ಮಕ್ಕಳಿಗೆ ಶಿಕ್ಷಣದ ಜೊತೆಯಲ್ಲಿ ಮಾನವೀಯ ಮೌಲ್ಯಗಳನ್ನು ಬೆಳಸಬೇಕು: ಮುರಿಗೆಣ್ಣ ದೇಸಾಯಿ

ವಿಜಯ ಸಂಘರ್ಷ ನ್ಯೂಸ್ 

( ಶಿವು ರಾಠೋಡ್ ಹುಣಸಗಿ)

ಹುಣಸಗಿ: ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ನೀಡುವ ಕೆಲಸ ಶಾಲೆ ಮತ್ತು ಮನೆಗಳಲ್ಲಿ ಆಗಬೇಕಿದೆ. ಮಕ್ಕಳಲ್ಲಿ ಮಾನವೀಯ ಮೌಲ್ಯ ಗಳನ್ನು ಬೆಳಸಬೇಕು ಅವರು ನಮ್ಮ ದೇಶದ ಆಸ್ತಿ ಎಂದು ಮುರಿಗೆಣ್ಣ ದೇಸಾಯಿ ಹೇಳಿದರು.

ಪಟ್ಟಣದ ಸ್ಪಂದನ ಪಬ್ಲಿಕ್ ಸ್ಕೂಲ್‌ ನಲ್ಲಿ ಹಮ್ಮಿಕೊಂಡಿದ್ದ ಜವಾಹ‌ರ್ ಲಾಲ್ ನೆಹರು ಅವರ ಜಯಂತಿಯ ಅಂಗವಾಗಿ ಅವರ ಭಾವಚಿತಕ್ಕೆ ವಿಶೇಷ ಪೂಜೆ ಸಲ್ಲಿಸಿ, ಮಕ್ಕಳ ದಿನಾಚರಣೆ ಕಾರ್ಯಕ್ರಮದ ಕುರಿತು ಮಾತನಾಡಿದರು, 

ಪ್ರತಿಯೊಬ್ಬರು ದೇಶದ ಅಭಿವೃದ್ಧಿಯ ಚಿಂತನೆಯನ್ನು ಮಾಡಬೇಕು. ಭವ್ಯ ಭಾರತದ ನಿರ್ಮಾಣಕ್ಕಾಗಿ ಚಿಕ್ಕ ವಯಸ್ಸಿನಲ್ಲಿಯೆ ಮಕ್ಕಳಿಗೆ ದೇಶ ಪ್ರೇಮವನ್ನು ಬೆಳೆಸುವ ಕಾರ್ಯ ಶಿಕ್ಷಕರು ಹಾಗೂ ಪಾಲಕರಿಂದ ಆಗಬೇಕಾಗಿದೆ ಎಂದು ಹೇಳಿದರು.

ಶಾಲಾ ಹಿರಿಯ ಶಿಕ್ಷಕ ರಾಮಣ್ಣ ಹುಗಾರ ಮಾತನಾಡಿ,ದೇಶ ಕಂಡ ಮಹಾನ್ ವ್ಯಕ್ತಿ ಜವಾಹರಲಾಲ ನೇಹರು. ಅವರು ದೇಶದ ಅಭಿವೃದ್ಧಿಗೆ ತಮ್ಮದೆ ಆದ ಸೇವೆಯನ್ನು ಸಲ್ಲಿಸಿದ್ದಾರೆ. ಮಕ್ಕಳನ್ನು ದೇವರ ರೂಪದಲ್ಲಿ ಕಾಣುತ್ತಿದ್ದರು. ಮಕ್ಕಳ ಮೇಲಿದ್ದ ಅತಿಯಾದ ಪ್ರೀತಿಯಿಂದಾಗಿ ಇಂದು ದೇಶಾದ್ಯಾಂತ ಅವರ ಹುಟ್ಟು ಹಬ್ಬವನ್ನು ಮಕ್ಕಳ ದಿನಚಾರಣೆ ಎಂದು ಆಚರಣೆ ಮಾಡುತ್ತಿವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹಲವಾರು ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟ ಗಾರರ, ಸಮಾಜ ಸುಧಾರಕರ, ವಚನಕಾರರು, ಮಹಾನ್ ಸಾಧಕರ ಛದ್ಮವೇಷವನ್ನು ತೊಟ್ಟು ಭಾಗವಹಿಸಿದ್ದರು.

ಕಾರ್ಯಕ್ರಮದ ನಂತರ ಎಲ್ಲಾ ಮಕ್ಕಳಿಗೆ ನೋಟಬುಕ್ಸ್ ಹಾಗೂ ಪೆನ್ನಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರಾದ ಸುಭಾಸ ಪವಾರ, ಶಾರದಾದೇವಿ, ಪ್ರಮೀಳಾ ನೂಲಿನ್, ವರಸಂದ್ಯಾ, ಆಸ್ಮಾ, ಜಯಶ್ರೀ, ಪ್ರಿಯಾಂಕ, ಸಂಧ್ಯಾ, ಗೌಸಿಯಾ ಬಾನು, ಪ್ರೇಮಾ, ಹಾಗೂ ವಿದ್ಯಾರ್ಥಿಗಳು ಇದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು