ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಹಣ ಕಾಸು ವಿಚಾರಗಳಲ್ಲಿ ಮಹಿಳೆಯರು ಎಚ್ಚರಿಕೆ ವಹಿಸಬೇಕು. ಮಹಿಳೆಯರಿಗೆ ಹಲವಾರು ರಕ್ಷಣೆಗಳು ಇವೆ ಅವುಗಳನ್ನು ಉಪಯೋಗಿಸಿ ಕೊಳ್ಳುವುದು ಎಲ್ಲಾ ಮಹಿಳೆಯರ ಕರ್ತವ್ಯ ಎಂದು ನ್ಯೂಟೌನ್ ಠಾಣಾ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಭಾರತಿ ಹೇಳಿದರು.
ನಗರದ ಚುಂಚಾದ್ರಿ ಮಹಿಳಾ ವೇದಿಕೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಚಿಂತನೆ ಮಂಥನ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಕೀಲರಾದ ಶೋಭಾ ಮಾತನಾಡಿ, ಮಹಿಳೆಯರಿಗೆ ಆಸ್ತಿ ಹಕ್ಕು ಹಾಗೂ ಮಹಿಳೆಯರಿಗೆ ಉಚಿತ ಕಾನೂನಿನ ವ್ಯವಸ್ಥೆಗಳು ಇದೆ. ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಲು ಕರೆನೀಡಿದರು.
ವೇದಿಕೆಯ ಗೌರವಾಧ್ಯಕ್ಷರಾದ ಅನುರಾಧ ಪಟೇಲ್ ಮಾತನಾಡಿ ಹಬ್ಬಗಳು, ಆಚರಣೆಗಳು, ನರಕ ಚತುರ್ಥಿ ಹಾಗೂ ಬಲಿಪಾಡ್ಯಮಿ ಹಾಗೂ ನರಕ ಚತುರ್ಥಿ ಹಬ್ಬಗಳ ವೈಶಿಷ್ಟ ವಿವರಿಸಿದರು.
ವೇದಿಕೆಯ ಅಧ್ಯಕ್ಷರಾದ ಎಂ.ಎಸ್. ಸುಧಾಮಣಿ ಮಾತನಾಡಿ ಕನ್ನಡ ರಾಜ್ಯೋತ್ಸವದ ಬಗ್ಗೆ ಕನ್ನಡ ನವಂಬರ್ ತಿಂಗಳಿಗೆ ಮಾತ್ರ ಸೀಮಿತವಾಗದೆ ನಂಬರ್ ಒನ್ ಆಗಬೇಕು, ಪ್ರತಿನಿತ್ಯ ಕನ್ನಡದಲ್ಲಿ ಮಾತನಾಡಬೇಕು ಅಲ್ಲದೆ ಬಳಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ವೇದಿಕೆಯ ಪದಾಧಿಕಾರಿ ಗಳು, ನೂರಾರು ಮಹಿಳೆಯರು ಭಾಗವಹಿಸಿದ್ದರು.