಿದ ಶ್ರೀ ಧರ್ಮಸ್ಥಳ ಸಂಘದ ಮೈಸೂರು ಪ್ರಾದೇಶಿಕ ನಿರ್ದೇಶಕ ಜಿ. ಜಯರಾಮ ನೆಲ್ಲಿತ್ತಾಯ ಮದ್ಯವರ್ಜನ ಶಿಬಿರಗಳು ಮದ್ಯಸವ್ಯಸನಿಗಳಿಗೆ ದಾರಿ ದೀಪವಾಗಿವೆ. ಈಗಾಗಲೇ ರಾಜ್ಯದಲ್ಲಿ 1887 ಶಿಬಿರಗಳು ಯಶಸ್ವಿಯಾಗಿ ಲಕ್ಷಾಂತರ ಈ ಮದ್ಯವ್ಯಸನದಿಂದ ಮುಕ್ತರಾಗಿದ್ದಾರೆ. ಈ ಶಿಬಿರದಲ್ಲಿ 60 ಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದು, 8 ದಿನಗಳ ಕಾಲ ನಡೆಯುವ ಶಿಬಿರದಿಂದ ಅದರ ಪ್ರತಿಫಲಕ್ಕಾಗಿ ಸಮಾಜ ಮತ್ತು ಮದ್ಯಪಾನಕ್ಕೋಲಗಾದ ಕುಟುಂಬ ಗಳ ಸದಸ್ಯರು ಎದಿರು ನೋಡುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಬೂಕನಕೆರೆ ಗ್ರಾ.ಪಂ ಅಧ್ಯಕ್ಷ ಬಿ. ಆರ್ ಶ್ಯಾಮ್ ಪ್ರಸಾದ್, ಚನ್ನರಾಯಪಟ್ಟಣ ಜಿಲ್ಲಾ ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಜಯರಾಮ್ ತೋಟಿ,ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ,ಶ್ರೀ ಧರ್ಮಸ್ಥಳ ತಾಲೂಕು ಯೋಜನಾಧಿಕಾರಿ ತಿಲಕ್ ರಾಜ್,ತಾ. ಪಂ ಮಾಜಿ ಸದಸ್ಯ ಹುಲ್ಲೆಗೌಡ,ಸಂಘ ಮೇಲ್ವಿಚಾರಕ ಪ್ರಕಾಶ್ ಆಚಾರ್ಯ, ಬಿಜೆಪಿ ಉಪಾಧ್ಯಕ್ಷ ಪ್ರಕಾಶ್, ವಕೀಲ ನಂದೀಶ್, ಜಿಲ್ಲಾ ಜನಜಾಗೃತಿ ಸದಸ್ಯರಾದ ಪ್ರಸನ್ನ, ಪದ್ಮ,ಮುಖಂಡ ಮಂಜುನಾಥ್,ಸೇರಿದಂತೆ ಪ್ರಗತಿಬಂಧು, ಸ್ವ -ಸಹಾಯ ಸಂಘಗಳ ಒಕ್ಕೂಟ ಅಧ್ಯಕ್ಷರು ಸರ್ವಸದಸ್ಯರು ಹಾಗೂ ಸೇವಾ ಪ್ರತಿ ನಿಧಿಗಳು ಬೂಕನಕೆರೆ ವಲಯ ನವಜೀವನ ಸಮಿತಿ ಸದಸ್ಯರು ಸೇರಿದಂತೆ ಉಪಸ್ಥಿತರಿದ್ದರು.

*✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು