ಸಾವಿರಾರು ವರ್ಷ ಇತಿಹಾಸ ವಿರುವ ಆಯುರ್ವೇದ ಪದ್ಧತಿ ಇಂದಿಗೂ ಪ್ರಸ್ತುತ

ವಿಜಯ ಸಂಘರ್ಷ ನ್ಯೂಸ್ 
ಶಿವಮೊಗ್ಗ : ಸಾವಿರಾರು ವರ್ಷ ಇತಿಹಾಸ ವಿರುವ ಆಯುರ್ವೇದ ಪದ್ಧತಿ ಇಂದಿಗೂ ಪ್ರಸ್ತುತ. ಸೊಪ್ಪು, ತರಕಾರಿ ಹಾಗೂ ಔಷಧ ಗುಣವಿರುವ ಪದಾರ್ಥಗಳು ನಮ್ಮ ಜಮೀನು, ತೋಟ ಹಾಗೂ ನಮ್ಮ ಮನೆಗಳಲ್ಲೇ ಸಾಕಷ್ಟು ಇರುತ್ತವೆ. ಆದರೆ ಅವುಗಳ ಗುಣ ಪರಿಚಯ ನಮಗೆ ಸರಿಯಾಗಿ ಇರುವುದಿಲ್ಲ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ವಿಷಾಧ ವ್ಯಕ್ತಪಡಿಸಿದರು.

ಅವರು ಜೆಸಿಐ ಶಿವಮೊಗ್ಗ ವಿವೇಕ ವತಿಯಿಂದ ಆಯೋಜಿಸಲಾಗಿದ್ದ ಉಚಿತ ಯೋಗ ಪ್ರಾಣಯಾಮ, ಧ್ಯಾನ, 'ಆಯುರ್ವೇದದಲ್ಲಿ ಮನೆ ಮದ್ದು' ಏಳು ದಿನದ ವಿಶೇಷ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಹಾಗಾಗಿ ಹಿಂದೆ ಋಷಿಮುನಿಗಳು ಸಾಧುಸಂತರು ಕಾಡುಗಳಲ್ಲಿ ಸಿಗುವ ನಾರು ಬೇರು ಔಷಧಿಗುಣ ಇರುವ ಸಸ್ಯಗಳನ್ನು ಬಳೆಸಿ ನೂರಾರು ವರ್ಷ ಯಾವುದೇ ಕಾಯಿಲೆ ಇಲ್ಲದೆ ಸುಖಕರ ಜೀವನ ನಡೆಸುತ್ತಿದ್ದರು. ಇಂದು ನಮ್ಮ ಬದಲಾದ ಜೀವನ ಶೈಲಿ ಆರೋಗ್ಯ ಪದ್ಧತಿ, ಫಾಸ್ಟ್ ಫುಡ್, ಜಂಕ್ ಫುಡ್ ಮತ್ತು ರಾಸಾಯನಿಕ ಸಂಪಡಿಸಿದ ಅಡುಗೆ ಪದಾರ್ಥಗಳಿಂದ ನಮ್ಮ ಜೀವನ ದುರಸ್ತವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಡಾ. ವಿಜಯಲಕ್ಷ್ಮಿ ಪಾಟೀಲ್ ಮಾತನಾಡಿ, ವಾತಾ ಪಿತ್ತ, ಪ್ರಕೃತಿ, ಆಹಾರ ಪದ್ಧತಿ ಹಾಗೂ ಆಹಾರ ಸೇವನೆ ಮತ್ತು ಸಸ್ಯಗಳಲ್ಲಿ ಔಷಧಿಗುಣ ಹಾಗೂ ಶಿಬಿರಾರ್ಥಿಗಳ ಹಲವಾರು ಸಮಸ್ಯೆಗಳಿಗೆ, ಪ್ರಶ್ನೆಗಳಿಗೆ ಉತ್ತರಿಸಿ, ಒಂದು ವಾರಗಳ ಕಾಲ ಪ್ರತಿಯೊಂದು ಕಾಯಿಲೆ ಗುಣಲಕ್ಷಣ ಹಾಗೂ ಪರಿಹಾರ ಮತ್ತು ಮುನ್ನೆಚ್ಚರಿಕೆಗಳ ಬಗ್ಗೆ ಸವಿಸ್ತಾರವಾಗಿ ವಿವರಿಸುವುದರ ಜೊತೆಗೆ ಯಾವ ಯಾವ ಯೋಗ, ಪ್ರಾಣಯಾಮ ಧ್ಯಾನಗಳು ನಮ್ಮ ಶರೀರಕ್ಕೆ ಅಗತ್ಯ ಎನ್ನುವುದರ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

ಯೋಗ ಶಿಕ್ಷಕರಾದ ಕಾಟನ್ ಜಗದೀಶ್ ಮಾತನಾಡಿ, ನಮ್ಮ ಅಶ್ವತನಗರ 8ನೇ ಕ್ರಾಸ್ ನ ಶಿವಶಕ್ತಿ ಯೋಗ ಮಂದಿರದಲ್ಲಿ ನಿರಂತರವಾಗಿ ಯೋಗದ ಜೊತೆಗೆ ಸಮಾಜಮುಖಿ ಕಾರ್ಯಗಳನ್ನು ಹಾಗೂ ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವುದರ ಮುಖಾಂತರ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದೇವೆ ಎಂದು ನುಡಿದರು. 

ರಾಮಚಂದ್ರಪ್ಪ, ಪ್ರತಿಭಾ ಅಶೋಕ್. ಪ್ರೇಮ್ ಕುಮಾರ. ಮಂಜುಳಾ ಎಸ್.ಟಿ.ಆನಂದ ಹಾಗೂ ಶಿಬಿರಾರ್ಥಿಗಳು ಶಿಬಿರದ ಲಾಭ ಪಡೆದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು