ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ನಗರದ ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ಸಂಸ್ಥೆಯು ಮೂರು ವರ್ಷಗಳಿಂದಲೂ ಅನಾಥ ಶ್ರಮ ಮತ್ತು ವೃದ್ದಾಶ್ರಮವನ್ನು ನಡೆಸಿಕೊಂಡು ಬರುತ್ತಿದ್ದು ಜೊತೆಗೆ ವೈಜ್ಞಾನಿಕಾ ಜಾಗೃತಿ ಕಾರ್ಯಕ್ರಮ ಗಳನ್ನು ಆಯೋಜಿಸಲಾಗುತ್ತಿದೆ ಎಂದು ಟ್ರಸ್ಟ್ ಅಧ್ಯಕ್ಷ ಜಿ.ರಾಜು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಟ್ರಸ್ಟ್ ವತಿಯಿಂದ ನೂತನ ಯೋಜನೆ ಯನ್ನು ಅನುಷ್ಠಾನ ಗೊಳಿಸಲು ದಾಪುಗಾಲಿಡಲಾಗುತ್ತಿದೆ. ತಾಲ್ಲೂಕಿ ನಲ್ಲಿರುವ ಸರ್ಕಾರಿ ಶಾಲೆ ಗಳನ್ನು ಅಧ್ಯಯನ ಮಾಡಿ ಸರ್ಕಾರಿ ಶಾಲೆ ಯಲ್ಲಿರುವ ಮಕ್ಕಳ ಆಗತ್ಯತೆಗಳನ್ನು ಮನಗಂಡು ಕಾರುಣ್ಯ ದಾರಿದೀಪ 2024-25 ಎಂಬ ಯೋಜನೆ ಜಾರಿಗೊಳಿಸಲಾಗುತ್ತಿದೆ.
ಈ ಯೋಜನೆಗೆ ತಾಲ್ಲೂಕಿನಲ್ಲಿರುವ 33 ಪ್ರೌಡಶಾಲೆಗಳನ್ನು ಆಯ್ಕೆ ಮಾಡ ಲಾಗಿದ್ದು ಆಯ ಶಾಲೆಯ ನುರಿತ ಶಿಕ್ಷಕರನ್ನು ಪ್ರೇರಕ ಶಿಕ್ಷಕರನ್ನಾಗಿ ಗುರುತಿಸಲಾಗಿದೆ ಎಂದರು.
ನ: 14 ರ ಮಕ್ಕಳ ದಿನಾಚರಣೆಯಂದು ಬೆಳಿಗ್ಗೆ 9.30 ಕ್ಕೆ ಕಾರುಣ್ಯ ದಾರಿದೀಪ 2024-25 ಯೋಜನೆಯನ್ನು ನಗರದ ವಿಐಎಸ್ಎಲ್ ಅತಿಥಿ ಗೃಹ ಸಭಾಂಗಣದಲ್ಲಿ ಶಾಸಕ ಬಿ.ಕೆ. ಸಂಗಮೇಶ್ವರ ಉದ್ಘಾಟಿಸಲಿದ್ದಾರೆ. ನಗರಸಭೆ ಪ್ರಭಾರ ಅಧ್ಯಕ್ಷ ಮಣಿ, ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ನ ಗೌರವಾಧ್ಯಕ್ಷ ಡಾ: ವಿಜಯ್, ಜಿ ಧುಭೈ, ನಿರ್ದೆಶಕರಾದ ರಮೇಶ್ ವಿ.ಟಿ. ಇನ್ನಿತರರು ಪಾಲ್ಗೊಳ್ಳಲಿದ್ದಾರೆ.
ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ರಾಜು ಜಿ.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ತಾಲ್ಲೂಕಿನ 33 ಶಾಲೆಗಳ ಪ್ರೇರಕ ಶಿಕ್ಷಕರು,ವಿದ್ಯಾರ್ಥಿಗಳು ಹಾಗೂ ಮಾರ್ಗದರ್ಶಕರು ಪಾಲ್ಗೊಳ್ಳಲಿದ್ದು ಇವರೊಂದಿಗೆ ಸಂವಾದ ಕಾರ್ಯಕ್ರಮ ವನ್ನು ಕೂಡ ಹಮ್ಮಿಕೊಳ್ಳಲಾಗಿದೆ. ಯೋಜನೆಯ ಮಾಹಿತಿ ಮತ್ತು ಮಾರ್ಗದರ್ಶಕರಾಗಲು ಇಚ್ಛಿಸುವರು ಕಾರ್ಯಕ್ರಮಕ್ಕೆ ಆಗಮಿಸಲು ಮನವಿ ಮಾಡಿದ್ದಾರೆ.