ರಾಷ್ಟ್ರನಿರ್ಮಾಣದಲ್ಲಿ ಯುವ ಶಕ್ತಿಯ ಕೊಡುಗೆ ಅನನ್ಯ:ಡಾ||ಪರಮೇಶ್ವರ್ ಶಿಗ್ಗಾಂವ್

ವಿಜಯ ಸಂಘರ್ಷ ನ್ಯೂಸ್ 

ಶಿವಮೊಗ್ಗ: ರಾಷ್ಟ್ರ ನಿರ್ಮಾಣದಲ್ಲಿ ಯುವ ಶಕ್ತಿಯ ಕೊಡುಗೆ ಅನನ್ಯ ವಾದುದೆಂದು ರೋಟರಿ ಪೂರ್ವ ಎಜುಕೇಷನಲ್ & ಛಾರಿಟಬಲ್ ಟ್ರಸ್ಟ್ನ ಉಪಾಧ್ಯಕ್ಷ ರೊ. ಡಾ|| ಪರಮೇಶ್ವರ್ ಡಿ. ಶಿಗ್ಗಾಂವ್ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. 

ಅವರು ರೋಟರಿ ಪೂರ್ವ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಏರ್ಪಡಿಸ ಲಾಗಿದ್ದ, ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಸ್ತುತ ಭಾರತದಲ್ಲಿ ಯುವ ಜನರು ಅಪಾರ ಸಂಖ್ಯೆಯಲ್ಲಿದ್ದು, ಯುವ ಶಕ್ತಿ ನವ ಭಾರತದ ನಿರ್ಮಾಣಕ್ಕೆ ಪ್ರಮುಖ ವಾಗಿರುತ್ತದೆಂದು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಹೋರಾಟದ ಮನೋಭಾವದ ಜೊತೆಗೆ ರಾಷ್ಟ್ರ ನಿರ್ಮಾಣ ದಲ್ಲಿ ನಮ್ಮ ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನದಂತೆ ನಡೆಯುವುದು ಕೂಡ ಅವಶ್ಯಕತೆ ಇದೆ ಎಂದು ತಿಳಿಸಿದರು.

ರೋಟರಿ ಪೂರ್ವ ಅಧ್ಯಕ್ಷ ರೊ. ಅರುಣ್ ದೀಕ್ಷಿತ್ ಮಾತನಾಡಿ, ಶಿಕ್ಷಣದ ಜೊತೆಗೆ ಮೌಲ್ಯಾಧಾರಿತ ಶಿಕ್ಷಣದ ಕೊರತೆ ಪ್ರಸ್ತುತ ದಲ್ಲಿದ್ದು, ಈ ನಿಟ್ಟಿನಲ್ಲಿ ಶಿಕ್ಷಕರು ವಿದ್ಯಾರ್ಥಿ ಗಳಲ್ಲಿ ಸಂಸ್ಕಾರಯುಕ್ತ ಮತ್ತು ಮೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ಕೊಡಬೇಕೆಂದು ಕರೆ ನೀಡಿದರು.

ಎಜುಕೇಷನಲ್ & ಛಾರಿಟಬಲ್ ಟ್ರಸ್ಟ್ನ ಕಾರ್ಯದರ್ಶಿ ರೊ.ರಾಮ ಚಂದ್ರ ಎಸ್.ಸಿ., ಮಾತನಾಡಿ, ಪ್ರಸ್ತುತ ಮಾಹಿತಿ ತಂತ್ರಜ್ಞಾನ ಈ ಯುಗದಲ್ಲಿ ವಿದ್ಯಾಥಿಗಳು ತಮ್ಮ ಹಕ್ಕಿನ ಬಗ್ಗೆ ಹೆಚ್ಚಿನ ಅರಿವನ್ನು ಹೊಂದಬೇಕೆoದು, ನಾನಾ ಕಾರಣದಿಂದ ಭ್ರೂಣ ಹತ್ಯೆ ಯಂತ ಹೀನ ಘಟನಾವಳಿಗಳು ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಹಕ್ಕು ಮತ್ತು ಕಾನೂನಿನ ಅರಿವು ಮೂಡಿಸು ವುದು ಪ್ರತಿಯೊಬ್ಬರ ಕರ್ತವ್ಯ ವೆಂದು ಮಕ್ಕಳಿಗೆ ಸಹಜವಾಗಿ ಬದುಕುವ ಹಕ್ಕು, ರಕ್ಷಣೆಯ ಹಕ್ಕು, ಭಾಗವಹಿಸುವ ಹಕ್ಕು & ವಿಕಸನ ಹೊಂದುವ 
ಹಕ್ಕುಗಳನ್ನು ಸಂವಿಧಾನ   ಅಡಿಯಲ್ಲಿಯೇ ಪ್ರದತ್ತವಾಗಿರುವ ಪ್ರಯುಕ್ತ ಈ ಒಂದು ಅರಿವನ್ನು ವಿದ್ಯಾರ್ಥಿಗಳ ದೆಸೆಯಲ್ಲಿ ಮೂಢಿಸುವುದು ಅವಶ್ಯಕವಾಗಿರು ತ್ತದೆಂದು ಅಭಿಪ್ರಾಯ ತಿಳಿಸಿದರು.

ಮಕ್ಕಳ ತಜ್ಞ ಡಾ|| ಹರ್ಷ ಹೆಚ್.ಸಿ., ಇವರು ಮಾತನಾಡಿ, ಪ್ರತಿಯೊಬ್ಬ ಮಕ್ಕಳು ದೈನಂದಿನ ಶುಚಿತ್ವದ ಮತ್ತು ಆರೋಗ್ಯದ ಕಡೆಗೆ ಹೆಚ್ಚು ಗಮನ ಕೊಡಬೇಕೆಂದು ಕರೆ ನೀಡಿದರು.

 ರೋಟರಿ ಕಾರ್ಯದರ್ಶಿ ರೊ. ಶಶಿಕಾಂತ್ ನಾಡಿಗ್ ಮಕ್ಕಳ ದಿನಾಚರಣೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುತ್ತ, ರಾಷ್ಟ್ರದ ಮೊದಲ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದ ಜವಹರಲಾಲ್ ನೆಹರು ಅವರು ಮಕ್ಕಳ ಬಗ್ಗೆ ಹೊಂದಿದ ಪ್ರೀತಿ ಮತ್ತು ಸದಾಭಿಪ್ರಾಯವನ್ನು ಸಭೆಗೆ ಮನವರಿಕೆ ಮಾಡಿಕೊಟ್ಟರು.

ಸಮಾರಂಭದಲ್ಲಿ ಟ್ರಸ್ಟ್ನ ಉಪಾಧ್ಯಕ್ಷ ರೊ. ಸುರೇಶ್ ಕುಮಾರ್ ಬಿ., ಖಜಾಂಚಿ ರೊ. ವಿಜಯ್ ಕುಮಾರ್, ಜಂಟಿ ಕಾರ್ಯದರ್ಶಿ ಗಳಾದ ರೊ. ನಾಗವೇಣಿ ಎಸ್.ಆರ್. & ನಾಗರಾಜ್ ಎಂ.ಪಿ., ಕಾರ್ಯದರ್ಶಿ, ಲತಾ ಸೋಮಶೇಖರ್, ಮಾಜಿ ಅಧ್ಯಕ್ಷೆ ಬಿಂದು ವಿಜಯ್ ಕುಮಾರ್, ಪ್ರಾಂಶುಪಾಲ ಸೂರ್ಯನಾರಾಯಣ್ ಆರ್. ಉಪಸ್ಥಿತರಿದ್ದರು. 

ಪ್ರದೀಪ್ ಕುಮಾರ್ ಸ್ವಾಗತಿಸಿ, ರೂಪ ರಾವ್ ನಿರೂಪಿಸಿದರೆ,ರೇಖಾ ಎಂ. ವಂದಿಸಿದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು